Advertisement

ಇಂಗ್ಲೆಂಡ್‌ ಟಿ20 ವಿಶ್ವಕಪ್‌ ಕ್ರಿಕೆಟ್‌ ತಂಡಕ್ಕೆ ಬೇರ್‌ಸ್ಟೊ ಬದಲು ಅಲೆಕ್ಸ್‌ ಹೇಲ್ಸ್‌

09:48 PM Sep 08, 2022 | Team Udayavani |

ಲಂಡನ್‌: ಇಂಗ್ಲೆಂಡ್‌ ಟಿ20 ವಿಶ್ವಕಪ್‌ ಕ್ರಿಕೆಟ್‌ ತಂಡದಲ್ಲಿ ಒಂದು ಬದಲಾವಣೆ ಸಂಭವಿಸಿದೆ. ವಿಕೆಟ್‌ ಕೀಪರ್‌-ಬ್ಯಾಟರ್‌ ಜಾನಿ ಬೇರ್‌ಸ್ಟೊ ಎಡಗಾಲಿನ ಪಾದದ ನೋವಿನಿಂದಾಗಿ ಕೂಟದಿಂದ ಬೇರ್ಪಡಲಿದ್ದು, ಇವರ ಬದಲು ಅಲೆಕ್ಸ್‌ ಹೇಲ್ಸ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

Advertisement

2019ರ ಏಕದಿನ ವಿಶ್ವಕಪ್‌ ವೇಳೆ ತಂಡದಲ್ಲಿದ್ದ ಅಲೆಕ್ಸ್‌ ಹೇಲ್ಸ್‌, ಡ್ರಗ್ಸ್‌ ವಿವಾದದಲ್ಲಿ ಸಿಲುಕಿ ಸ್ಥಾನ ಕಳೆದುಕೊಂಡಿದ್ದರು. ಅಂದಿನಿಂದ “ಕಮ್‌ಬ್ಯಾಕ್‌’ಗಾಗಿ ಕಾಯುತ್ತಲೇ ಇದ್ದರು. ಈಗ ಕಾಲ ಕೂಡಿಬಂದಿದೆ.

ಟಿ20 ಲೀಗ್‌ಗಳಲ್ಲಿ ಹೇಲ್ಸ್‌ ಉತ್ತಮ ಮಟ್ಟದ ನಿರ್ವಹಣೆ ತೋರುತ್ತ ಬಂದಿದ್ದರು. ಈ ಅವಧಿಯಲ್ಲಿ ಆಡಿದ 60 ಟಿ20 ಪಂದ್ಯಗಳಲ್ಲಿ 1,644 ರನ್‌ ರಾಶಿ ಹಾಕಿದ್ದಾರೆ.

ಇಂಗ್ಲೆಂಡ್‌ ತಂಡ: ಜಾಸ್‌ ಬಟ್ಲರ್‌ (ನಾಯಕ), ಮೊಯಿನ್‌ ಅಲಿ, ಅಲೆಕ್ಸ್‌ ಹೇಲ್ಸ್‌, ಹ್ಯಾರಿ ಬ್ರೂಕ್‌, ಸ್ಯಾಮ್‌ ಕರನ್‌, ಕ್ರಿಸ್‌ ಜೋರ್ಡನ್‌, ಲಿಯಮ್‌ ಲಿವಿಂಗ್‌ಸ್ಟೋನ್‌, ಡೇವಿಡ್‌ ಮಲಾನ್‌, ಆದಿಲ್‌ ರಶೀದ್‌, ಫಿಲ್‌ ಸಾಲ್ಟ್, ಬೆನ್‌ ಸ್ಟೋಕ್ಸ್‌, ರೀಸ್‌ ಟಾಪ್ಲಿ, ಡೇವಿಡ್‌ ವಿಲ್ಲಿ, ಕ್ರಿಸ್‌ ವೋಕ್ಸ್‌, ಮಾರ್ಕ್‌ ವುಡ್‌.

Advertisement

Udayavani is now on Telegram. Click here to join our channel and stay updated with the latest news.

Next