Advertisement

ಸ್ವಚ್ಛ ಸರ್ವೇಕ್ಷಣ್: ಬಿಬಿಎಂಪಿಗೆ 214ನೇ ರ್ಯಾಂಕ್, ಕಳೆದ ಬಾರಿಗಿಂತ ಕಳಪೆ ಸಾಧನೆ!

02:07 PM Aug 20, 2020 | keerthan |

ಬೆಂಗಳೂರು: ಸ್ವಚ್ಛ ಸರ್ವೇಕ್ಷಣ್ ನಲ್ಲಿ‌ ಈ ಬಾರಿಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಿನ್ನಡೆಯಾಗಿದೆ. ಕಳೆದ ವರ್ಷ ರ್ಯಾಂಕಿಂಗ್ ಪಟ್ಟಿಯಲ್ಲಿ 194ನೇ ಸ್ಥಾನದಲ್ಲಿದ್ದ ಬೆಂಗಳೂರು ಈ ಬಾರಿ 214ನೇ ಸ್ಥಾನಕ್ಕೆ ಕುಸಿದಿದೆ.

Advertisement

ಪ್ರತಿ ವರ್ಷ ನಗರಗಳ ಸ್ವಚ್ಛತೆ ಹಾಗೂ ಕಸವಿಲೇವಾರಿ ಮಾನದಂಡಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಅಡಿ ಪ್ರಶಸ್ತಿ ಮತ್ತು ರ್ಯಾಂಕಿಂಗ್ ನೀಡುತ್ತದೆ. ಬೆಂಗಳೂರು ಈ ಬಾರಿಯೂ ಹಿನ್ನಡೆ ಸಾಧಿಸುವುದರ ಜೊತೆಗೆ ಕಳೆದ ವರ್ಷಕ್ಕಿಂತ 20 ರ್ಯಾಂಕ್ ಹಿನ್ನಡೆ ‌ಸಾಧಿಸಿದೆ.

ಇದನ್ನೂ ಓದಿ: ಮತ್ತೆ ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿ ಪಡೆದ ಸಾಂಸ್ಕೃತಿಕ ನಗರಿ ಮೈಸೂರು

ಬೆಸ್ಟ್ ಸಸ್ಟೇನೆಬಲ್ ಸಿಟಿ: ಕಳೆಪೆ ಸಾಧನೆಯ ನಡುವೆಯೂ ಪಾಲಿಕೆಗೆ ಬೆಸ್ಟ್ ಸಸ್ಟೇನೆಬಲ್ ಸಿಟಿ ಎಂಬ ಪ್ರಶಸ್ತಿ ಸಿಕ್ಕಿರುವುದು ಅಚ್ಚರಿ‌ ಮೂಡಿಸಿದೆ. 10 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಇರುವ ಆಯ್ದ 47 ನಗರಗಳನ್ನು ‌ಪಟ್ಟಿ ಮಾಡಿ ಕಸ ವಿಲೇವಾರಿ ಹಾಗೂ ನಿರ್ವಹಣೆಗೆ ಈ ನಗರಗಳು ಅಳವಡಿಸಿಕೊಂಡಿರುವ ವಿಧಾನ ಮತ್ತು ಪ್ರಯತ್ನವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. 47 ನಗರಗಳಲ್ಲಿ ಪಾಲಿಕೆಗೆ 37ನೇ ರ್ಯಾಂಕ್ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next