Advertisement

T 20 ಅಭ್ಯಾಸ ಪಂದ್ಯ; ಆಸೀಸ್‌ಗೆ ಆಘಾತವಿಕ್ಕಿದ ವಿಂಡೀಸ್‌

11:00 PM May 31, 2024 | Team Udayavani |

ಪೋರ್ಟ್‌ ಆಫ್ ಸ್ಪೇನ್‌ (ಟ್ರಿನಿಡಾಡ್‌): ಟಿ20 ಅಭ್ಯಾಸ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್‌ 9 ಸದಸ್ಯರ ಆಸ್ಟ್ರೇಲಿಯ ತಂಡವನ್ನು 35 ರನ್ನುಗಳಿಂದ ಮಣಿಸಿದೆ.

Advertisement

ಇಲ್ಲಿನ “ಕ್ವೀನ್ಸ್‌ ಪಾರ್ಕ್‌ ಓವಲ್‌’ ಸ್ಟೇಡಿಯಂನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 4ಕ್ಕೆ 257 ರನ್‌ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ಆಸ್ಟ್ರೇಲಿಯ 7 ವಿಕೆಟಿಗೆ 222 ರನ್‌ ಬಾರಿಸಿ ಶರಣಾಯಿತು.
ನಿಕೋಲಸ್‌ ಪೂರಣ್‌ ಮತ್ತು ನಾಯಕ ರೋವ¾ನ್‌ ಪೊವೆಲ್‌ ಅವರ ಸ್ಫೋಟಕ ಅರ್ಧ ಶತಕ, ಶಫೇìನ್‌ ರುದರ್‌ಫೋರ್ಡ್‌ ಅವರ ಬಿರುಸಿನ ಬ್ಯಾಟಿಂಗ್‌ ವಿಂಡೀಸ್‌ ಸರದಿಯ ಆಕರ್ಷಣೆ ಆಗಿತ್ತು. ಪೂರಣ್‌ ಕೇವಲ 25 ಎಸೆತಗಳಿಂದ 75 ರನ್‌ ಬಾರಿಸಿದರು. ಸಿಡಿಸಿದ್ದು 8 ಸಿಕ್ಸರ್‌ ಹಾಗೂ 5 ಫೋರ್‌. ಪೊವೆಲ್‌ 25 ಎಸೆತಗಳನ್ನೆದುರಿಸಿ 52 ರನ್‌ ಹೊಡೆದರು (4 ಬೌಂಡರಿ, 4 ಸಿಕ್ಸರ್‌). ರುದರ್‌ಫೋರ್ಡ್‌ ಗಳಿಕೆ 18 ಎಸೆತಗಳಿಂದ ಅಜೇಯ 47 ರನ್‌ (4 ಬೌಂಡರಿ, 4 ಸಿಕ್ಸರ್‌).

ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಆಸ್ಟ್ರೇಲಿಯ ಅಗ್ರ ಕ್ರಮಾಂಕದ ಕುಸಿತಕ್ಕೆ ಸಿಲುಕಿತು. ಆದರೆ ಜೋಶ್‌ ಇಂಗ್ಲಿಸ್‌ (55), ನಥನ್‌ ಎಲ್ಲಿಸ್‌ 39), ಟಿಮ್‌ ಡೇವಿಡ್‌ ಮತ್ತು ಮ್ಯಾಥ್ಯೂ ವೇಡ್‌ (ತಲಾ 25) ಪ್ರಯತ್ನದಿಂದ ಇನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ನಮೀಬಿಯಾ ಜಯ
ಟರೂಬ: ಇನ್ನೊಂದು ಅಭ್ಯಾಸ ಪಂದ್ಯದಲ್ಲಿ ನಮೀಬಿಯಾ ಡಿಎಲ್‌ಎಸ್‌ ನಿಯಮದಂತೆ ಪಪುವಾ ನ್ಯೂ ಗಿನಿಯಾ (ಪಿಎನ್‌ಜಿ) ತಂಡವನ್ನು ಮಣಿಸಿತು. ಪಿಎನ್‌ಜಿ 7ಕ್ಕೆ 109 ರನ್‌ ಮಾಡಿದರೆ, ನಮೀಬಿಯಾ 16.5 ಓವರ್‌ಗಳಲ್ಲಿ 6ಕ್ಕೆ 93 ರನ್‌ ಗಳಿಸಿದ ವೇಳೆ ಮಳೆ ಸುರಿಯಿತು. ಆಗ ಡಿಎಲ್‌ಎಸ್‌ ನಿಯಮದಂತೆ ನಮೀಬಿಯ ಮುಂದಿತ್ತು.

ಡಲ್ಲಾಸ್‌ನಲ್ಲಿ ಮಳೆ
ಡಲ್ಲಾಸ್‌ನಲ್ಲಿ ಮುಂದುವರಿದ ಮಳೆಯ ಕಾರಣ ನೆದರ್ಲೆಂಡ್ಸ್‌-ಕೆನಡಾ ನಡುವಿನ ಅಭ್ಯಾಸ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next