Advertisement

CWC23; ಭಾರತ, ಆಸ್ಟ್ರೇಲಿಯಾ ಅಲ್ಲ…: ಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ಗವಾಸ್ಕರ್

11:23 AM Sep 30, 2023 | Team Udayavani |

ಮುಂಬೈ: ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಅನ್ನು ವೀಕ್ಷಿಸಲು ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆರಂಭಿಕ ಪಂದ್ಯದಲ್ಲಿ ಅಹಮದಾಬಾದ್ ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ 2019 ರ ವಿಶ್ವಕಪ್‌ನ ಮೊದಲ ರನ್ನರ್ ಅಪ್ ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಲಿದೆ. ಆತಿಥೇಯ ರಾಷ್ಟ್ರ ಭಾರತ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ತನ್ನ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

Advertisement

ಕೂಟದ ಬಗ್ಗೆ ಮಾತನಾಡಿರುವ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮುಂಬರುವ ವಿಶ್ವಕಪ್ ಗೆಲ್ಲುವ ಫೇವರೆಟ್ ತಂಡವನ್ನು ಆಯ್ಕೆ ಮಾಡಿದ್ದಾರೆ.

ಹಾಲಿ ಚಾಂಪಿಯನ್ ಜೋಸ್ ಬಟ್ಲರ್ ಅವರ ನಾಯಕತ್ವದ ಇಂಗ್ಲೆಂಡ್ ಈ ಬಾರಿಯೂ ಕಪ್ ಗೆಲ್ಲಬಹುದು ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ಇಂಗ್ಲೆಂಡ್ ತಂಡವು ಸೊಗಸಾದ ಬೌಲಿಂಗ್ ಲೈನ್-ಅಪನ್ನು ಪಡೆದುಕೊಂಡಿದೆ. ಆಟವನ್ನು ಬದಲಾಯಿಸಬಲ್ಲ ಮೂವರು ‘ವಿಶ್ವ ದರ್ಜೆಯ ಆಲ್-ರೌಂಡರ್‌ಗಳನ್ನು’ ಒಳಗೊಂಡಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ:ಅಧಿಕಾರಕ್ಕಾಗಿ ದೇವೇಗೌಡರೆದುರು ಕೈಕಟ್ಟಿ ನಿಂತ ಛದ್ಮವೇಷಧಾರಿ: ಸಿಎಂ ವಿರುದ್ಧ ಎಚ್ ಡಿಕೆ ಟೀಕೆ

Advertisement

“ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್, ಅವರು ಹೊಂದಿರುವ ರೀತಿಯ ಪ್ರತಿಭೆಯಿಂದಾಗಿ, ಬ್ಯಾಟಿಂಗ್ ಕ್ರಮಾಂಕದಲ್ಲಿ ಅವರು ಎರಡು ಅಥವಾ ಮೂರು ವಿಶ್ವ ದರ್ಜೆಯ ಆಲ್-ರೌಂಡರ್‌ಗಳನ್ನು ಹೊಂದಿದ್ದಾರೆ. ಅವರು ಎರಡೂ ಬ್ಯಾಟ್‌ ಮತ್ತು ಮತ್ತು ಬಾಲ್ ನೊಂದಿಗೆ ಆಟವನ್ನು ಬದಲಾಯಿಸಬಹುದು. ಅವರು ಉತ್ತಮ ಬೌಲಿಂಗ್ ಲೈನ್-ಅಪ್, ಅನುಭವಿ ಬೌಲಿಂಗ್ ಲೈನ್-ಅಪನ್ನು ಸಹ ಹೊಂದಿದ್ದಾರೆ. ಆದ್ದರಿಂದ ಅವರು ಗೆಲ್ಲುವ ಫೇವರೇಟ್ ಎಂದು ಗವಾಸ್ಕರ್ ಹೇಳಿದರು.

ಮತ್ತೊಂದೆಡೆ, ಭಾರತದ ಮಾಜಿ ಆಲ್‌ ರೌಂಡರ್ ಇರ್ಫಾನ್ ಪಠಾಣ್ ಟೀಮ್ ಇಂಡಿಯಾವನ್ನು ಬೆಂಬಲಿಸಿದರು. ಟೀಂ ಇಂಡಿಯಾ ಎಲ್ಲಾ ಅಗತ್ಯ ಬಾಕ್ಸ್‌ ಗಳನ್ನು ಟಿಕ್ ಮಾಡುತ್ತಿದ್ದಾರೆ ಮತ್ತು ಐಸಿಸಿ ಟ್ರೋಫಿಯನ್ನು ಎತ್ತುವ ನೆಚ್ಚಿನವರಲ್ಲಿ ಒಬ್ಬರು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next