Advertisement
ಪುರಸಭೆ ವ್ಯಾಪ್ತಿಯ ಬೀಡು ಬದಿ ವಾರ್ಡ್ನಲ್ಲಿ ಪೌರ ಕಾರ್ಮಿಕರು ಹುಲ್ಲು ಕತ್ತರಿಸುತ್ತಿದ್ದಾಗ ಬಿಯರ್ ಬಾಟಲಿ ಸಹಿತ ಮದ್ಯದ ಬಾಟಲಿಗಳು ಸಿಗುತ್ತಿದ್ದು ಇದರಿಂದಾಗಿ ಪೌರ ಕಾರ್ಮಿಕರ ಜೀವಕ್ಕೆ ಅಪಾಯವುಂಟಾಗುತ್ತಿದೆ. ಬುಧವಾರ ಬೀಡು ಬದಿ ವಾರ್ಡ್ನಲ್ಲಿ ಬರುವ ಪೊಲಿಪು ರಸ್ತೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಬಿಯರ್ ಬಾಟಲಿಗಳು ಸಿಕ್ಕಿವೆ.
Related Articles
Advertisement
ಎಲ್ಲೆಂದರಲ್ಲಿ ಕಸ, ಬಾಟಲಿ ಎಸೆದು ಪೌರ ಕಾರ್ಮಿಕರು, ಸಾರ್ವಜನಿಕರು ಮತ್ತು ಪ್ರಾಣಿ ಪಕ್ಷಿಗಳ ಜೀವದೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸುವಂತೆ ಪೌರ ಕಾರ್ಮಿಕ ರವಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಾರ್ವಜನಿಕರ ಸಹಕಾರ ಅಗತ್ಯಪುರಸಭೆ ವ್ಯಾಪ್ತಿಯಲ್ಲಿ ಸ್ವತ್ಛತೆ ಕಾಪಾಡಲು ವಿಶೇಷ ಆದ್ಯತೆ ನೀಡಲಾಗುತ್ತಿದೆ. ಪ್ರತೀ ವಾರ್ಡ್ಗಳಿಗೆ ತೆರಳಿ ಕಸ ಮತ್ತು ತ್ಯಾಜ್ಯ ಸಂಗ್ರಹಿಸುತ್ತಿದ್ದು ಜನರು ಕಸ ಸಂಗ್ರಹಿಸುವ ವಾಹನಗಳಿಗೆ ಹಸಿ ಕಸ ಮತ್ತು ಒಣ ಕಸ ಸಹಿತ ತ್ಯಾಜ್ಯಗಳನ್ನು ನೀಡುವ ಮೂಲಕ ಸಹಕರಿಸಬೇಕಿದೆ. ಪುರಸಭೆಯ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಪ್ರತೀಯೊಬ್ಬ ನಾಗರಿಕರೂ ಯೋಚಿಸಬೇಕಿದೆ. ಸಾರ್ವಜನಿಕರ ಸಹಕಾರವಿಲ್ಲದೇ ಸ್ವತ್ಛ ಕಾಪು – ಸುಂದರ ಕಾಪು ಕಲ್ಪನೆ ಈಡೇರಲು ಸಾಧ್ಯವಿಲ್ಲ. ಎಲ್ಲರೂ ಸಹಕರಿಸುವ ಅಗತ್ಯವಿದೆ.
-ಅನಿಲ್ ಕುಮಾರ್, ಸದಸ್ಯರು, ಕಾಪು ಪುರಸಭೆ