Advertisement

ಬಿಜೆಪಿ ಸೇರಿದ ಶಾಸಕರ ಮೇಲೆ ಪಕ್ಷಾಂತರ ತೂಗುಗತ್ತಿ

06:25 AM Jan 19, 2018 | Team Udayavani |

ಬೆಂಗಳೂರು: ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕಾರವಾಗುವ ಮುನ್ನವೇ ಇಬ್ಬರು ಶಾಸಕರು ಜೆಡಿಎಸ್‌ ತೊರೆದು ಬಿಜೆಪಿ ಸೇರಿರುವುದು ವಿವಾದಕ್ಕೆ ಕಾರಣವಾಗಿದೆ.

Advertisement

ಸ್ಪೀಕರ್‌ ಅನುಪಸ್ಥಿತಿಯಲ್ಲಿ ಗುರುವಾರ ವಿಧಾನಸಭೆ ಕಾರ್ಯದರ್ಶಿಗಳಿಗೆ ರಾಜೀನಾಮೆ ಪತ್ರ ನೀಡಿದ್ದ ರಾಯಚೂರು ಶಾಸಕ ಡಾ.ಶಿವರಾಜ್‌ ಪಾಟೀಲ್‌, ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್‌ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ
ಕ್ರಮ ಕೈಗೊಳ್ಳುವಂತೆ ಒಂದು ವೇಳೆ ಜೆಡಿಎಸ್‌ ಸ್ಪೀಕರ್‌ಗೆ ದೂರು ನೀಡಿದರೆ ಅವರ ಮೇಲೆ ಪಕ್ಷಾಂತರ ನಿಷೇಧದ ತೂಗುಗತ್ತಿ ನೇತಾಡಲಿದೆ.

ಶಿವರಾಜ್‌ ಪಾಟೀಲ್‌ ಮತ್ತು ಮಾನಪ್ಪ ವಜ್ಜಲ್‌ ಇಬ್ಬರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಪ್ರಸ್ತುತ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಅದು ಅಂಗೀಕಾರವಾಗುವವರೆಗೆ ಜೆಡಿಎಸ್‌ ಶಾಸಕರಾಗಿಯೇ ಮುಂದುವರಿಯುತ್ತಾರೆ.

ಆದರೆ, ರಾಜೀನಾಮೆ ಅಂಗೀಕಾರವಾಗುವ ಮುನ್ನವೇ ಅವರು ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದು, ಇದು ಪಕ್ಷಾಂತರ ನಿಷೇಧ
ಕಾಯ್ದೆಯನ್ವಯ ಅಪರಾಧವಾಗುತ್ತದೆ. ಒಂದು ವೇಳೆ ಅವರ ವಿರುದಟಛಿ ಈ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಜೆಡಿಎಸ್‌ ದೂರು ನೀಡಿದರೆ ಆಗ ಶಾಸಕರು ಅಪಾಯಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕರು, ನಾವು ಬುಧವಾರವೇ ರಾಜೀನಾಮೆ ಪತ್ರದೊಂದಿಗೆ ಸ್ಪೀಕರ್‌ ನಿವಾಸಕ್ಕೆ ತೆರಳಿದ್ದೆವು. ಆದರೆ, ಅವರು ಗುರುವಾರ ವಿಧಾನಸೌಧದ ತಮ್ಮ ಕಚೇರಿಗೆ ಬಂದು ರಾಜೀನಾಮೆ ನೀಡಿ ಎಂದು ಹೇಳಿದ್ದರು. ಅದರಂತೆ ನಾವು ಸ್ಪೀಕರ್‌ ಕಚೇರಿಗೆ ತೆರಳಿದಾಗ ಅವರು ಇರಲಿಲ್ಲ. ಹೀಗಾಗಿ ಕಾರ್ಯದರ್ಶಿಗಳಿಗೆ ರಾಜೀನಾಮೆ ಪತ್ರ ನೀಡಿ ಸ್ಪೀಕರ್‌ಗೆ ತಲುಪಿಸುವಂತೆ ಹೇಳಿದ್ದೇವೆ. ಜತೆಗೆ ಸ್ಪೀಕರ್‌ ಬುಧವಾರ ರಾತ್ರಿ ಹೇಳಿದ್ದ ಮಾತನ್ನೂ ಅವರಿಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.

Advertisement

ಶಾಸಕರಾದ ಮಾನಪ್ಪ ವಜ್ಜಲ್‌ ಹಾಗೂ ಶಿವರಾಜ್‌ ಪಾಟೀಲ್‌ ಸ್ಪೀಕರ್‌ಗೆ ಅಡ್ರೆಸ್‌ ಮಾಡಿ ರಾಜೀನಾಮೆ ನೀಡಿದ್ದಾರೆ. ಸದನದ ನಿಯಮಗಳ ಪ್ರಕಾರ ಅವರು ಸ್ಪೀಕರ್‌ಗೆ ಖುದ್ದು ರಾಜೀನಾಮೆ ಸಲ್ಲಿಸಬೇಕು. ಅದನ್ನು ಸ್ಪೀಕರ್‌ ಗಮನಕ್ಕೆ ತಂದಿದ್ದೇವೆ ಎಂದು ಅವರು ಹೇಳಿದ್ದಾರೆ. ನಾನು ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ಕಳುಹಿಸಿಕೊಡುತ್ತೇನೆ.
–  ಎಸ್‌. ಮೂರ್ತಿ
ವಿಧಾನಸಭಾ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next