Advertisement
ಅಧ್ಯಕ್ಷ ಮೋಹನದಾಸ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಷ್ಟ್ರೀಯ ಹಬ್ಬಗಳ ಆಚರಣೆ ನೆಪದಲ್ಲಿ ಪೌರಕಾರ್ಮಿಕರನ್ನು ಕರೆಸಿ ತಾಲೂಕು ಕಚೇರಿಯ ಶೌಚಾಲಯ ತೊಳೆಸಲಾಗುತ್ತದೆ. ಹೋಗದೇ ಇದ್ದರೆ ನೋಟಿಸ್ ನೀಡುತ್ತೇವೆ ಎಂದು ಹೆದರಿಸಲಾಗುತ್ತದೆ, ಇದು ಸರಿಯಲ್ಲ ಎಂದು ಚಂದ್ರಶೇಖರ ಖಾರ್ವಿ ಹೇಳಿದರು. ಆಗ ಸ್ಪಂದಿಸಿದ ಅಧ್ಯಕ್ಷರು ಇನ್ನು ಕಳುಹಿಸದಂತೆ ಸೂಚಿಸಿದರು.
ಕೋಡಿ ಭಾಗದಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ಅನಧಿಕೃತ ಬೋಟಿಂಗ್ ನಡೆಸ ಲಾಗುತ್ತಿದೆ. ಪುರಸಭೆ ಶುಲ್ಕ ವಿಧಿಸಬೇಕು ಎಂದು ದೇವಕಿ ಸಣ್ಣಯ್ಯ ಹೇಳಿದರು. ಎಲ್ಲ ನಿಯಮಗಳನ್ನೂ ಪಾಲಿಸಿ, ಅನುಮತಿ ಪಡೆದೇ ಬೋಟಿಂಗ್ ನಡೆಸಲಾಗುತ್ತಿದೆ, ಸಮುದ್ರ ವ್ಯಾಪ್ತಿಯಲ್ಲಿ ಚಲಿಸುವುದಕ್ಕೆ ಪುರಸಭೆ ಅನುಮತಿ ಬೇಕಿಲ್ಲ, ಪ್ರವಾ ಸೋದ್ಯಮ, ಬಂದರು ಇಲಾಖೆಯದ್ದು ಸಾಕು ಎಂದು ಗಿರೀಶ್ ಹೇಳಿದರು.
Related Articles
ಪುರಸಭೆಯಲ್ಲಿ ಉಳಿಕೆ ಅನುದಾನದಲ್ಲಿ ಕಾಮಗಾರಿ ನಡೆಸಲು ಪ್ರಸ್ತಾವನೆ ಕೇಳ ಲಾಯಿತು. ಎಷ್ಟು ಅನುದಾನ ಎಂದು ಅನೇಕ ಬಾರಿ ಸದಸ್ಯರು ಕೇಳಿದರೂ ಅಧಿಕಾರಿಗಳು ಹೇಳಿರಲಿಲ್ಲ. ಬಳಿಕ 1.7 ಕೋ.ರೂ. ಎಂದರು. ಕುಡ್ಸೆಂಪ್ ಲೋನ್ ಬಾಕಿಯಿದ್ದು ಕಟ್ಟುವ ಬಗ್ಗೆ, ಕಟ್ಟಡ ಬಾಡಿಗೆಯಿಂದ ಬಂದ ಹಣ ಇತರ ಕೆಲಸಗಳಿಗೆ ಬಳಸುವಂತಿಲ್ಲ, ಕಟ್ಟಡಗಳ ನಿರ್ಮಾಣಕ್ಕೇ ಬಳಸಬೇಕಿದ್ದರ ಬಗ್ಗೆ ಚರ್ಚೆ ನಡೆಯಿತು. ಹೊರಗುತ್ತಿಗೆ ಆಧಾರದ 2 ಸಿಬಂದಿಗೆ ವೇತನ ಆಗದಿರುವುದು ಚರ್ಚೆಗೆ ಬಂತು. ಉಪಾಧ್ಯಕ್ಷೆ ವನಿತಾ ಬಿಲ್ಲವ, ಮುಖ್ಯಾಧಿಕಾರಿ ಆನಂದ ಜೆ. ಉಪಸ್ಥಿತರಿದ್ದರು.
