ಜು. 3, ಆ. 1, ಆ. 31 ಮತ್ತು ಸೆ. 29 ಸೂಪರ್‌ಮೂನ್ ಕಾಣಿಸುವ ದಿನಗಳಾಗಿವೆ.
Advertisement
ಜು. 3ರಂದು ಚಂದ್ರ ಭೂಮಿ ಯಿಂದ 3,61,800 ಕಿ.ಮೀ., ಆ. 1ರಂದು 3,57,530 ಕಿ.ಮೀ., ಆ. 31ರಂದು 3,57,344 ಕಿ.ಮೀ. ಹಾಗೂ ಸೆ. 29ರಂದು 3,61,552 ಕಿ.ಮೀ. ಅಂತರದಲ್ಲಿರುತ್ತಾನೆ. ಶ್ರಾವಣದ ಈ ಹುಣ್ಣಿಮೆಯ ಸೂಪರ್‌ಮೂನ್ ಹೆಚ್ಚಿನ ಪ್ರಭೆಯಿಂದ ಕೂಡಿರುತ್ತದೆ. 4 ಸೂಪರ್‌ಮೂನ್‌ಗಳಲ್ಲಿ ಆ. 31ರ ಸೂಪರ್‌ಮೂನ್ ಭೂಮಿಗಿಂತ ಹೆಚ್ಚು ಸಮೀಪ. ಹೀಗಾಗಿ ಹುಣ್ಣಿಮೆಯ ಚಂದಿರ ಸುಮಾರು 14 ಅಂಶ ದೊಡ್ಡದಾಗಿ ಕಾಣುತ್ತದೆ. 25 ಅಂಶ ಮಾಮೂಲಿ ಹುಣ್ಣಿಮೆಗಿಂತ ಹೆಚ್ಚು ಪ್ರಭೆ ಇರಲಿದೆ.