Advertisement

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

12:02 AM Nov 25, 2024 | Team Udayavani |

ಚನ್ನಪಟ್ಟಣ: ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲಿಯೇ ಹುಡುಕುತ್ತೇನೆ. ಅಲ್ಲಿಯೇ ಮುಂದಿನ ರಾಜಕೀಯ ಮುಂದುವರಿಸುತ್ತೇನೆ. ಕ್ಷೇತ್ರದಲ್ಲಿ ಪಕ್ಷದ ಮೇಲೆ ದೊಡ್ಡ ಮಟ್ಟದ ಅಭಿಮಾನ ಇದೆ. ಕಾರ್ಯಕರ್ತರ ಜತೆಗೆ ಸದಾ ಇರುತ್ತೇನೆ ಎಂದು ಚನ್ನಪಟ್ಟಣ ಉಪಚುನಾವಣೆಯ ಪರಾಜಿತ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು. ನಿಖೀಲ್‌ ಅವರ ಸೋಲಿನಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ತಾಲೂಕಿನ ಶ್ರೀರಾಂಪುರದ ಜೆಡಿಎಸ್‌ ಕಾರ್ಯಕರ್ತ ಹಾಗೂ ಅಭಿಮಾನಿ ಆಗಿರುವ ಮಂಜುನಾಥ್‌ (ಅಭಿ) ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು.

Advertisement

ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಮುಸ್ಲಿಂ ಮತಗಳು ಬಂದಿಲ್ಲ ಎಂಬ ಮಾಧ್ಯಮದವರು ಪ್ರಶ್ನೆಗೆ, ನನಗೆ ಹೆಚ್ಚಿನ ಮತ ಬಂದಿವೆ. ಆದರೆ ಒಂದು ಸಮುದಾಯದ ಮತಗಳು ಬಂದಿಲ್ಲ. ದೇವೇಗೌಡರ ಕೊಡುಗೆಯನ್ನು ನೆನಪಿಸಿ ಕೊಂಡಿಲ್ಲ, ನಮ್ಮ ಆವಶ್ಯಕತೆ ಅವರಿಗೆ ಇಲ್ಲ ಅನಿಸುತ್ತೆ. ಸೋಲಿನ ಅಂತರದಲ್ಲಿ ಆ ಸಮುದಾಯದವನ್ನು ಬದಿಗಿಟ್ಟು ನೋಡಿದರೆ ಸಮಬಲದ ಹೋರಾಟ ಮಾಡಿದ್ದೇವೆ ಎಂದರು.

ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
ಚಿಕ್ಕಮಗಳೂರು: ಕಡೂರು ಮೂಲದ ಜೆಡಿಎಸ್‌ ಕಾರ್ಯ ಕರ್ತ ಹರ್ಷಿತ್‌ ರಕ್ತದಲ್ಲಿ ಪತ್ರ ಬರೆದು ನಿಖೀಲ್‌ಗೆ ರವಾನಿಸಿದ್ದು, ಸೋಲಿನಿಂದ ಧೃತಿಗೆಡದಂತೆ ಧೈರ್ಯ ತುಂಬಿದ್ದಾರೆ. “ನೀವು ಚುನಾವಣೆಯಲ್ಲಿ ಸೋತಿರ ಬಹುದು. ಆದರೆ ಜನರ ಮನಸ್ಸಿನ ಲ್ಲಿದ್ದೀರಿ. ಒಂದಲ್ಲ ಒಂದು ದಿನ ಒಳ್ಳೆಯತನ ಗೆದ್ದೇ ಗೆಲ್ಲುತ್ತದೆ. ಧೈರ್ಯವಾಗಿರಿ’ ಎಂದು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next