Advertisement
ಇಫ್ತಿಕಾರ್ ಅವರ ಆಟವನ್ನು ಗಮನಿಸಿದಾಗ ಪಾಕಿಸ್ಥಾನ ಮೂರನೇ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿತ್ತು. ಆದರೆ ಅಂತಿಮ ಓವರ್ ಎಸೆದ ಜೇಮ್ಸ್ ನೀಶಮ್ ಅವರು ಅಪಾಯಕಾರಿ ಇಫ್ತಿಕಾರ್ ಸಹಿತ ಎರಡು ವಿಕೆಟ್ ಹಾರಿಸಿದ್ದರಿಂದ ಪ್ರವಾಸಿ ತಂಡ 4 ರನ್ನುಗಳ ಅಮೋಘ ಜಯ ದಾಖಲಿಸಿತು. ನೀಶಮ್ ಅವರ ನಿಖರ ದಾಳಿಯಿಂದಾಗಿ ಪಾಕಿಸ್ಥಾನ 159 ರನ್ನಿಗೆ ಆಲೌಟಾಗಿತ್ತು. ಈ ಮೊದಲು ನಾಯಕ ಟಾಮ್ ಲಾಥಂ ಅವರ ಅರ್ಧಶತಕದ ಬಲದಿಂದ ನ್ಯೂಜಿಲ್ಯಾಂಡ್ 5 ವಿಕೆಟಿಗೆ 163 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.
ಇಫ್ತಿಕಾರ್ ಅವರ ಸ್ಫೋಟಕ ಆಟ ಈ ಪಂದ್ಯದ ವಿಶೇಷವಾಗಿತ್ತು. ಸಿಕ್ಸರ್‌ಗಳ ಸುರಿಮಳೆಗೈದ ಅವರು ಕೇವಲ 24 ಎಸೆತಗಳಲ್ಲಿ 60 ರನ್ ಸಿಡಿಸಿದ್ದರು. ಆರು ಸಿಕ್ಸರ್ ಮತ್ತು ಮೂರು ಬೌಂಡರಿ ಬಾರಿಸಿದ್ದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಈ ಮೊದಲು ಪಾಕಿಸ್ಥಾನ ಮೊದಲ 15 ಓವರ್ ಮುಗಿದಾಗ 88 ರನ್ನಿಗೆ 7 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಇಫ್ತಿಕಾರ್ ಭರ್ಜರಿಯಾಗಿ ಆಡಿದ್ದರೂ ತಂಡ ಗೆಲುವಿನಿಂದ ದೂರವೇ ಉಳಿಯಿತು.
Related Articles
ನ್ಯೂಜಿಲ್ಯಾಂಡಿನ ಎಂಟು ಪ್ರಮುಖ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿರುವ ಕಾರಣ ಅವರ ಅನುಪಸ್ಥಿತಿ ಯಲ್ಲಿ ಪ್ರವಾಸಿ ತಂಡ ಪಾಕಿಸ್ಥಾನವನ್ನು ಎದುರಿಸುತ್ತಿದೆ. ನಾಯಕ ಟಾಮ್ ಲಾಥಂ ಅವರ ಅರ್ಧಶತಕದಿಂದ ತಂಡ 5 ವಿಕೆಟಿಗೆ 163 ರನ್ ಗಳಿಸುವಂತಾಯಿತು. 49 ಎಸೆತ ಎದುರಿಸಿದ ಅವರು 64 ರನ್ ಹೊಡೆದಿದ್ದರು.
Advertisement
ಸಂಕ್ಷಿಪ್ತ ಸ್ಕೋರು: ನ್ಯೂಜಿಲ್ಯಾಂಡ್ 5 ವಿಕೆಟಿಗೆ 163 (ಲಾಥಂ 64, ಡ್ಯಾರಿಲ್ ಮಿಚೆಲ್ 33, ಶಾಹೀನ್ ಅಫ್ರಿದಿ 33ಕ್ಕೆ 2, ಹ್ಯಾರಿಸ್ ರಾಫ್ 31ಕ್ಕೆ 2); ಪಾಕಿಸ್ಥಾನ 159 (ಇಫ್ತಿಕಾರ್ ಅಹ್ಮದ್ 60, ಫಾಹೀಮ್ ಅಶ್ರಫ್ 27, ಜೇಮ್ಸ್ ನೀಶಮ್ 38ಕ್ಕೆ 3, ಆ್ಯಡಂ ಮಿಲೆ° 37ಕ್ಕೆ 2, ರಚಿನ್ ರವೀಂದ್ರ 28ಕ್ಕೆ 2).