Advertisement
ಮೊಗವೀರ ಸಂಘ ಬೆಂಗಳೂರು ಸುವರ್ಣ ಪಥ ರವಿವಾರ ಅರಮನೆ ಮೈದಾನದಲ್ಲಿ ಹಮ್ಮಿಕೊಂಡ ಬೃಹತ್ ಮೊಗವೀರ ಸಮಾವೇಶ, ಸಾಂಸ್ಕೃತಿಕ ಉತ್ಸವ, ಸುವರ್ಣ ಪಥ ಸಮಾರೋಪ, ಪ್ರಶಸ್ತಿ ಪುರಸ್ಕಾರ, ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ ಸಮಾಜದಲ್ಲಿ ಅನೇಕ ಸಮುದಾಯಗಳು ಹಿಂದುಳಿದೆ. ಇದಕ್ಕೆ ಮುಖ್ಯ ಕಾರಣ ಜಾತಿ ವ್ಯವಸ್ಥೆ. ಹಿಂದೆ ಕಸುಬಿನ ಆಧಾರದ ಮೇಲೆ ಜಾತಿ ನಿಗದಿ ಪಡಿಸಲಾಗಿತ್ತು. ಮೊದಲ ಮೂರು ವರ್ಗಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಷ್ಯರಿಗೆ ಮಾತ್ರ ವಿದ್ಯೆ ಕಲಿಯುವ ಅವಕಾಶವಿತ್ತು. ಶೂದ್ರರಿಗೆ ಇರದ ಕಾರಣ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡಿದಾಗ ಗುಲಾಮಗಿರಿಯಿಂದ ಹೊರಬರಲು ಸಾಧ್ಯ ಎಂದು ಹೇಳಿದರು.
ಮೀನುಗಾರರು ಪ್ರವರ್ಗ 1ರ ವ್ಯಾಪ್ತಿಗೆ ಬರುತ್ತಾರೆ. ಕೋಲಿ, ಗೊಲ್ಲರನ್ನು ಎಸ್‌ಟಿಗೆ ಸೇರಿಸೇಕು ಎನ್ನುವ ನಿಟ್ಟಿನಲ್ಲಿ ಕುಲಶಾಸ್ತ್ರ ಅಧ್ಯಯನ ಮಾಡಲಾಗಿತ್ತು. ಆದರೆ ಕೇಂದ್ರ ಸರಕಾರ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಕೇಂದ್ರದ ಈ ನಡೆ ಬಗ್ಗೆ ಯಾರೂ ಪ್ರಶ್ನೆ ಮಾಡಿಲ್ಲ. ಆದರೂ ನಾನು ಮತ್ತೆ ಮೊಗವೀರ ಸಮುದಾಯವನ್ನು ಎಸ್‌ಟಿಗೆ ಸೇರಿಸುವಂತೆ ಶಿಫಾರಸು ಮಾಡುತ್ತೇನೆ, ಮೊಗವೀರ ಸಮುದಾಯದವರು ಸೇರಿ ಕೇಂದ್ರದ ಮೇಲೆ ಒತ್ತಡ ಹಾಕಿ ಎಂದರು. ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಮಾತನಾಡಿ, ಬಜೆಟ್‌ನಲ್ಲಿ ಘೋಷಣೆಯಾದ ಸಮುದ್ರ ಆ್ಯಂಬುಲೆನ್ಸ್ ಯೋಜನೆಯನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಬೇಕು, ಬಂದರಿನ ಹೂಳೆತ್ತಲು ಡ್ರೆಜ್ಜರ್ ಯಂತ್ರ ಖರೀದಿಸಲು ಮೀನುಗಾರಿಕೆ ಇಲಾಖೆಗೆ ಅನುದಾನ ನೀಡುವುದು ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
Related Articles
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ರೈತರಿಗೆ ಸಾಲ ಹಾಗೂ ಬಡ್ಡಿ ಮನ್ನಾ ಮಾಡುವ ರೀತಿಯಲ್ಲಿ ಮೀನುಗಾರರಿಗೂ ಅನು
ಕೂಲ ಕಲ್ಪಿಸಬೇಕು. ಮುಂಬರುವ ಬಜೆಟ್‌ನಲ್ಲಿ ಮೀನುಗಾರರಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.
Advertisement
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮುಂಬಯಿ ಮೊಗವೀರ ಮಹಾಜನ ಸೇವಾ ಸಂಘದ ಬಗ್ವಾಡಿ ಹೋಬಳಿ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ಮುಂಬಯಿ ಮೊಗವೀರ ಮಹಾಜನ ಸೇವಾ ಸಂಘದ ಕುಂದಾಪುರ ಶಾಖೆಯ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಮೊದಲಾದವರಿದ್ದರು. ಡಾ| ಜಿ. ಜಿ. ಶಂಕರ್ ಅವರಿಗೆ ಮಾಧವ ಮಂಗಲ ಪ್ರಶಸ್ತಿಯನ್ನು ಸಿದ್ದರಾಮಯ್ಯ ಪ್ರದಾನ ಮಾಡಿದರು.
ಮೊಗವೀರ ಸಮುದಾಯದ ಯಶಪಾಲ್ ಶಾಸಕ ಆಗಿದ್ದಾರೆ. ನಾಳೆ ಮುಖ್ಯಮಂತ್ರಿಯೂ ಆಗಬಹುದು ಎಂದಾಗ, ಯಶಪಾಲ್ “ಬೇಡ ಸರ್’ ಎಂದು ಹೇಳಿ ಕೈ ಮುಗಿದರು. ಸಿಎಂ ನೀನು ಆಗ್ತೀಯಾ ಅಂತ ಹೇಳಲಿಲ್ಲ. ನಿಮ್ಮ ಸಮುದಾಯದವರು ಆಗಬಹುದು ಎಂದು ಸಿಎಂ ಸಿದ್ದರಾಮಯ್ಯ ಕಾಲೆಳೆದರು.