Advertisement
ಮನಪಾ ವ್ಯಾಪ್ತಿಯಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಜೀವನೋಪಾಯ ಅಭಿಯಾನ ದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಬೆಂಬಲ ಉಪಘಟಕ ದಡಿ ಪಿಎಂ ಸ್ವ-ನಿಧಿ ಯೋಜನೆ ಯಲ್ಲಿ 7,912 ಮಂದಿ ಫಲಾನುಭವಿಗಳಿಗೆ ಸಾಲ ಮಂಜೂರಾಗಿದ್ದು, 7,832 ಮಂದಿಗೆ ಮೊದಲ ಹಂತದ 10 ಸಾವಿರ ರೂ. ನಗದು ವಿತರಿಸಲಾಗಿದೆ. 2ನೇ ಹಂತದಲ್ಲಿ 2,629 ಮಂದಿಗೆ 20 ಸಾವಿರ ರೂ. ವಿತರಿಸಿಲಾಗಿದೆ. ತೃತೀಯ ಹಂತದ 50 ಸಾವಿರ ರೂ. ಸಾಲಕ್ಕೆ 1993 ಮಂದಿ ಅರ್ಜಿ ಸಲ್ಲಿಸಿದ್ದು, 1,008 ಮಂದಿ ಆಯ್ಕೆಯಾಗಿ ದ್ದಾರೆ. ಇವರಲ್ಲಿ 960 ಮಂದಿಗೆ ನಗದು ವಿತರಣೆ ಮಾಡಲಾಗಿದೆ.
ಯೋಜನೆಯಡಿ ಸಾಲ ವಿತರಣೆಯಾ ದರೂ ಸಾಕಷ್ಟು ಮಂದಿಗೆ ಸಾಲ ವಿತರಣೆ ಬಾಕಿ ಇದೆ. ಪ್ರಥಮ ಹಂತದಲ್ಲಿ 75 ಅರ್ಜಿಗಳು, ಎರಡನೇ ಹಂತದಲ್ಲಿ 61 ಅರ್ಜಿಗಳು ಮತ್ತು ಮೂರನೇ ಹಂತದಲ್ಲಿ 48 ಅರ್ಜಿಗಳು ಬಾಕಿ ಇವೆ. ಒಟ್ಟು 184 ಅರ್ಜಿಗಳು ಸಾಲ ವಿತರಣೆಗೆ ಬಾಕಿ ಇದೆ. ಯೋಜನೆಯಡಿ ಫಲಾನುಭವಿಯಾಗಿ ಆಯ್ಕೆಯಾದರೂ ಕೆಲವು ಬ್ಯಾಂಕ್‌ಗಳಲ್ಲಿ ಸ್ವ- ನಿಧಿಗೆ ಸಂಬಂಧಿಸಿದಂತೆ ಸಾಲ ಮಂಜೂರಾತಿ ಪ್ರಕ್ರಿಯೆಗೆ ನಿರಾಸಕ್ತಿ ತೋರಿ ಸುತ್ತಿರುವುದರಿಂದ ವಿಳಂಬವಾಗಿದೆ.
Related Articles
ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಬಂಡವಾಳವಾಗಿ ಕೇಂದ್ರ ಸರಕಾರ ಆತ್ಮನಿರ್ಭರ ಯೋಜನೆಯಡಿ ಪಿಎಂ – ಸ್ವನಿಧಿ ಯೋಜನೆಯನ್ನು 2020ರ ಜೂ. 1ರಂದು ಪರಿಚಯಿಸಿತ್ತು. ಯೋಜನೆಯಡಿ ಶೇ. 6 ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ. ಮೊದಲ ಹಂತದಲ್ಲಿ 10 ಸಾವಿರ ಸಾಲ ಇದನ್ನು ಒಂದು ವರ್ಷದಲ್ಲಿ ತೀರಿಸಬೇಕು. ಅವಧಿಯೊಳಗೆ ತೀರಿಸಿದವರಿಗೆ ಆವಶ್ಯಕತೆ ಇದ್ದಲ್ಲಿ 20 ಸಾವಿರ ರೂ. ಸಾಲ ದೊರೆಯುತ್ತದೆ. ಮೂರನೇ ಹಂತದಲ್ಲಿ 50 ಸಾವಿರ ರೂ. ಸಾಲ ದೊರೆಯುತ್ತದೆ.
