Advertisement

ಹೈದರಾಬಾದ್‌ಗೆ ವಿಲಿಯಮ್ಸನ್‌ ಬಲ

06:35 AM Apr 30, 2018 | |

ಜೈಪುರ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಸನ್‌ರೈಸರ್ ಹೈದರಾಬಾದ್‌ ತಂಡವು ರವಿವಾರದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವನ್ನು 11 ರನ್ನುಗಳಿಂದ ಸೋಲಿಸಲು ಯಶಸ್ವಿಯಾಗಿದೆ.

Advertisement

ನಾಯಕ ಕೇನ್‌ವಿಲಿಯಮ್ಸನ್‌ ಮತ್ತು ಆರಂಭಿಕ ಅಲೆಕ್ಸ್‌ ಹೇಲ್ಸ್‌ ಅವರ ಸಮಯೋಚಿತ ಆಟದಿಂದಾಗಿ ಹೈದರಾಬಾದ್‌ ತಂಡವು 7 ವಿಕೆಟಿಗೆ 151 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಸುಲಭ ಸವಾಲು ಮತ್ತು ಆರಂಭಿಕ ಅಜಿಂಕ್ಯ ರಹಾನೆ ಅವರ ಹೋರಾಟದ ಅರ್ಧಶತಕದ ಹೊರತಾಗಿಯೂ ರಾಜಸ್ಥಾನ ರಾಯಲ್ಸ್‌ ತಂಡವು 6 ವಿಕೆಟಿಗೆ 160 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ರಶೀದ್‌, ಸಂದೀಪ್‌, ಥಂಪಿ ಮತ್ತು ಕೌಲ್‌ ಅವರ ಉತ್ಕೃಷ್ಟ ಮಟ್ಟದ ಬೌಲಿಂಗ್‌ ಈ ಪಂದ್ಯದಲ್ಲೂ ಮುಂದುವರಿಯಿತು. ಅಲ್ಪ ಮೊತ್ತ ಪೇರಿಸಿಯೂ ಹೈದರಾಬಾದ್‌ ತಂಡವು ಬೌಲರ್‌ಗಳ ಬಲದಿಂದಲೇ ಗೆಲುವು ಸಾಧಿಸಿ ಸಂಭ್ರಮಿಸಿತು. ಈ ಹಿಂದಿನ ಪಂದ್ಯಗಳಲ್ಲಿ ಅಲ್ಪ ಮೊತ್ತ ಪೇರಿಸಿಯೂ ಜಯಭೇರಿ ಬಾರಿಸಿದ್ದ ಹೈದರಾಬಾದ್‌ ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ 12 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿತು.

ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ ಧವನ್‌ ಅವರನ್ನು ಬೇಗನೇ ಕಳೆದುಕೊಂಡರೂ ಹೇಲ್ಸ್‌ ಮತ್ತು ವಿಲಿಯಮ್ಸನ್‌ ತಂಡವನ್ನು ಆಧರಿಸಿದರು. ಅವರಿಬ್ಬರು ದ್ವಿತೀಯ ವಿಕೆಟಿಗೆ 92 ರನ್‌ ಪೇರಿಸಿದ್ದರಿಂದ ತಂಡ ಚೇತರಿಸಿಕೊಂಡಿತು. ನಿಧಾನವಾಗಿ ರನ್‌ವೇಗ ಹೆಚ್ಚಿಸಿದ ಅವರಿಬ್ಬರು ರಾಜಸ್ಥಾನ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದರು. ಹೇಲ್ಸ್‌ 45 ರನ್‌ ಗಳಿಸಿ ಔಟಾದರೆ ವಿಲಿಯಮ್ಸನ್‌ 43 ಎಸೆತಗಳಿಂದ 63 ರನ್‌ ಹೊಡೆದರು. 7 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು.

ವಿಲಿಯಮ್ಸನ್‌ ಔಟಾದ ಬಳಿಕ ತಂಡದ ರನ್‌ವೇಗಕ್ಕೆ ಕಡಿವಾಣ ಬಿತ್ತು. ಪ್ರತಿಯೊಂದು ರನ್ನಿಗೂ ಆಟಗಾರರು ಒದ್ದಾಟ ನಡೆಸಬೇಕಾಯಿತು. ಹೀಗಾಗಿ ತಂಡ 151 ರನ್‌ ಗಳಿಸಲಷ್ಟೆ ಶಕ್ತವಾಯಿತು.

Advertisement

ರಹಾನೆ ಹೋರಾಟ ವ್ಯರ್ಥ
ಗೆಲ್ಲಲು ಸುಲಭ ಸವಾಲಿದ್ದರೂ ರಾಜಸ್ಥಾನ ನಿಧಾನವಾಗಿ ಆಡಿತು. ರಹಾನೆ ಮತ್ತು ಸಂಜು ಸ್ಯಾಮ್ಸನ್‌ ದ್ವಿತೀಯ ವಿಕೆಟಿಗೆ 59 ರನ್ನುಗಳ ಜತೆಯಾಟ ನಡೆಸಿದರು. ಆಬಳಿಕ ತಂಡ ಆಗಾಗ್ಗೆ ವಿಕೆಟ್‌ ಕಳೆದುಕೊಳ್ಳುತ್ತ ಹೋಯಿತು. ವಿಕೆಟ್‌ನ ಒಂದು ಕಡೆ ಗಟ್ಟಿಯಾಗಿ ನಿಂತ ನಾಯಕ ರಹಾನೆ ಗೆಲುವಿಗಾಗಿ ಪ್ರಯತ್ನಿಸಿದರೂ ಯಶಸ್ಸು ಲಭಿಸಿಲ್ಲ. ಇನ್ನಿಂಗ್ಸ್‌ ಪೂರ್ತಿ ಆಡಿದ ಅವರು 65 ರನ್‌ ಗಳಿಸಿ ಔಟಾಗದೆ ಉಳಿದರು. ಟಿ20ಗೆ ಬೇಕಾದ ಬಿರುಸಿನ ಅಥವಾ ಸ್ಫೋಟಕ ಆಟ ಅವರಿಂದ ಬರಲಿಲ್ಲ ಮತ್ತು ಅವರಿಗೆ ಉಳಿದ ಯಾವುದೇ ಆಟಗಾರ ಸಮರ್ಥವಾಗಿ ಬೆಂಬಲವನ್ನೂ ನೀಡಿಲ್ಲ. ಹೀಗಾಗಿ 140 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಸ್ಕೋರುಪಟ್ಟಿ
ಸನ್‌ರೈಸರ್ ಹೈದರಾಬಾದ್‌

