Advertisement

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

02:56 AM Nov 25, 2024 | Team Udayavani |

ಬಂಟ್ವಾಳ: ಕಳೆದ ಕೆಲವು ದಿನಗಳ ಹಿಂದೆ ಬಿ.ಸಿ. ರೋಡಿನ ಮೊಡಂಕಾಪು ಪರಿಸರದಲ್ಲಿ ರೈಲ್ವೇ ಇಲಾಖೆಯ ವಿದ್ಯುತ್‌ ಕೇಬಲ್‌ಗ‌ಳ ಕಳ್ಳತನ ಪ್ರಕರಣಗಳು ನಡೆದಿದ್ದು, ಇದೀಗ ರೈಲ್ವೇ ಸಂರಕ್ಷಣ ಪಡೆ (ಆರ್‌ಪಿಎಫ್‌) ಕಳ್ಳರ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದೆ.

Advertisement

ದೊಡ್ಡ ಮೊತ್ತದ ಕೇಬಲ್‌ ಕಳ್ಳತನ ನಡೆದಿದೆ ಎನ್ನಲಾಗಿದ್ದು, ಆದರೆ ಎಷ್ಟು ಮೊತ್ತ ಎನ್ನುವುದು ಇನ್ನೂ ಕೂಡ ಅಧಿಕೃತವಾಗಿ ಲಭ್ಯವಾಗಿಲ್ಲ. ಪ್ರಕರಣವನ್ನು ಬೇಧಿಸಿದ ಬಳಿಕವೇ ಕಳ್ಳತನ ವಿವರ ಸಿಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.

ರೈಲ್ವೇ ಸಂರಕ್ಷಣ ಪಡೆ ಕೇಂದ್ರ ರೈಲ್ವೇ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರೈಲ್ವೇ ಆಸ್ತಿ ಮತ್ತು ಪ್ರಯಾಣಿಕರ ರಕ್ಷಣೆ ಹಾಗೂ ಭದ್ರತೆಯನ್ನು ನಿರ್ವಹಿಸುತ್ತದೆ. ಈ ಪಡೆಯ ಒಂದಷ್ಟು ಸಿಬಂದಿ ಬಿ.ಸಿ .ರೋಡು ಪರಿಸರದಲ್ಲಿ ತನಿಖಾ ಕಾರ್ಯದಲ್ಲಿ ತೊಡಗಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next