Advertisement
ಪುರಸಭೆಯಾಗಲಿದೆಯೇ?ಸುಳ್ಯ ನ.ಪಂ.ನ ಜನಸಂಖ್ಯೆ 2011ರ ಜನಗಣತಿ ಪ್ರಕಾರ 19,958 ಆಗಿದ್ದು, ಇದು ಪುರಸಭೆಯನ್ನಾಗಿ ಮಾಡಲು ಅಡ್ಡಿಯಾಗಿತ್ತು. ಪುರಸಭೆ ಮಾಡಲು 20,000ಕ್ಕಿಂತ ಹೆಚ್ಚು ಜನಸಂಖ್ಯೆ ಅಗತ್ಯ ವಿದೆ. ಹಾಗಾಗಿ ಸಮೀಪದ ಆಲೆಟ್ಟಿ ಗ್ರಾಮದ ಅರಂಬೂರು ಹಾಗೂ ಜಾಲ್ಸೂರು ಗ್ರಾಮದ ಕುಕ್ಕಂದೂರನ್ನು ನಗರ ವ್ಯಾಪ್ತಿಗೆ ಸೇರಿಸಿ ಇದನ್ನು ಪುರಸಭೆಯನ್ನಾಗಿ ಮಾಡಲು ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ರಾಜ್ಯ ಸರಕಾರ ಪರಿಶೀಲನೆ ನಡೆಸಿದ್ದು, ಮುಂದಿನ ವರ್ಷ ಸುಳ್ಯವನ್ನು ಪುರಸಭೆ ಎಂದು ಘೋಷಿಸುವ ಸಾಧ್ಯತೆಯೂ ಇದೆ. 2018 ಮಾರ್ಚ್‌ನಲ್ಲಿ ಈಗಿನ ನ.ಪಂ.ಆಡಳಿತದ ಅವಧಿ ಮುಗಿಯಲಿದ್ದು, ಆ ವೇಳೆಗೆ ಸುಳ್ಯ ಪುರಸಭೆಯಾಗಲಿದೆಯೇ ಅಥವಾ 20 ವಾರ್ಡ್‌ಗಳ ನ.ಪಂ. ಆಗಿಯೇ ಮುಂದುವರಿಯಲಿದೆಯೇ ಎನ್ನುವುದು ರಾಜ್ಯ ಸರಕಾರ ನಿರ್ಧಾರದ ಮೇಲಿದೆ. ಪುರಸಭೆಯಾದರೆ ಸುಳ್ಯಕ್ಕೆ ಹೆಚ್ಚಿನ ಅನುದಾನ ಸಿಗಲಿದೆ.
ಪುರಸಭೆ ಮಾಡಲು ಹಿಂದೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರಕಾರವು ಪರಿಶೀಲನೆ ನಡೆಸಿತ್ತು. ಆ ಬಳಿಕ ಪ್ರಕ್ರಿಯೆ ಮುಂದುವರಿಯದ ಕಾರಣ ಜುಲೈ ತಿಂಗಳಲ್ಲಿ ವಿಶೇಷ ಸಭೆ ನಡೆಸಿ ನ.ಪಂ.ನ್ನು ಪುರಸಭೆಯನ್ನಾಗಿ ಮಾಡಬೇಕೆಂದು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಿದ್ದೇವೆ. ನ.ಪಂ.ವ್ಯಾಪ್ತಿಗೆ ಸೇರಿಸುವ ಹತ್ತಿರದ ಯಾವ ಊರು ಸೂಕ್ತ ಎನ್ನುವ ಬಗ್ಗೆ ಸರ್ವೆ ನಡೆಸಬೇಕಾಗಿದೆ.
– ಶೀಲಾವತಿ ಮಾಧವ, ಅಧ್ಯಕ್ಷೆ , ನಗರ ಪಂಚಾಯತ್ ಸುಳ್ಯ