Advertisement

Sullia: ನೆಟ್ಟಾರು ಶಾಲಾ ಬೀಗ ಒಡೆದು ಒಳನುಗ್ಗಿದ ಕಳ್ಳರು

10:22 PM Jul 27, 2024 | Team Udayavani |

ಸುಳ್ಯ: ಬೆಳ್ಳಾರೆ ಸಮೀಪದ ನೆಟ್ಟಾರು ಪ್ರಾಥಮಿಕ ಶಾಲೆಯ ಬೀಗ ಒಡೆದು ಕಳ್ಳರು ಒಳನುಗ್ಗಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

Advertisement

ಶಾಲೆಯ ಬೀಗ ಒಡೆಯಲು ಪಿಕ್ಕಾಸನ್ನು ಬಳಕೆ ಮಾಡಿಕೊಂಡ ಕಳ್ಳರು ಬೀಗ ಒಡೆದ ಬಳಿಕ  ಕಚೇರಿಯಲ್ಲಿದ್ದ ಕಪಾಟನ್ನು ಜಾಲಾಡಿದ್ದಾರೆ. ಆದರೆ ಯಾವುದೇ ಸೊತ್ತನ್ನು ಕಳವು ಮಾಡದೇ ಪಿಕ್ಕಾಸನ್ನು ಮಾತ್ರ ಅಲ್ಲೇ ಬಿಟ್ಟು ತೆರಳಿದ್ದಾರೆ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಎಸ್‌.ಡಿ.ಎಂ.ಸಿ. ಅಧ್ಯಕ್ಷರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next