Advertisement

ಉಗುಳಿದರೆ ಕ್ಲೀನ್‌ ಮಾಡ್ಬೇಕು!

07:45 AM Nov 12, 2018 | Team Udayavani |

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಇನ್ನು ರಸ್ತೆಯ ಮೇಲೆ ಉಗುಳಿದರೆ, ಅವರೇ ಸ್ವಚ್ಛಗೊಳಿಸುವ ಪ್ರಸಂಗ ಎದುರಾಗುತ್ತದೆ. ಪುಣೆ ನಗರಾಡಳಿತ ಇಂಥದ್ದೊಂದು ವಿಶಿಷ್ಟ ಕ್ರಮಕ್ಕೆ ಮುಂದಾಗಿದ್ದು, ರಸ್ತೆಯನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಉಗುಳಿದ ವ್ಯಕ್ತಿಯೇ ರಸ್ತೆಯನ್ನು ಸ್ವಚ್ಛಗೊಳಿಸಬೇಕು. ಅಷ್ಟೇ ಅಲ್ಲ, ಆತ ದಂಡವನ್ನೂ ಪಾವತಿ ಮಾಡಬೇಕು ಎಂದು ಪುಣೆ ಮುನಿಸಿಪಲ್‌ ಕಾರ್ಪೊರೇಶನ್‌ ಸುತ್ತೋಲೆ ಹೊರಡಿಸಿದೆ. ಕಳೆದ ವಾರ ಈ ಯೋಜನೆಯನ್ನು 5 ವಾರ್ಡ್‌ಗಳಲ್ಲಿ ಆರಂಭಿಸಲಾಗಿದೆ. ಕೇವಲ ಏಳು ದಿನಗಳಲ್ಲಿ 156 ಜನರು ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಅವರೆಲ್ಲರೂ ರಸ್ತೆಯನ್ನು ತಕ್ಷಣವೇ ಸ್ವಚ್ಛಗೊಳಿಸಿದ್ದಾರೆ. ಅಷ್ಟೇ ಅಲ್ಲ, 150 ರೂ. ದಂಡವನ್ನೂ ವಿಧಿಸಲಾಗಿದೆ.

Advertisement

ರಸ್ತೆಯಲ್ಲಿ ಉಗುಳಿದ್ದನ್ನು ತಾನೇ ಸ್ವಚ್ಛಗೊಳಿಸಿದರೆ, ಮತ್ತೂಮ್ಮೆ ಉಗುಳುವಾಗ ವ್ಯಕ್ತಿ ಎರಡು ಬಾರಿ ಯೋಚಿಸುತ್ತಾನೆ. ಇದು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ. ಸ್ವಚ್ಛ ನಗರಗಳ ಪಟ್ಟಿಯಲ್ಲಿ ಪುಣೆ ಕಳೆದ ವರ್ಷ 10 ಸ್ಥಾನದಲ್ಲಿತ್ತು. ಈ ಬಾರಿ 1ನೇ ಸ್ಥಾನಕ್ಕೆ ತಲುಪುವ ಗುರಿ ಹೊಂದಿದ್ದೇವೆ ಎಂದು ಪುಣೆ ಕಾರ್ಪೊರೇಶನ್‌ನ ಘನತ್ಯಾಜ್ಯ ನಿರ್ವಹಣೆ ಇಲಾಖೆ ಮುಖ್ಯಸ್ಥ ಧ್ಯಾನೇಶ್ವರ ಮೋಲಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next