Advertisement

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

02:07 PM Nov 23, 2024 | Team Udayavani |

ಪುಂಜಾಲಕಟ್ಟೆ: ಪ್ರಸಕ್ತ ಕಂಬಳ ಋತುವಿನ ಪ್ರಥಮ ಕಂಬಳ ಬಂಟ್ವಾಳ ತಾಲೂಕು ಎಲಿಯನಡುಗೋಡು ಗ್ರಾಮದ ಕೊಡಂಗೆ ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ಸಮಿತಿ ವತಿಯಿಂದ ನಡೆಯುವ ವೀರ-ವಿಕ್ರಮ  ಜೋಡುಕರೆ ಬಯಲು ಕಂಬಳಕ್ಕೆ ನ.23ರ ಶನಿವಾರ ಚಾಲನೆ ನೀಡಲಾಯಿತು.

Advertisement

ಶ್ರೀ ಕ್ಷೇತ್ರ ಪೂಂಜದ ಪ್ರ.ಅರ್ಚಕ ಪ್ರಕಾಶ್ ಆಚಾರ್ಯ ಕಂಬಳ ಕರೆಯನ್ನು ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣರಾದ ಕೃಷ್ಣ ಪ್ರಸಾದ್ ಆಚಾರ್ಯ ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರ ಕುಡುಂಬೂರುಗುತ್ತು ಅನುವಂಶಿಕ ಆಡಳಿತ ಮೋಕ್ತೆಸರರು ಗುತ್ತಿನಾರ್ ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಸಿದ್ದಕಟ್ಟೆ  ವೈದ್ಯ ಡಾ.ಸುದೀಪ್ ಕುಮಾರ್ ಜೈನ್, ಸಿದ್ದಕಟ್ಟೆ ಪ್ರಾ.ಕೃ.ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಮುಂಬಯಿ ಉದ್ಯಮಿಗಳಾದ ಎಲ್ಲೂರು ಅನಿಲ್ ಶೆಟ್ಟಿ ಓಡಿಪರಗುತ್ತು, ನಿತ್ಯಾನಂದ ಪೂಜಾರಿ ಕೆಂತಲೆ, ಹರೀಶ್ ಶೆಟ್ಟಿ ಕಾಪು, ಚಂದ್ರಹಾಸ ಶೆಟ್ಟಿ ಮುಂಬಯಿ, ಭಾಸ್ಕರ ಶೆಟ್ಟಿ, ವಿಜಯ ಶೆಟ್ಟಿ, ಶೇಖರ ಶೆಟ್ಟಿ,   ಲೊರೆಟ್ಟೊಹಿಲ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ರಾಯಿ ಶೀತಲ ರಾಜೇಶ್ ಶೆಟ್ಟಿ, ಪದ್ಮರಾಜ್ ಬಲ್ಲಾಳ್ ಮಾವಂತೂರು, ಸ್ಥಳದಾನಿಗಳಾದ ಓಬಯ್ಯ ಪೂಜಾರಿ ಹಾಗೂ ಕೊರಗಪ್ಪ ಪೂಜಾರಿ, ವಿಜಯ ಫೆರ್ನಾಂಡಿಸ್, ಸಮಿತಿ ಪದಾಧಿಕಾರಿಗಳಾದ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಶಶಿಧರ ಶೆಟ್ಟಿ ಕಲ್ಲಾಪು, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಸುರೇಶ್ ಶೆಟ್ಟಿ ಕುತ್ಲೋಡಿ, ಸುರೇಶ್ ಶೆಟ್ಟಿ ಸಿದ್ದಕಟ್ಟೆ,ಸಂದೇಶ್ ಶೆಟ್ಟಿ ಪೊಡುಂಬ,ಕಿರಣ್ ಕುಮಾರ್ ಮಂಜಿಲ, ಚಂದ್ರಶೇಖರ ಕೊಡಂಗೆ,ವಸಂತ ಶೆಟ್ಟಿ ಕೇದಗೆ, ಉಮೇಶ್ ಶೆಟ್ಟಿ ಕೊನೆರೊಟ್ಟುಗುತ್ತು, ಬಾಬು ರಾಜೇಂದ್ರ ಶೆಟ್ಟಿ ಆಲದಪದವು, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಸುಧಾಕರ ಚೌಟ, ಜನಾರ್ದನ ಬಂಗೇರ ತಿಮ್ಮರಡ್ಡ, ಉಮೇಶ್ ಹಿಂಗಾಣಿ, ಬಿ.ಶಿವಾನಂದ ರೈ,  ಎಲಿಯಾಸ್ ಸಾಂಕ್ಟೀಸ್, ತೀರ್ಪುಗಾರರ ಸಂಚಾಲಕ ವಿಜಯ್ ಕುಮಾರ್ ಕಂಗಿನ ಮನೆ  ಮತ್ತಿತರರಿದ್ದರು.

ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಸ್ವಾಗತಿಸಿದರು. ಕಿಶೋರ್ ಭಂಡಾರಿ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next