Advertisement

ಹಲ್ಮಿಡಿ ಗ್ರಾಮದಲ್ಲಿ ತಹಶೀಲ್ದಾರ್‌ ವಾಸ್ತವ್ಯ; 30 ಅರ್ಜಿ ಇತ್ಯರ್ಥ

03:54 PM Feb 21, 2021 | Team Udayavani |

ಬೇಲೂರು: ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ತಾಲೂಕು ಆಡಳಿತ ಶನಿವಾರ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಖಾತೆ ಬದಲಾವಣೆ, ಅಕ್ರಮ ಮದ್ಯ ಮಾರಾಟ, ಮನೆ ಹಕ್ಕುಪತ್ರ, ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳು ಗ್ರಾಮೀಣ ಜನರಿಂದ ಕೇಳಿ ಬಂದವು.

Advertisement

ಅಹವಾಲು ಸ್ವೀಕರಿಸಿದ ತಹಶೀಲ್ದಾರ್‌ ನಟೇಶ್‌, ಅಕ್ರಮ ಮನೆ ನಿರ್ಮಾಣ ಮಾಡಿದ್ದ ಕೆಲವರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿದರು. ಸರ್ಕಾರ ಅಧಿಕಾರಿಗಳ ನಡಿಗೆ ಹಳ್ಳಿ ಕಡೆಗಳಿಗೆ ಎಂಬ ಮಹತ್ವಪೂರ್ಣ ಕಾರ್ಯಕ್ರಮ ಹಮ್ಮಿ ಕೊಂಡಿದ್ದು, ತಹಶೀಲ್ದಾರ್‌ ಹಲ್ಮಿಡಿ ಗ್ರಾಮದಲ್ಲಿ ಪ್ರಥಮ ವಾಸ್ತವ್ಯ ನಡೆಸಿದರು.

ನಾರಾಯಣಪುರ ಗ್ರಾಪಂ ವ್ಯಾಪ್ತಿಯ ಹೊಸಮನೆಹಳ್ಳಿ, ಎಸ್‌.ಹೊಸಹಳ್ಳಿ, ಹಲ್ಮಿಡಿ, ದಾಸಗೊಡನಹಳ್ಳಿ, ಕೆಳೆಹಳ್ಳಿ, ಯಕಶೆಟ್ಟಿಹಳ್ಳಿ, ಚನ್ನಪುರ, ಕರಗಡ, ದುಮ್ಮೇನಹಳ್ಳಿ, ಬಂದಹಳ್ಳಿ, ಶೆಟ್ಟಿಗೆರೆ ಮತ್ತು ಬೆಣ್ಣೂರು ಗಡಿ ಗ್ರಾಮದ ನೂರಾರು ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಎನ್‌.ವಿ.ನಟೇಶ್‌ ಮಾತನಾಡಿ, ಗ್ರಾಮ ವಾಸ್ತವ್ಯದಲ್ಲಿ ಹಕ್ಕುಪತ್ರಗಳ ಬಗ್ಗೆ ಹೆಚ್ಚಿನ ಅರ್ಜಿಗಳು ಬಂದಿವೆ. ಕಂದಾಯ, ಪಂಚಾಯ್ತಿ ಮೂಲಕ ನೀಡುವ ಹಕ್ಕುಪತ್ರಗಳ ಬಗ್ಗೆ ಪರಿಶೀಲನೆ ನಡೆಸಿ, ಶೀಘ್ರವೇ ನೀಡಲಾಗುತ್ತದೆ ಎಂದು ಹೇಳಿದರು.

ತಾಪಂ ಇಒ ರವಿಕುಮಾರ್‌ ಮಾತನಾಡಿ, ಗ್ರಾಮದಲ್ಲಿ ಸ್ವಚ್ಛತೆ, ಕಸ ವಿಲೇವಾರಿ, ಕುಡಿಯುವ ನೀರು, ರಸ್ತೆ ಚರಂಡಿ ಸೇರಿ ಉದ್ಯೋಗ ಖಾತ್ರಿ ಯೋಜನೆಗಳ ಸೌಲಭ್ಯಗಳನ್ನು ಬಗ್ಗೆ ಸಾರ್ವಜನಿಕರು ಅಯಾ ಅಧಿಕಾರಿಗಳಲ್ಲಿ ಸಮಾಲೋಚನೆ ನಡೆಸಿ ಸೂಕ್ತ ಪರಿಹಾರ ಪಡೆಯಬಹದು ಎಂದು ತಿಳಿಸಿದರು.

