Advertisement

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

08:56 AM Dec 21, 2024 | Team Udayavani |

ಮುಂಬೈ: ಭಾರತ ಕ್ರಿಕೆಟ್‌ ತಂಡ ಆಯ್ತು, ಐಪಿಎಲ್‌ ಆಯ್ತು, ಈಗ ಮುಂಬೈ ವಿಜಯ್‌ ಹಜಾರೆ ತಂಡದಲ್ಲೂ ಸ್ಥಾನ ಕಳೆದುಕೊಂಡಿರುವ ಪೃಥ್ವಿ ಶಾ ತೀವ್ರ ಹತಾಶೆಗೊಳಗಾಗಿದ್ದಾರೆ. ಸಾಮಾಜಿಕ ತಾಣದಲ್ಲೇ ಪೋಸ್ಟ್‌ ಅಸಮಾಧಾನ ತೋಡಿಕೊಂಡಿ ದ್ದಾರೆ.

Advertisement

ಈ ಬಗ್ಗೆ ಮುಂಬೈ ಕ್ರಿಕೆಟ್‌ ಸಂಸ್ಥೆ ಮೂಲಗಳು ಕಠಿಣ ಪ್ರತಿಕ್ರಿಯೆ ನೀಡಿದ್ದು, ಪೃಥ್ವಿ ಶಾ ಕೈಬಿಟ್ಟಿದ್ದಕ್ಕೆ ಬೇರೆ ಯಾವುದೇ ಕಾರಣಗಳಿಲ್ಲ. ಅವರ ಅಶಿಸ್ತು, ಮನೋಭಾವ, ದೈಹಿಕ ಕ್ಷಮತೆಯ ಕೊರತೆಯೇ ಇದಕ್ಕೆ ಕಾರಣ. ಅವರಿಗೆ ಹಲವು ಬಾರಿ ತಿಳಿಸಿದ್ದರೂ ಅದನ್ನು ತಿದ್ದಿಕೊಂಡಿಲ್ಲ. ರಾತ್ರಿ ಹೊರಹೋ ದವರು ಬೆಳಗ್ಗೆ 6ಕ್ಕೆ ಹೋಟೆಲ್‌ ಕೋಣೆಗೆ ಮರಳುತ್ತಾರೆ ಎಂದು ಹೇಳಲಾಗಿದೆ.

ಪದೇಪದೆ ತರಬೇತಿ ಅವಧಿಗಳನ್ನು ತಪ್ಪಿಸಿದ್ದಾರೆ, ಇದರಿಂದ ಹಿರಿಯ ಕ್ರಿಕೆಟಿಗರೂ ಬೇಸರಗೊಂಡಿದ್ದಾರೆ. ಸೈಯದ್‌ ಮುಷ್ತಾಕ್‌ ಟಿ20 ವೇಳೆ ನಾವು ಕೇವಲ 10 ಆಟಗಾರರೊಂದಿಗೆ ಆಡುವಂತಾಗಿತ್ತು. ಪೃಥ್ವಿ ತಂಡದಲ್ಲಿದ್ದರೂ ಅವರಿಗೆ ಕ್ಷೇತ್ರರಕ್ಷಣೆ ಮಾಡಲಾಗುತ್ತಿರಲಿಲ್ಲ. ಬ್ಯಾಟಿಂಗ್‌ ಮಾಡುವಾಗ ಫಿಟ್ನೆಸ್ ಇಲ್ಲದೇ ಒದ್ದಾಡುತ್ತಿದ್ದರು.

ಒಬ್ಬೊಬ್ಬ ಆಟಗಾರನಿಗೆ ಒಂದೊಂದು ಮಾನದಂಡವಿರಲು ಸಾಧ್ಯವಿಲ್ಲ. ಅವರ ಸಾಮಾಜಿಕ ತಾಣದಲ್ಲಿನ ಪೋಸ್ಟ್‌ ಆಯ್ಕೆಗಾರರ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಿದ್ದಾರೆ. ಮುಂಬೈ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಕೂಡ, ಪೃಥ್ವಿ ಶಾ ವಿರುದ್ಧ ಇಂತಹದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.‌

ಮತ್ತೆ ಪ್ರತಿಕ್ರಿಯೆ ನೀಡಿದ ಶಾ

Advertisement

ಮುಂಬೈ ಕ್ರಿಕೆಟ್‌ ಅಸೋಸಿಯೇಶನ್‌ ನ ಈ ಹೇಳಿಕೆ ವೈರಲ್ ಆದ ನಂತರ ಪೃಥ್ವಿ ಶಾ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ತನ್‌ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿದ್ದಾರೆ. “ನಿಮಗೆ ಸಂಪೂರ್ಣವಾಗಿ ಅರ್ಥವಾಗದಿದ್ದರೆ, ಅದರ ಬಗ್ಗೆ ಮಾತನಾಡಬೇಡಿ. ಹಲವು ಜನರು ಅರ್ಧದಷ್ಟು ಸತ್ಯಗಳೊಂದಿಗೆ ಪೂರ್ಣ ಅಭಿಪ್ರಾಯಗಳನ್ನು ಹೊಂದಿದ್ದಾರೆ” ಎಂದು ಅವರು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next