Advertisement
4 ವರ್ಷಗಳ ಹಿಂದೆ ಅಡಿಲೇಡ್ನಲ್ಲೇ ಆಡಲಾಗಿದ್ದ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ 36ಕ್ಕೆ ಆಲೌಟ್ ಆಗಿ ಹೀನಾಯ ಸೋಲನುಭವಿಸಿದ್ದ ಭಾರತ, ಅನಂತರ ಸರಣಿ ಗೆದ್ದು ಬೀಗಿದ್ದು ಈಗ ಇತಿಹಾಸ. ಹೀಗಾಗಿ ಈ ಬಾರಿಯ ಅಡಿಲೇಡ್ ಟೆಸ್ಟ್ನಲ್ಲಿ ಇಂಥ ಕಳಪೆ ನಿರ್ವಹಣೆ ಮರುಕಳಿಸಬಾರದೆಂದು ಟೀಮ್ ಇಂಡಿಯಾ ಪಣ ತೊಟ್ಟಿದೆ. ಹೀಗಾಗಿ ಎರಡೇ ದಿನಗಳ ಮುಖಾಮುಖೀಯಾದರೂ ಈ ಅಭ್ಯಾಸ ಪಂದ್ಯವನ್ನು ಗಂಭೀರವಾಗಿ ಆಡುವುದರಲ್ಲಿ ಅನುಮಾನವಿಲ್ಲ.ಬ್ಯಾಟಿಂಗ್ ಸರದಿಯ “ನೀಲನಕ್ಷೆ’ಇದಕ್ಕೆ ಪ್ರಥಮ ದರ್ಜೆ ಪಂದ್ಯದ ಮಾನ್ಯತೆಯೇನಿಲ್ಲ. ಆದರೆ ಅಡಿಲೇಡ್ ಟೆಸ್ಟ್ ಪಂದ್ಯದ ಆಡುವ ಬಳಗದ ಗೊಂದಲವನ್ನು ಸುಲಲಿತವಾಗಿ ಬಗೆಹರಿಸಿಕೊಳ್ಳುವ ಹಿನ್ನೆಲೆಯಲ್ಲಿ ಭಾರತಕ್ಕೆ ಇದೊಂದು ಪ್ರಮುಖ ಪಂದ್ಯವಾಗಿದೆ. ರೋಹಿತ್ ಶರ್ಮ, ಶುಭಮನ್ ಗಿಲ್ ದ್ವಿತೀಯ ಟೆಸ್ಟ್ನಲ್ಲಿ ಕಣಕ್ಕಿಳಿಯಬೇಕಿದೆ. ಹಾಗೆಯೇ ಸಫìರಾಜ್ ಖಾನ್ ಕೂಡ ರೇಸ್ನಲ್ಲಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಬ್ಯಾಟಿಂಗ್ ಸರದಿಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಂಭವಿಸಲೇಬೇಕಿದೆ. ಇದರ “ನೀಲನಕ್ಷೆ’ ಅಭ್ಯಾಸ ಪಂದ್ಯದಲ್ಲಿ ಮೂಡಿಬರಬೇಕಿದೆ.
ಕೈಬೆರಳಿನ ಮೂಳೆ ಮುರಿತಕ್ಕೊಳಗಾದ ಶುಭಮನ್ ಗಿಲ್ ಈಗ ಚೇತರಿಸಿಕೊಂಡಿದ್ದು, ಶುಕ್ರವಾರ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಇದರಿಂದ ಅವರು ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಆಡುವ ಎಲ್ಲ ಸಾಧ್ಯತೆ ಇದೆ. ನೆಟ್ಸ್ನಲ್ಲಿ ಅವರು ಯಶ್ ದಯಾಳ್ ಮತ್ತು ಆಕಾಶ್ದೀಪ್ ಅವರ ಎಸೆತಗಳನ್ನು ಯಾವುದೇ ಸಮಸ್ಯೆ ಇಲ್ಲದೆ ಎದುರಿಸಿದರು.
Related Articles
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
Advertisement