Advertisement

ಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ಸೂರ್ಯಕುಮಾರ್, ದೀಪಕ್ ಚಾಹರ್

10:28 AM Feb 23, 2022 | Team Udayavani |

ಲಕ್ನೋ: ಮುಂಬರುವ ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಂದ ಸೂರ್ಯಕುಮಾರ್ ಯಾದವ್ ಹೊರಬಿದ್ದಿದ್ದಾರೆ. ಮಂಗಳವಾರ ಲಕ್ನೋದಲ್ಲಿ ನಡೆದ ಭಾರತದ ಅಭ್ಯಾಸದಲ್ಲಿ ಕಂಡುಬಂದರೂ 31 ವರ್ಷದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಅವರ ಕೈಯಲ್ಲಿ ಹೇರ್ ಲೈನ್ ಮುರಿತಕ್ಕೆ ಒಳಗಾಗಿದ್ದಾರೆ ಎಂದು ಕ್ರಿಕ್ ಬಜ್ ವರದಿ ತಿಳಿಸಿದೆ.

Advertisement

ಸೂರ್ಯಕುಮಾರ್ ನಿಖರವಾಗಿ ಎಲ್ಲಿ ಮತ್ತು ಯಾವಾಗ ಗಾಯಗೊಂಡರು ಎಂಬುದು ಅಸ್ಪಷ್ಟವಾಗಿದೆ. ಆದರೆ ವರದಿ ಪ್ರಕಾರ ಫೆ, 20 ರಂದು ಈಡನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಅವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಂಡಿರಜ್ಜು ಗಾಯದ ಕಾರಣದಿಂದ ವೇಗಿ ದೀಪಕ್ ಚಾಹರ್ ಕೂಡಾ ಲಕ್ನೋ ಮತ್ತು ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ:ಪ್ರೊ ಕಬಡ್ಡಿ ಸೆಮಿಫೈನಲ್ಸ್‌ಗೆ ಅಖಾಡ ಸಜ್ಜು: ದಿಲ್ಲಿ ವಿರುದ್ಧ ನಡೆದೀತೇ ಬುಲ್ಸ್‌ ದರ್ಬಾರ್‌?

ಬೌಲಿಂಗ್ ವೇಳೆ ಚಾಹರ್ ತನ್ನ ಎರಡನೇ ಓವರ್ ಅನ್ನು ಪೂರ್ಣಗೊಳಿಸದೆ ಮಂಡಿರಜ್ಜು ಗಾಯದಿಂದ ಮೈದಾನದಿಂದ ಹೊರನಡೆದಿದ್ದರು. ಹೀಗಾಗಿ ಅವರು ತಂಡದೊಂದಿಗೆ ಲಕ್ನೋಗೆ ಪ್ರಯಾಣಿಸಿಲ್ಲ ಎಂದು ಕ್ರಿಕ್‌ಬಜ್‌ ವರದಿ ತಿಳಿಸಿದೆ.

Advertisement

ಈ ಸರಣಿಗೆ ಜಸ್ಪ್ರೀತ್ ಬುಮ್ರಾ ಮರಳಿರುವ ಕಾರಣದಿಂದ ಚಾಹರ್ ಗೆ ಬದಲಿ ಆಟಗಾರನನ್ನು ಬಿಸಿಸಿಐ ಹೆಸರಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ವಿರಾಮದ ನಂತರ ವಾಪಸಾಗಿರುವ ಬುಮ್ರಾ ಈ ಸರಣಿಗೆ ಉಪನಾಯಕನಾಗಿಯೂ ಆಯ್ಕೆಯಾಗಿದ್ದಾರೆ.  ಬುಮ್ರಾ ಮಾತ್ರವಲ್ಲದೆ, ಭಾರತ ತಂಡದಲ್ಲಿ ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ವೇಗಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next