Advertisement

ಅಕ್ರಮ ಮದ್ಯ ಮಾರಾಟ: ಕೋಡನಹಳ್ಳಿ ಗ್ರಾಮದಲ್ಲಿ ತೆರೆಯಲಾಗಿರುವ ಮದ್ಯದ ಅಂಗಡಿತೆರವು ಮಾಡಬೇಡಬೇಕೆಂದು ಗ್ರಾಮಸ್ಥರುಒತ್ತಾಯಿಸಿದ್ರೆ, ನಾರಾಯಣಪುರ ಗ್ರಾಮದಲ್ಲಿನಿತ್ಯ ಅಕ್ರಮ ಮದ್ಯ ಮಾರಾಟವಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ತಹಶೀಲ್ದಾರ್‌ ನಟೇಶ್‌ ಸ್ಥಳದಲ್ಲೇ ಇದ್ದ ಅಬಕಾರಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

ತಹಶೀಲ್ದಾರ್‌ರಿಂದ ಭರವಸೆ: ಗ್ರಾಮಸ್ಥರಾದ ದಯಾನಂದ್‌ ಮಾತನಾಡಿ, ಯಗಚಿ ಜಲಾಶಯದ ನಿರ್ಮಾಣಕ್ಕಾಗಿ ಹಲ್ಮಿಡಿ ಗ್ರಾಮದ ಸುತ್ತಲಿನ ರೈತರು ಜಮೀನು, ಮನೆ ಕಳೆದುಕೊಂಡು ನಿರಾಶ್ರಿತರಾಗಿ ಹಲವು ದಶಕಗಳೇ ಕಳೆದಿದ್ದರೂ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಅಹವಾಲನ್ನು ನೀಡಿದರು. ಈ ಬಗ್ಗೆ ಯಗಚಿ ಯೋಜನೆಯಅಧಿಕಾರಿಗಳೊಂದಿಗೆ ಮಾತನಾಡಿ, ಪರಿಶೀಲನೆನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ಭರವಸೆ ನೀಡಿದರು.

ಗಾಮ ವಾಸ್ತವ್ಯದಲ್ಲಿ 110 ಅರ್ಜಿ ಸಲ್ಲಿಸಿದ್ದು,

ಅದರಲ್ಲಿ 30 ಅನ್ನು ತಹಶೀಲ್ದಾರ್‌ ನಟೇಶ್‌ ಸ್ಥಳದಲ್ಲೇ ಬಗೆಹರಿಸಿದರು. ನಾರಾಯಣಪುರ ಗ್ರಾಪಂ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ನಾಗೇಶ್‌, ವೃತ್ತ ನಿರೀಕ್ಷಕ ಶ್ರೀಕಾಂತ್‌, ಕ್ಷೇತ್ರಶಿಕ್ಷಣಾಧಿಕಾರಿ ಲೋಕೇಶ್‌, ಅಭಿವೃದ್ಧಿ ಅಧಿಕಾರಿ ರಾಜಶೇಖರ, ಲೋಕೋಪಯೋಗಿಎಂಜಿನಿಯರ್‌ ಪುಟ್ಟರಾಜಪ್ಪ, ಆಹಾರ ಅಧಿಕಾರಿ ಮಂಜುನಾಥ್‌, ಕೃಷಿ ಅಧಿಕಾರಿ ಪ್ರಸನ್ನ, ಎಪಿಎಂಸಿ ಕಾರ್ಯದರ್ಶಿ ಮಧು, ಸಹಾಯಕ ಕೃಷಿ ನಿರ್ದೇಶಕ ಪರಮೇಶ್‌ ಉಪಸ್ಥಿತರಿದ್ದರು.

 

ಡಿ.ಬಿ.ಮೋಹನ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next