ಮುಂಬೈ: ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಸೆಲ್ಫಿ ವಿಚಾರಕ್ಕೆ ನಡೆದ ಹಲ್ಲೆಯಿಂದಾಗಿ ಪೋಲಿಸರ ವಶದಲ್ಲಿರುವ ಭೋಜ್‌ಪುರಿ ನಟೆ ಸ್ವಪ್ನಾ ಗಿಲ್‌ರನ್ನು ಪೋಲಿಸರು ಶುಕ್ರವಾರ ಅಂಧೇರಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಕೋರ್ಟ್ ಸ್ವಪ್ನಾ ಗಿಲ್‌ರನ್ನು ಫೆ.20ರ ತನಕ ಪೋಲಿಸ್ ಕಸ್ಟಡಿಗೆ ಕಳುಹಿಸಿದೆ.
ವಿಚಾರಣೆ ವೇಳೆ ʻಪೃಥ್ವಿ ಶಾ ಅವರಿಗೆ ಮದ್ಯ ಸೇವಿಸುವ ಅಭ್ಯಾಸವಿದ್ದು, ಆ ಕಾರಣಕ್ಕಾಗಿಯೇ ಬಿಸಿಸಿಐ ಅವರನ್ನು ಹೊರಗಿಟ್ಟಿದೆʼ ಎಂದು ಸ್ವಪ್ನಾ ಗಿಲ್ ಪರ ವಕೀಲರು ಹೇಳಿದ್ದಾರೆ.
ʻಸ್ವಪ್ನಾ 50,000ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ. ಆದರೆ ಸ್ವಪ್ನಾ ಹಣ ಕೇಳಿಲ್ಲ. ಈ ಬಗ್ಗೆ ಪುರಾವೆಗಳೂ ಇಲ್ಲ. ಘಟನೆ ನಡೆದ 15 ಗಂಟೆಗಳ ಬಳಿಕ ಕೇಸು ದಾಖಲಿಸಲಾಗಿದೆ. ಅದೇ ದಿನ ಯಾಕೆ ಕೇಸು ದಾಖಲಿಸಲಿಲ್ಲ?ʼ ಎಂದು ಸ್ವಪ್ನಾ ಪರ ವಕೀಲರು ಪ್ರಶ್ನಿಸಿದ್ದಾರೆ.
ವಿಚಾರಣೆ ವೇಳೆ ಸ್ವಪ್ನಾ ಗಿಲ್ ತನಗೆ ಪೃಥ್ವಿ ಶಾ ಯಾರೆಂದೇ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ʻನನ್ನ ಗೆಳೆಯ ಪೃಥ್ವಿ ಅವರೊಂದಿಗೆ ಸೆಲ್ಫಿ ಬೇಕೆಂದು ಕೇಳಿದ್ದಾನೆ. ಆ ವೇಳೆ ನಾನು ಮತ್ತು ನನ್ನ ಗೆಳೆಯ ಇಬ್ಬರೇ ಇದ್ದೆವು. ಆದರೆ ಪೃಥ್ವಿ ಶಾ ತಮ್ಮ 8 ಮಂದಿ ಸ್ನೇಹಿತರ ಜೊತೆ ಅಲ್ಲಿಗೆ ಬಂದಿದ್ದರು. ಅಲ್ಲಿದ್ದ ಹೊಟೆಲಿಗೆ ಬಂದು ಊಟ ಮಾಡಿದ್ದಾರೆ ಎಂಬ ಹೇಳಿಕೆ ಸುಳ್ಳು. ಆದರೆ ಅವರು ಮತ್ತು ಅವರ ಸ್ನೇಹಿತರು ಅಲ್ಲಿ ಕುಡಿದು ಬಂದು ಗಲಾಟೆ ಮಾಡಿದ್ದಾರೆʼ ಎಂದು ಸ್ವಪ್ನಾ ಗಿಲ್ ಹೇಳಿದ್ದಾರೆ.
ಇದನ್ನೂ ಓದಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತಾ ತಂಡದ ನಾಯಕಿಯಾಗಿ ಸ್ಮೃತಿ ಮಂಧನಾ ನೇಮಕ