Advertisement

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

08:03 PM Dec 19, 2024 | Team Udayavani |

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ ಮರು ಡಾಮರೀಕರಣದ ವೇಳೆ ಹೆದ್ದಾರಿಯ ಪಶ್ಚಿಮ ಬದಿಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದ ಗುತ್ತಿಗೆದಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ಎರ್ಮಾಳು ಕಲ್ಯಾಣಿ ಬಾರ್‌ ಎದುರುಗಡೆಯಲ್ಲಿ ಡಿ. 18ರ ಸಂಜೆಯ ವೇಳೆ ಯಾವುದೇ ವಾಹನವಿಲ್ಲದ ಕಾರಣ ರಸ್ತೆಯನ್ನು ದಾಟುತ್ತಿದ್ದ ಅದಮಾರು ನಿವಾಸಿ ಜಯ ಶೇರಿಗಾರ (65) ಅವರಿಗೆ ಅಪರಿಚಿತ ವಾಹನ ಢಿಕ್ಕಿಯಾಗಿದ್ದು, ಅವರ ಎಡಗಾಲು ಮೂಳೆ ಮುರಿತವುಂಟಾಗಿದೆ.

Advertisement

ಹೆದ್ದಾರಿಯಲ್ಲೇ ಬಿದ್ದಿದ್ದ ಅವರನ್ನು ಉಚ್ಚಿಲದ ಖಾಸಗಿ ಆ್ಯಂಬುಲೆನ್ಸ್ ಮೂಲಕ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಈ ಘಟನೆಯ ಬಳಿಕ ಹೆದ್ದಾರಿಯಲ್ಲಿ ರಸ್ತೆ ವಿಭಾಜಕಗಳನ್ನು ಇರಿಸಲಾಗಿದೆ. ಹೆದ್ದಾರಿ ಗುತ್ತಿಗೆದಾರ ಕಂಪೆನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತದೇಹದ ಗುರುತು ಪತ್ತೆ
ಪಡುಬಿದ್ರಿ: ಹೆಜಮಾಡಿ ನಡಿಕುದ್ರು ಪ್ರದೇಶದಲ್ಲಿ ಡಿ. 18ರ ಸಂಜೆಯ ವೇಳೆ ಪತ್ತೆಯಾದ ಮೃತದೇಹದ ಗುರುತು ಪತ್ತೆಯಾಗಿದ್ದು, ಮೃತರನ್ನು ಮೂಲತಃ ಉಚ್ಚಿಲ ಭಾಸ್ಕರ ನಗರ, ಪ್ರಸ್ತುತ ನಂದಳಿಕೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಜಯ ಎನ್‌. ಸಾಲ್ಯಾನ್‌ (72) ಎಂದು ಗುರುತಿಸಲಾಗಿದೆ.

ಇವರು ಮಂಗಳೂರು ಕದ್ರಿಯ ತಮ್ಮ ಮಗಳ ಮನೆಗೆ ಹೋಗಿದ್ದು, ಡಿ. 17ರ ಸಂಜೆಯ ವೇಳೆಗೆ ಅಲ್ಲಿಂದ ಮನೆಗೆ ಹೋಗುವುದಾಗಿ ಹೊರಟಿದ್ದರು. ಮನೆ ತಲುಪದೇ ಇದ್ದ ಕಾರಣ ಇವರ ನಾಪತ್ತೆ ಬಗ್ಗೆ ಮಂಗಳೂರು ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತ್ರಿಕಾ ವರದಿಯನ್ನು ಗಮನಿಸಿದ ಕದ್ರಿ ಪೊಲೀಸರು ಪಡುಬಿದ್ರಿಯಲ್ಲಿ ಈ ಅಪರಿಚಿತ ಮೃತದೇಹವನ್ನು ಪರಿಶೀಲಿಸುವಂತೆ ಅವರ ಮನೆಯವರಿಗೆ ತಿಳಿಸಿದ್ದರು. ಅದರಂತೆ ಮೃತದೇಹದ ಗುರುತು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next