Advertisement

ಸಾರಿಗೆ ಸಿಬ್ಬಂದಿಗೆ ಸ್ವ್ಯಾಬ್‌ ಟೆಸ್ಟ್‌?

06:20 AM May 26, 2020 | Lakshmi GovindaRaj |

ಬೆಂಗಳೂರು: ಬಸ್‌ ಚಾಲಕರೊಬ್ಬರಿಗೆ ಕೋವಿಡ್‌ 19 ವೈರಸ್‌ ಸೋಂಕು ದೃಢಪಟ್ಟ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಹೊರ ಜಿಲ್ಲೆಗಳಿಂದ ಅದರಲ್ಲೂ ಕೆಂಪು ವಲಯ ಪ್ರದೇಶ ದಿಂದ ಬಂದು ಕರ್ತವ್ಯಕ್ಕೆ  ಹಾಜರಾಗುವ ಸಿಬ್ಬಂದಿ ಯನ್ನು ಪರೀಕ್ಷೆಗೊಳಪಡಿಸಲು ಮುಂದಾಗಿದೆ. ಈ ಸಂಬಂಧ ನಿಗಮದ ವ್ಯಾಪ್ತಿಯ ಎಲ್ಲ ವಿಭಾಗೀಯ ನಿಯಂತ್ರಕರಿಗೆ ಸೂಚನೆ ನೀಡಿದೆ.

Advertisement

ಅದರಂತೆ ಹೊರ ಜಿಲ್ಲೆಗಳಿಂದ ಕರ್ತವ್ಯಕ್ಕೆ ಹಾಜರಾಗುವ  ಸಾಧ್ಯವಾದಷ್ಟು ಹೆಚ್ಚು ಸಿಬ್ಬಂದಿಯ ಗಂಟಲು ದ್ರವ ಸಂಗ್ರಹಿಸಿ ಸೋಂಕು ಪರೀಕ್ಷೆಗೊಳ ಪಡಿಸುವಂತೆ ಡಿಎಚ್‌ಒಗಳಿಗೆ ಮನವಿ ಮಾಡು ವಂತೆ ನಿರ್ದೇಶಿಸಲಾಗಿದೆ. ಆದರೆ ನಿಗಮದಲ್ಲಿ  ಕಾರ್ಯನಿರ್ವಹಿಸುವ 30 ಸಾವಿರಕ್ಕೂ ಅಸಿಬ್ಬಂದಿ  ಪೈಕಿ ಅರ್ಧಕ್ಕರ್ಧ ಹೊರಗಿನ ಜಿಲ್ಲೆರಾಗಿದ್ದು, ಪರೀಕ್ಷೆ ಸವಾಲಾಗಿ ಪರಿಣಮಿಸಿದೆ. ಆರೋಗ್ಯ ಇಲಾಖೆಗೆ ಸವಾಲು: ಸೋಂಕು ಪರೀಕ್ಷಾ ಕಿಟ್‌ಗಳು ಸಾಕಷ್ಟಿಲ್ಲ ಹಾಗೂ ಆರೋಗ್ಯ ಸಿಬ್ಬಂದಿ ಕೊರತೆಯೂ ಇದೆ.

ಇದೇ ಕಾರಣಕ್ಕೆ ಮನೆ ಮನೆಗೆಗೆ ತೆರಳಿ ಗಂಟಲು ದ್ರವ ದರಿ ಸಂಗ್ರಹಿಸ ಬೇಕು ಎಂಬ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್‌) ಸಲಹೆಯನ್ನು ಕೈಬಿಡಲಾಗಿದೆ. ಇನ್ನು ಎಲ್ಲೆಡೆ ರ್‍ಯಾಂಡಮ್‌ ಪರೀಕ್ಷೆಗಳು ನಡೆಯುತ್ತಿದ್ದು, ಜತೆಗೆ ಸುಮಾರು 1.15  ಲಕ್ಷ  ವಲಸೆ ಕಾರ್ಮಿಕರು ರಾಜ್ಯದಲ್ಲಿದ್ದು, ಸಾರಿಗೆ ಸಿಬ್ಬಂದಿಯ ಗಂಟಲು ದ್ರವ ಮಾದರಿ ಸಂಗ್ರಹ ಆರೋಗ್ಯ ಇಲಾಖೆಗೆ ಸವಾಲಾಗಿದೆ. ಇದೇ ಕಾರಣಕ್ಕೆ ನಿಗಮದ ವಿಭಾಗೀಯ ನಿಯಂತ್ರಕರು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಮಾಡಿದರೂ ನೀರಸ ಪ್ರತಿಕ್ರಿಯೆ ಬರುತ್ತಿದೆ.

