Advertisement
ಈ ಘಟನೆ ಸಂಜೆ ಸುಮಾರು 6.30ಕ್ಕೆ ಸಂಭವಿಸಿದ್ದು, ಅದ್ಯಪಾಡಿಯಿಂದ ಕೆಂಜಾರಿಗೆ ಕ್ರೇನ್ ಬರುತ್ತಿತ್ತು. ವಿಮಾನ ನಿಲ್ದಾಣದ ಇಳಿಜಾರು ಪ್ರದೇಶದಲ್ಲಿ ಅಪರೇಟರ್‌ನ ನಿಯಂತ್ರಣ ಕಳೆದುಕೊಂಡು ರಾಜ್ಯ ಹೆದ್ದಾರಿ ಬದಿಯಲ್ಲಿರುವ ರಕ್ಷಣಾ ತಡೆಗೋಡೆಗೆ ಢಿಕ್ಕಿ ಹೊಡೆದು ಕಮರಿಗೆ ಮಗುಚಿ ಬಿದ್ದಿದೆ.
ಕ್ರೇನ್ ಅಡಿಗೆ ಸಿಲುಕಿಕೊಂಡ ಆಪರೇಟರ್ ಅವರನ್ನು ಮೇಲೆಕ್ಕೆತ್ತಲು ಸುಮಾರು ಅರ್ಧ ತಾಸು ಕಾರ್ಯಾ ಚರಣೆ ಮಾಡಲಾಗಿದೆ. ಇನ್ನೊಂದು ಕ್ರೇನ್ ಮೂಲಕ ಮೇಲಕ್ಕೆತ್ತಿ ಅದರಡಿಗೆ ಸಿಲುಕಿಕೊಂಡ ಅಪರೇಟರ್ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತು. ಅಪರೇಟರ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳಕ್ಕೆ ಆ್ಯಂಬುಲೆನ್ಸ್ ಬರಲು ಅರ್ಧ ತಾಸು ವಿಳಂಬವಾಗಿತ್ತು.