ಅಲೆಕ್ಸ್‌ ಹೇಲ್ಸ್‌    ಸಿ ಸ್ಯಾಮ್ಸನ್‌ ಬಿ ಗೌತಮ್‌    45
ಶಿಖರ್‌ ಧವನ್‌    ಬಿ ಗೌತಮ್‌    6
ಕೇನ್‌ ವಿಲಿಯಮ್ಸನ್‌    ಸಿ ಬಟ್ಲರ್‌ ಬಿ ಸೋಧಿ    63
ಮನೀಷ್‌ ಪಾಂಡೆ    ಸಿ ರಹಾನೆ ಬಿ ಉನಾದ್ಕತ್‌    16
ಶಕಿಬ್‌ ಅಲ್‌ ಹಸನ್‌    ಬಿ ಆರ್ಚರ್‌    6
ಯೂಸುಫ್ ಪಠಾಣ್‌    ಸಿ ಕುಲಕರ್ಣಿ ಬಿ ಆರ್ಚರ್‌    2
ವೃದ್ಧಿಮಾನ್‌ ಸಾಹಾ    ಔಟಾಗದೆ    11
ರಶೀದ್‌ ಖಾನ್‌    ಸಿ ಸ್ಟೋಕ್ಸ್‌ ಬಿ ಆರ್ಚರ್‌    1
ಬಾಸಿಲ್‌ ಥಂಪಿ    ಔಟಾಗದೆ    0
ಇತರ:        1
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ)    151
ವಿಕೆಟ್‌ ಪತನ: 1-17, 2-109, 3-116, 4-133, 5-137, 6-143, 7-150
ಬೌಲಿಂಗ್‌:
ಕೃಷ್ಣಪ್ಪ ಗೌತಮ್‌        4-0-18-2
ಧವಳ್‌ ಕುಲಕರ್ಣಿ        2-0-20-0
ಜೋಫ್ರಾ ಆರ್ಚರ್‌        4-0-26-3
ಜೈದೇವ್‌ ಉನಾದ್ಕತ್‌        3-0-33-1
ಐಶ್‌ ಸೋಧಿ        3-0-25-1
ಬೆನ್‌ ಸ್ಟೋಕ್ಸ್‌        3-0-20-0
ಮಹಿಪಾಲ್‌ ಲೊನ್ರೋರ್‌        1-0-8-0
ರಾಜಸ್ಥಾನ ರಾಯಲ್ಸ್‌
ಅಜಿಂಕ್ಯ ರಹಾನೆ    ಔಟಾಗದೆ    65
ರಾಹುಲ್‌ ತ್ರಿಪಾಠಿ    ಬಿ ಸಂದೀಪ್‌    4
ಸಂಜು ಸ್ಯಾಮ್ಸನ್‌    ಸಿ ಹೇಲ್ಸ್‌ ಬಿ ಕೌಲ್‌    40
ಬೆನ್‌ ಸ್ಟೋಕ್ಸ್‌    ಬಿ ಪಠಾಣ್‌    0
ಜೋಸ್‌ ಬಟ್ಲರ್‌    ಸಿ ಧವನ್‌ ಬಿ ರಶೀದ್‌    10
ಮಹಿಪಾಲ್‌ ಲೊನ್ರೋರ್‌    ಸಿ ಸಾಹಾ ಬಿ ಕೌಲ್‌    11
ಕೃಷ್ಣಪ್ಪ ಗೌತಮ್‌    ಸಿ ಧವನ್‌ ಬಿ ಥಂಪಿ    8
ಜೋಫ್ರಾ ಆರ್ಚರ್‌    ಔಟಾಗದೆ    1
ಇತರ:        1
ಒಟ್ಟು  (20 ಓವರ್‌ಗಳಲ್ಲಿ 6 ವಿಕೆಟಿಗೆ)    140
ವಿಕೆಟ್‌ ಪತನ: 1-13, 2-72, 3-73, 4-96, 5-128, 6-139
ಬೌಲಿಂಗ್‌:
ಸಂದೀಪ್‌ ಶರ್ಮ        4-0-15-1
ಶಕಿಬ್‌ ಅಲ್‌ ಹಸನ್‌        4-0-30-0
ಬಾಸಿಲ್‌ ಥಂಪಿ        2-0-26-1
ಸಿದ್ಧಾರ್ಥ್ ಕೌಲ್‌        4-0-23-2
ರಶೀದ್‌ ಖಾನ್‌        4-0-31-1
ಯೂಸುಫ್ ಪಠಾಣ್‌        2-0-14-1
ಪಂದ್ಯಶ್ರೇಷ್ಠ: ಕೇನ್‌ ವಿಲಿಯಮ್ಸನ್‌

Advertisement

Udayavani is now on Telegram. Click here to join our channel and stay updated with the latest news.

Next