Advertisement

SWT; ಸಾಹೇಬಾನ್ ಮಂಗಳೂರು ಘಟಕ ಉದ್ಘಾಟನೆ: ಸಮುದಾಯ ಸಮ್ಮಿಲನ ಕಾರ್ಯಕ್ರಮ

08:16 PM Dec 29, 2023 | Team Udayavani |

ಮಂಗಳೂರು: ಸಾಹೇಬಾನ್ ವೆಲ್ಫೇರ್ ಟ್ರಸ್ಟ್(SWT) ಸಾಹೇಬಾನ್ ಯುಎಇಯ ಒಂದು ಶಾಖೆಯಾಗಿದ್ದು, ಇದು 30 ವರ್ಷಗಳಿಂದ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಸೈಯದ್ ಸಿರಾಜ್ ಅಹ್ಮದ್ ಹೇಳಿದರು.

Advertisement

ಟ್ರಸ್ಟ್ ಅಧ್ಯಕ್ಷ ಅಫ್ರೋಝ್ ಅಸ್ಸಾದಿಯವರು ಎಸ್‌ಡಬ್ಲ್ಯುಟಿ ಮಂಗಳೂರು ವತಿಯಿಂದ ಕೊಡಿಯಾಲ್‌ಬೈಲ್‌ನ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಸಾಹೇಬಾನ್’ (ಅವಿಭಜಿತ ದ.ಕ. ಜಿಲ್ಲೆಯ ಉರ್ದು ಮಾತನಾಡುವ ಹನಫಿ ಸಮುದಾಯ) ಮಂಗಳೂರು ಘಟಕದ ಉದ್ಘಾಟನೆ ಮತ್ತು ಸಮ್ಮಿಲನ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಹಿಬಾನ್ ಸಮುದಾಯದ ಹೆಚ್ಚಿನವರು ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಭಾರತದ ಇತರ ಭಾಗಗಳಿಗೆ, ವಿದೇಶಗಳಿಗೆ ವಲಸೆ ಹೋಗಿದ್ದಾರೆ. ಆ ಕಾರಣದಿಂದ ಒಂದು ಸಮುದಾಯದ ಸಂಘಟನೆಯ ಕೊರತೆಯಿದ್ದು ಅದನ್ನು ನೀಗಿಸುವ ನಿಟ್ಟಿನಲ್ಲಿ ಸಾಹೇಬಾನ್ ವೆಲ್ಫೇರ್ ಟ್ರಸ್‌ನ್ನು ರಚಿಸಿದ್ದೇವೆ ಎಂದರು.

ಸಮುದಾಯವು ದೇಶಕ್ಕೆ ಮತ್ತು ಸಮುದಾಯಕ್ಕೆ ಸ್ಫೂರ್ತಿಯ ಮೂಲವಾಗಿರುವ ಸ್ವಾತಂತ್ರ‍್ಯ ಹೋರಾಟಗಾರರು, ನಾಗರಿಕ ಸೇವೆಯಲ್ಲಿರುವ ಉನ್ನತ ಶ್ರೇಣಿಯ ಅಧಿಕಾರಿಗಳು, ಭಾರತೀಯ ಸಶಸ್ತ್ರ ಪಡೆಯಲ್ಲಿರುವ ಯೋಧರು, ಬ್ಯಾಂಕರ್‌ಗಳು, ನ್ಯಾಯಾಧೀಶರು, ವೃತ್ತಿಪರರು, ವಿದ್ವಾಂಸರು, ಹೆಸರಾಂತ ಕಲಾವಿದರು ಮತ್ತು ಪ್ರಮುಖ ಉದ್ಯಮಿಗಳನ್ನು ಕೊಡುಗೆಯಾಗಿ ನೀಡಿದೆ ಎಂದರು.

ಮುಖ್ಯ ಅಥಿತಿಯಾದ ಮೈಸೂರು ವಿವಿಯ ಮಾಜಿ ಉಪಕುಲಪತಿ ಪ್ರೊ. ಮುಝಫರ್ ಅಸ್ಸಾದಿ ಸಮುದಾಯವು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು. ಖತರ್‌ನ ಮುಮ್ತಾಝ್ ಹುಸೇನ್ ಉರ್ದು ಸಂಸ್ಕೃತಿ, ಭಾಷೆ ಮತ್ತು ಅದನ್ನು ಉತ್ತೇಜಿಸುವ ಮತ್ತು ಪೋಷಿಸುವ ಅಗತ್ಯತೆಯ ಕುರಿತು ಮಾತನಾಡಿದರು.

