Advertisement

ಅಪಘಾತದಲ್ಲಿ ಮೃತಪಟ್ಟವರ ಪರಿಹಾರಕ್ಕೆ ಆಸರೆ ಮಾರ್ಗ

06:50 AM Nov 01, 2017 | Team Udayavani |

ಹೊಸದಿಲ್ಲಿ: ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವ ದುರ್ದೈವಿಗಳಿಗೆ ಸರಕಾರಗಳ ವತಿಯಿಂದ ಪರಿಹಾರ ನೀಡುವಾಗ ಅನುಸರಿಸಬೇಕಾದ ಕ್ರಮಗಳನ್ನು ಸುಪ್ರೀಂನ  ಸಂವಿಧಾನ ಪೀಠ ಮಂಗಳವಾರ ನಿಗದಿಗೊಳಿಸಿದೆ. 

Advertisement

ಅದರಂತೆ, ದುರ್ದೈವಿಯು ಖಾಯಂ ಉದ್ಯೋಗಿಯಾಗಿದ್ದಲ್ಲಿ, ಆತನ ವಯಸ್ಸು 40 ವರ್ಷಕ್ಕಿಂತ ಕಡಿಮೆಯಿದ್ದಲ್ಲಿ ಆತನ ವೇತನದ ಶೇ. 50ರಷ್ಟು ಹಣವನ್ನು ಭವಿಷ್ಯದ ಆಸರೆಯ ರೂಪದಲ್ಲಿ ಪರಿಹಾರದ ಜತೆಗೆ ಸೇರಿಸಬೇಕು. ವಯಸ್ಸು 40ರಂದ 50ರೊಳಗಿದ್ದರೆ ಶೇ.30, ವಯಸ್ಸು 50ರಿಂದ 60ರೊಳಗಿದ್ದರೆ ಶೇ.15ರಷ್ಟು ವೇತನ ಸೇರಿಸಬೇಕೆಂದು ಹೇಳಲಾಗಿದೆ. ದುರ್ದೈವಿಯು ಸ್ವಯಂ ಉದ್ಯೋಗಿ, ನಿಶ್ಚಿತ ವೇತನದಾರನಾಗಿದ್ದು ವಯಸ್ಸು 40ರೊಳಗಿದ್ದಲ್ಲಿ ಶೇ.40, ವಯಸ್ಸು 40-50ರೊಳಗಿದ್ದಲ್ಲಿ ಶೇ.25, 50-60 ವರ್ಷದೊ ಳಗಿದ್ದಲ್ಲಿ ಶೇ.10ರಷ್ಟು ವೇತನದ ಹಣವನ್ನು ಪರಿಹಾರದ ಜತೆಗೆ ಸೇರಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next