Advertisement

ಕೋವಿಡ್ 19 ಸೂರ್ಯನ ಬೆಳಕಿಗೆ ಕೂಡಲೇ ನಾಶವಾಗುತ್ತೆ: ಅಮೆರಿಕ ವಿಜ್ಞಾನಿಗಳ ಅಧ್ಯಯನ!

10:06 AM Apr 25, 2020 | Nagendra Trasi |

ವಾಷಿಂಗ್ಟನ್: ನೂತನ ಕೋವಿಡ್ 19 ಮಹಾಮಾರಿ ಸೂರ್ಯನ ಬೆಳಕಿಗೆ ಕೂಡಲೇ ನಾಶವಾಗಲಿದೆ ಎಂದು ಹೊಸ ಸಂಶೋಧನೆಯಿಂದ ಕಂಡುಹಿಡಿಯಲಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ಅಧ್ಯಯನ ವರದಿಯನ್ನು ಇನ್ನೂ ಸಾರ್ವಜನಿಕವಾಗಿ ಪ್ರಕಟಿಸಿಲ್ಲ, ಇನ್ನಷ್ಟು ಹೆಚ್ಚುವರಿ ಅಧ್ಯಯನಕ್ಕಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

ಹೋಮ್ ಲ್ಯಾಂಡ್ ಸೆಕ್ಯುರಿಟಿ ಸೆಕ್ರಟರಿ ಇಲಾಖೆಯ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಲಹೆಗಾರ ವಿಲಿಯಂ ಬ್ರೈಯಾನ್ ಅವರು ಶ್ವೇತಭವನದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ, ಸೂರ್ಯನ ಆಲ್ಟ್ರಾವಯೋಲೆಟ್ ಕಿರಣಗಳು ಸೋಂಕಿನ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಸರ್ಕಾರದ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಸೋಂಕು ಹರಡುವುದು ನಿಂತುಹೋಗಲಿದೆ ಎಂಬ ಆಶಾಭಾವನೆ ಹೊಂದಲಾಗಿದೆ ಎಂದು ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.

ಕೋವಿಡ್ 19 ವೈರಸ್ ಗೆ ಸಂಬಂಧಿಸಿದಂತೆ ನಮ್ಮ ನಿಖರವಾದ ಪರಿಶೀಲನೆಯ ಪ್ರಕಾರ ಸೂರ್ಯನ ಬೆಳಕು ವೈರಸ್ ಅನ್ನು ಕೊಲ್ಲುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು. ಸೂರ್ಯನ ಕಿರಣದಿಂದ ಭೂಮಿ ಮತ್ತು ಗಾಳಿಯಲ್ಲಿರುವ ಸೋಂಕನ್ನು ಅದು ಕೊಲ್ಲಲಿದೆ ಎಂದು ತಿಳಿಸಿದ್ದಾರೆ.

ಕೋವಿಡ್ 19 ವೈರಸ್ ಅನ್ನು ಉಷ್ಣಾಂಶ ಮತ್ತು ತೇವಾಂಶ ಎರಡರಲ್ಲಿಯೂ ಹೇಗೆ ಕಾರ್ಯನಿರ್ವಹಿಸಬಲ್ಲದು ಎಂಬುದನ್ನು ಪರೀಕ್ಷಿಸಿದ್ದೇವೆ. ವೈರಸ್ ಅನ್ನು ಅತೀಯಾದ ಉಷ್ಣಾಂಶ ಮತ್ತು ಅತೀ ತೇವಾಂಶದಲ್ಲಿ ಇಟ್ಟು ಪರೀಕ್ಷಿಸಿರುವುದಾಗಿ ವರದಿ ವಿವರಿಸಿದೆ.ಆದರೆ ಈ ಅಧ್ಯಯನ ವರದಿಯನ್ನು ಇನ್ನೂ ವಿಮರ್ಶೆಗಾಗಿ ಬಿಡುಗಡೆಗೊಳಿಸಿಲ್ಲ. ಹೀಗಾಗಿ ಈ ಬಗ್ಗೆ ಸ್ವತಂತ್ರ ತಜ್ಞರು ಪ್ರತಿಕ್ರಿಯೆ ನೀಡುವುದು ತುಂಬಾ ಕಷ್ಟದ ಕೆಲಸವಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next