Advertisement

ಟ್ರಸ್ಟಿಯಾದ ಇಮ್ತಿಯಾಝ್ ಖತೀಬ್ ಎಸ್‌ಡಬ್ಲ್ಯುಟಿ ಟ್ರಸ್ಟ್ ಅನ್ನು ಸಭೆಗೆ ಪರಿಚಯಿಸಿ, ಅದರ ಉದ್ದೇಶ ಮತ್ತು ಗುರಿಗಳನ್ನು ವಿವರಿಸಿದರು. ಜಮೀಯ್ಯತುಲ್ ಫಲಾಹ್ ದ.ಕ. ಹಾಗೂ ಉಡುಪಿ ಜಿಲ್ಲೆಯ ಮಾಜಿ ಅಧ್ಯಕ್ಷ ಶಬಿಹ್ ಅಹ್ಮದ್ ಕಾಝಿ, ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ.ನ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಅಧ್ಯಕ್ಷ ಕೋಟ ಇಬ್ರಾಹೀಂ ಸಾಹೇಬ್ ಮಾತನಾಡಿದರು. ಇದೇ ಸಂದರ್ಭ ಮೇಜರ್ ಡಿ.ಎಂ. ನಿಝಾಮುದ್ದೀನ್, ಬಿ.ಜಿ.ಮುಹಮ್ಮದ್ (ಮರಣೋತ್ತರ), ಡಾ. ಸಫ್ವಾನ್ ಅಹ್ಮದ್, ಡಾ. ಫಾತಿಮಾ ರೈಸಾ, ಇಲ್ಹಮ್ ದಾವೂದ್, ಆಲಿಯಾ ಇಮ್ತಿಯಾಝ್ ಖಾನ್, ಹಕ್ ಅಸ್ಸಾದಿ, ಮೆರಾಜ್ ಯೂಸುಫ್, ನಝ್ಮುದ್ದೀನ್ ಅಸ್ಸಾದಿ, ಅಬಿದ್, ಝುಬೈರ್ ಅಂಬರ್ ಸೇರಿದಂತೆ ಪ್ರಮುಖರನ್ನು ಸನ್ಮಾನಿಸಲಾಯಿತು, ಕಾರ್ಯಕ್ರಮದ ಪ್ರಾಯೋಜಕರಾದ ಮತೀನ್ ಅಹ್ಮದ್ ಅವರನ್ನು ಹಾಗೂ ಸಾಹೇಬಾನ್ ಯುಎಇಯ ಸದಸ್ಯರಾದ ಮುಹಮ್ಮದ್ ಅಕ್ರಂ, ಆಸಿಫ್ ಇಕ್ಬಾಲ್, ಯೂನುಸ್ ಶೇಕ್ ಅವರನ್ನು ಗೌರವಿಸಲಾಯಿತು.

ಟ್ರಸ್ಟಿಗಳಾದ ರಫೀಕ್ ಅಸ್ಸಾದಿ, ಅಲ್ತಾಫ್ ಖತೀಬ್ ಹಾಗೂ ಸದಸ್ಯರಾದ ಇಕ್ಬಾಲ್ ಮನ್ನಾ, ಉಪಸ್ಥಿತರಿದ್ದರು.ಇಮ್ತಿಯಾಝ್ ಖತೀಬ್ ಕಿರಾಅತ್ ಪಠಿಸಿದರು. ಆಲಿಯಾ ಇಮ್ತಿಯಾಝ್ ವಂದಿಸಿದರು. ಅಂಶು ಮರ್ಯಮ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಮತ್ತು ಗಲ್ಫ್ ದೇಶಗಳಿಂದ ಸಾಹೇಬಾನ್ ಸಮುದಾಯದ 120 ಕ್ಕೂ ಹೆಚ್ಚು ಪ್ರಮುಖರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next