Advertisement

Yemen; ಕೇರಳದ ನರ್ಸ್‌ಗೆ ಗಲ್ಲು: ಯೆಮೆನ್‌ ಅಧ್ಯಕ್ಷ ಸಮ್ಮತಿ

11:20 PM Dec 31, 2024 | Team Udayavani |

ಹೊಸದಿಲ್ಲಿ: ಯೆಮೆನ್‌ ಪ್ರಜೆಯನ್ನು ಹತ್ಯೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ಕೇರಳದ ನರ್ಸ್‌ ನಿಮಿಷಾ ಪ್ರಿಯಾ ಅವರಿಗೆ ಗಲ್ಲು ಶಿಕ್ಷೆ ನೀಡಲು ಅಲ್ಲಿನ ಅಧ್ಯಕ್ಷ ರಷದ್‌- ಅಲ್‌-ಅಮಿನಿ ಅನುಮೋದನೆ ನೀಡಿದ್ದಾರೆ. ಮೂಲಗಳ ಪ್ರಕಾರ ಇನ್ನು ಒಂದು ತಿಂಗಳಲ್ಲಿ ಶಿಕ್ಷೆ ಜಾರಿಯಾಗಲಿದೆ.

Advertisement

ಯೆಮೆನ್‌ ಅಧ್ಯಕ್ಷರ ತೀರ್ಮಾನದ ಬಗ್ಗೆ ಅವರ ತಾಯಿ ಪ್ರೇಮಾ ಕುಮಾರಿ ಆಕ್ಷೇಪ ವ್ಯಕ್ತಪಡಿದ್ದಾರೆ. ಜತೆಗೆ ಕೇಂದ್ರ ಸರಕಾರ‌ ಸೂಕ್ತ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಏನಿದು ಪ್ರಕರಣ?: ಕೇರಳದ ಪಾಲಕ್ಕಾಡ್‌ ಮೂಲದ ನಿಮಿಷ ಪ್ರಿಯಾ 2014ರಲ್ಲಿ ಯೆಮೆನ್‌ನಲ್ಲಿ ತಮ್ಮದೇ ಆಗಿರುವ ಕ್ಲಿನಿಕ್‌ ತೆರೆಯಲು ಮುಂದಾ­ಗಿದ್ದರು. ಅದಕ್ಕಾಗಿ ಅಲ್ಲಿನ ನಿಯಮ­ದಂತೆ ಸ್ಥಳೀಯ ತಲಾಲ್‌ ಅಬೊ ಮಹದಿ ಜತೆಗೆ ಪಾಲುದಾರಿಕೆ ಮಾಡಿ­ಕೊಂಡಿದ್ದರು. ಒಂದು ಹಂತದಲ್ಲಿ ಆತನ ಜತೆಗೆ ಭಿನ್ನಾಭಿಪ್ರಾಯ ಉಂಟಾ­ಗಿತ್ತು. ಈ ನಡುವೆ ನರ್ಸ್‌ ದೇಶ ತೊರೆಯದಂತೆ ಆತ ಪಾಸ್‌ಪೋರ್ಟ್‌ ವಶಪಡಿಸಿಕೊಂಡಿದ್ದ. ಅದನ್ನು ವಶಪ­ಡಿಸಿ­ಕೊಳ್ಳುವ ನಿಟ್ಟಿನಲ್ಲಿ ಅವರು ಆತನಿಗೆ  ಮತ್ತು ಬರುವ ಇಂಜೆಕ್ಷನ್‌ ನೀಡಿದ್ದರು. ಅದರ ಓವರ್‌ ಡೋಸ್‌ ಆದ ಪರಿಣಾಮ ಆತ ಮೃತಪಟ್ಟಿದ್ದ.

Advertisement

Udayavani is now on Telegram. Click here to join our channel and stay updated with the latest news.

Next