Advertisement
ಕೆಲವರ ಲೋನ್ ಎನ್‌ಪಿಎ!ಸಾಲ ಪಡೆದುಕೊಂಡವರು ಲೋನ್ ಕಟ್ಟುವ ಬಗ್ಗೆ ಬ್ಯಾಂಕ್‌ನಿಂದ ಫಾಲೋ ಅಪ್ ಮಾಡುತ್ತಾರೆ. ಒಂದಷ್ಟು ಮಂದಿ ಸಾಲ ಪಡೆದು ಕಟ್ಟದೆ ಎನ್‌ಪಿಎ ಆದವರೂ ಇದ್ದಾರೆ. ಎನ್‌ಪಿಎ ಆದರೆ ಸಿಬಿಲ್ ಸ್ಕೋರ್ ಕಡಿಮೆಯಾಗಿ, ಮುಂದಕ್ಕೆ ಸಾಲ ಪಡೆಯಲು ಸಮಸ್ಯೆಯಾಗುತ್ತದೆ. ಕೆಲವರು ಈ ಕಾಳಜಿಯಿಂದಲೂ ಲೋನ್ ಕಟ್ಟಿ ಮುಂದಿನ ಹಂತದ ಸಾಲ ಪಡೆಯುತ್ತಾರೆ ಎನ್ನುತ್ತಾರೆ ಅಧಿಕಾರಿಗಳು. ಕಾದು ಕಾದು ಸುಸ್ತಾದ ಕೆಲವು ಫಲಾನುಭವಿಗಳು ಸಾಲದ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದು, ಮಂಜೂರಾದರೂ ಬ್ಯಾಂಕ್‌ಗೆ ಹೋಗುತ್ತಿಲ್ಲ. ಸಾಲ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಫಲಾನುಭವಿಗಳು ಬರುತ್ತಿಲ್ಲ, ಸ್ಪಂದಿಸು ತ್ತಿಲ್ಲ ಎನ್ನುವ ಕಾರಣ ನೀಡಿ ಬ್ಯಾಂಕ್‌ಗಳು ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಆದರೆ ರಾಜ್ಯಮಟ್ಟದ ಮೇಲಧಿಕಾರಿಗಳ ಸೂಚನೆಯಂತೆ ಇಂತಹ ಅರ್ಜಿಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಪಿಎಂ ಸ್ವ-ನಿಧಿ ನೋಡಲ್ ಅಧಿಕಾರಿಗಳು ಮತ್ತೆ ಬ್ಯಾಂಕ್‌ಗಳಿಗೆ ಕಳುಹಿಸುತ್ತಿದ್ದಾರೆ. ತಿಂಗಳ ಹಿಂದೆ 15 ದಿನಗಳ ಸ್ವ-ನಿಧಿ ಸಾಲ ಮಂಜೂರಾತಿಗೆ ಸಂಬಧಿಸಿ ಪಾಕ್ಷಿಕ ಆಚರಣೆ ನಡೆದಿದ್ದು, ಆಗ ಕೆಲವರ ಅರ್ಜಿಗಳಿಗೆ ಸಾಲ ವಿತರಣೆಯಾಗಿದೆ. ಪಿಎಂ ಸ್ವನಿಧಿ ಯೋಜನೆ ಯಲ್ಲಿ ಮೂರು ಹಂತಗಳಲ್ಲಿ ಬ್ಯಾಂಕ್‌ಗಳ ಮೂಲಕ ಒಟ್ಟು 17.87 ಕೋ.ರೂ. ಸಾಲ ವಿತರಣೆ ಯಾಗಿದೆ. ಸಾಲ ಮಂಜೂರಾದರೂ ಇದು ವರೆಗೆ ಪಡೆದುಕೊಳ್ಳದವರಿಗೆ ಸಾಲ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಬ್ಯಾಂಕ್‌ಗಳಿಂದ ಆಗಿರುವ ಸಮಸ್ಯೆಗಳ ಬಗ್ಗೆ ಈಗಾ ಗಲೇ ಬ್ಯಾಂಕ್‌ಗಳ ಪ್ರಮುಖರ ಸಭೆಯಲ್ಲಿ ಚರ್ಚಿಸಲಾಗಿದೆ.
-ಚಿತ್ತರಂಜನ್‌ದಾಸ್, ಮೇಲ್ವಿಚಾರಕ ಅಧಿಕಾರಿ, ಮನಪಾ