Advertisement
ಸದ್ದು ಮಾಡಿದ ಸುದಿನ ವರದಿಗಳು-ಗಾಂಧಿ ಪಾರ್ಕ್ ಪಾಳುಬಿದ್ದದ್ದು, ಮಕ್ಕಳ ಕ್ರೀಡಾ ಉಪಕರಣಗಳು ತುಕ್ಕು ಹಿಡಿದು ಹಾಳಾಗಿದ್ದರ ಬಗ್ಗೆ ಗಿರೀಶ್ ಜಿ.ಕೆ. ಗಮನ ಸೆಳೆದರು.
-ಫ್ಲೈಓವರ್ ಕೆಳಗೆ ಪಾರ್ಕಿಂಗ್, ಸುಂದರೀಕರಣ ಕುರಿತು ಪ್ರಕಟವಾದ ವರದಿಯನ್ನು ಚಂದ್ರಶೇಖರ ಖಾರ್ವಿ ಪ್ರಸ್ತಾವಿಸಿ, ಹೆದ್ದಾರಿ ಪ್ರಾಧಿಕಾರಕ್ಕೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅನೇಕ ಬಾರಿ ಪತ್ರ ಬರೆದಿದ್ದು ಫ್ಲೈಓವರ್ ಕೆಳಗೆ ಪಾರ್ಕಿಂಗ್‌ಗೆ ಅನುಮತಿ ನೀಡಿಲ್ಲ, ಪ್ರಾಧಿಕಾರದವರನ್ನು ಕರೆಸಿ ಮಾತಾಡಬೇಕು ಎಂದರು. ಪ್ರಾಧಿಕಾರದವರನ್ನು ಕರೆಸಲು ನಿರ್ಣಯಿಸಲಾಯಿತು.
-ಯುಜಿಡಿ ಕಾಮಗಾರಿ ಅಪೂರ್ಣವಾಗಲು ಅಧಿಕಾರಿಗಳೂ ಕಾರಣ. ಭೂಮಂಜೂರಾತಿ ಆಗಿದ್ದರೂ ಕಡತ ಇನ್ನೂ ಎಸಿ ಕಚೇರಿಯ ಸಿಬಂದಿಯೊಬ್ಬರ ಬಳಿಯಿದೆ. ಪುರಸಭೆಯಿಂದಲೂ ಕೇಳುತ್ತಿಲ್ಲ. ಇಂತಹ ನಿರ್ಲಕ್ಷ್ಯ ಯಾಕೆ? ಎಂದು ಪ್ರಶ್ನಿಸಲಾಯಿತು. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸುವುದಾಗಿ ಅಧ್ಯಕ್ಷ ಮೋಹನದಾಸ ಶೆಣೈ ಹೇಳಿದರು.
-ತಾ.ಪಂ. ಬಳಿ ಇರುವ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಸ್ಥಳಾವಕಾಶ ಕಡಿಮೆಯಿದ್ದು, ಸಭಾಭವನ ರೀತಿ ಮಾಡು ಮಾಡಲು 4.15 ಲಕ್ಷ ರೂ. ಬೇಕಿದೆ. 1 ಲಕ್ಷ ರೂ. ವಿಧಾನಪರಿಷತ್ ಸದಸ್ಯರಿಂದ ದೊರೆತಿದೆ. ಉಳಿಕೆ ಹಣ ಪುರಸಭೆ ಅಂಗವಿಕಲರಿಗಾಗಿ ಕಾಯ್ದಿರಿಸಿದ ಶೇ.5ರ ಅನುದಾನದಲ್ಲಿ ನೀಡುವ ಬಗ್ಗೆ ಚರ್ಚೆ ನಡೆಯಿತು.