Advertisement

ಬಾಲಿವುಡ್‌ ನಟ ಸನ್ನಿ ದೇವಲ್ ಬಿಜೆಪಿ ಸೇರ್ಪಡೆ

08:31 AM Apr 24, 2019 | Vishnu Das |

ಹೊಸದಿಲ್ಲಿ : ಬಾಲಿವುಡ್‌ನ‌ ಖ್ಯಾತ ನಟ ಸನ್ನಿ ದೇವಲ್ ಅವರು ಮಂಗಳವಾರ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

Advertisement

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಪಿಯೂಷ್‌ ಗೋಯಲ್‌ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಪಕ್ಷ ಸೇರ್ಪಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸನ್ನಿ ದೇವಲ್ ನನ್ನ ತಂದೆ ಅಟಲ್‌ ಜಿ ಅವರ ಅಭಿಮಾನಿಯಾಗಿ ಅವರೊಂದಿಗೆ ಕೆಲಸ ಮಾಡಿದ್ದರು. ಈಗ ನಾನು ಮೋದಿ ಜಿ ಅವರನ್ನು ಬೆಂಬಲಿಸಿ ಅವರೊಂದಿಗೆ ಕೆಲಸ ಮಾಡಲು ಬಿಜೆಪಿ ಸೇರಿದ್ದೇನೆ ಎಂದರು.

ದಿಗ್ಗಜ ಬಾಲಿವುಡ್‌ ನಟ ಧರ್ಮೇಂದ್ರ ಅವರ ಪುತ್ರರಾಗಿರುವ 62 ರ ಹರೆಯದ ಸನ್ನಿ ದೇವಲ್ ಹಲವು ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿ ಖ್ಯಾತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next