ಹಾಜರಿಗೆ 3 ದಿನ ವೇಟಿಂಗ್‌!: ತುಮಕೂರಿನಿಂದ ಆಗಮಿಸಿದ ಚಾಲಕರೊಬ್ಬರಿಗೆ ಸೋಂಕು ದೃಢಪಟ್ಟ ಬೆನ್ನಲ್ಲೇ ಸೋಮವಾರದಿಂದ ಕೆಎಸ್‌ಆರ್‌ಟಿಸಿ ವ್ಯಾಪ್ತಿಯ ವಿಭಾಗೀಯ ನಿಯಂತ್ರಕರು, ಹೊರ ಜಿಲ್ಲೆಗಳಿಂದ ಕರ್ತವ್ಯಕ್ಕೆ  ಹಾಜರಾಗಲು ಬರುವವರನ್ನು ಮೂರು ದಿನಗಳ ನಂತರ ಬರುವಂತೆ ಹೇಳಿ ಕಳುಹಿಸುತ್ತಿದ್ದಾರೆ! ಭಾನುವಾರ ಸೋಂಕು ದೃಢಪಟ್ಟ ವ್ಯಕ್ತಿಯು ಕರ್ತವ್ಯಕ್ಕೆ ಹಾಜರಾಗುವ ಮುನ್ನ ವಾಸವಿದ್ದ ತುಮಕೂರು ಹಾಗೂ ಕೆಲಸ ಮಾಡುತ್ತಿರುವ  ಮಾಗಡಿ ತಾಲೂಕು ಆರೋಗ್ಯಾಧಿಕಾರಿಯಿಂದ ವೈದ್ಯಕೀಯ ಪ್ರಮಾಣಪತ್ರ ಹಾಜರುಪಡಿಸಿದ್ದರು.

ಆದರೂ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಯನ್ನು ಮೂರು ದಿನಗಳ  “ವೇಟಿಂಗ್‌’ನಲ್ಲಿ ಇಡಲಾಗುತ್ತಿದೆ. ಒಂದು ವೇಳೆ ಪಾಸಿಟಿವ್‌ ಬಂದಿದ್ದರೆ, ಆರೋಗ್ಯ ಇಲಾಖೆ ಸಿಬ್ಬಂದಿಯೇ ಸೋಂಕಿತ ವ್ಯಕ್ತಿಯನ್ನು ಕರೆದೊಯ್ದು ಕ್ವಾರಂಟೈನ್‌ ಮಾಡುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ವಿಭಾಗೀಯ ನಿಯಂತ್ರಕರೊಬ್ಬರು “ಉದಯವಾಣಿ’ಗೆ ತಿಳಿಸಿದರು.

Advertisement

ಘಟನೆಯಿಂದ ಮನೆಮಾಡಿದ ಆತಂಕ: ಈ ಮಧ್ಯೆ ಸೋಂಕಿತ ಬಸ್‌ ಚಾಲಕ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಯೊಂದಿಗೆ ಸಂಪರ್ಕ ಹೊಂದಿದ್ದ. ಶುಕ್ರವಾರ ಬೆಂಗಳೂರಿನಿಂದ ಮಾಗಡಿ ಮಾರ್ಗದಲ್ಲಿ ಮೂರು ಟ್ರಿಪ್‌ ಪೂರೈಸಿದ್ದಾನೆ.  ಮಾಗಡಿಯಲ್ಲಿ ಅದೇ ಸಿಬ್ಬಂದಿಯೊಂದಿಗೆ ವಾಸ್ತವ್ಯ ಮಾಡಿದ್ದ ಎಂದು ಮೂಲಗಳು ತಿಳಿಸಿವೆ. ಇನ್ನು ಚಾಲಕ-ನಿರ್ವಾಹಕರಿಗೆ ಸೂಕ್ತ ವಸತಿ ವ್ಯವಸ್ಥೆ ಇಲ್ಲ ಎಂಬ ಅಪಸ್ವರ ಕೇಳಿಬರುತ್ತಿದೆ.

ಕೆಂಪು ವಲಯದಿಂದ ಬಂದು ಕರ್ತವ್ಯಕ್ಕೆ ಹಾಜರಾಗುವವರಿಗೆ ಆ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ತಪಾಸಣೆಗೊಳಪಡುವಂತೆ ಸೂಚಿಸಲಾಗಿದೆ. ಆದ್ಯತೆ ಮೇರೆಗೆ ಈ ಸಿಬ್ಬಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ,  ಪರೀಕ್ಷೆಗೊಳಪಡಿಸುವಂತೆ ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡುವಂತೆ ವಿಭಾಗೀಯ ನಿಯಂತ್ರಕರಿಗೂ ಸೂಚಿಸಲಾಗಿದೆ. ನಿಗಮವು ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ.
-ಶಿವಯೋಗಿ ಕಳಸದ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next