ಬೆಂಗಳೂರು: ಭಗವದ್ಗೀತೆ ಹಾಗೂ ಮಹಾಭಾರತವನ್ನು ಮೊದಲು ಲಿಪಿಬದ್ಧಗೊಳಿಸಿದ್ದು ಮಹಾಗಣಪತಿ. ಭಗವದ್ಗೀತೆ ಬರೆದು ಶ್ರೀಕೃಷ್ಣನ ಅನುಗ್ರಹ ಪಡೆಯಿರಿ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ತಿಳಿಸಿದರು.
ಪ್ರಯೋಗ ಮಂಟಪ ವತಿಯಿಂದ ಬೆಂಗಳೂರಿನ ಹನುಮಂತನಗರದ ಶ್ರೀ ರಾಮಾಂಜನೇಯ ಬೇಟ್ಟದಲ್ಲಿ ಭಾನು ವಾರ ಹಮ್ಮಿಕೊಂಡಿದ್ದ “ಪರಿಸರ ಗಣಪ’ ಜೇಡಿ ಮಣ್ಣಿನಲ್ಲಿ ಗಣಪ ಕಾರ್ಯಾ ಗಾರದಲ್ಲಿ ಅವರು ಮಾತನಾಡಿದರು. ನಾವೆಲ್ಲರೂ ಸಹ ಜೆಡಿ ಮಣ್ಣಿನ ಗಣಪತಿ ನಿರ್ಮಿಸಲು ಹೊರಟಿದ್ದೇವೆ. ಇದಕ್ಕೂ ಕೋಟಿ ಗೀತಾ ಲೇಖರ ಯಜ್ಞಕ್ಕೂ ನಿಕಟ ಸಂಬಂಧವಿದೆ. ಕೋಟಿ ಗೀತಾ ಲೇಖರ ಯಜ್ಞ ಎಂದರೆ ಒಂದು ಕೋಟಿ ಜನರಿಂದ ಭಗವದ್ಗೀತೆ ಬರೆಸಿ ಕಷ್ಣನಿಗೆ ಸಮರ್ಪಣೆ ಮಾಡುವುದಾಗಿದೆ ಎಂದು ತಿಳಿಸಿದರು.
ಕೋಟಿ ಗೀತಾ ಗಣಪತಿ ಲೇಖರ ಯಜ್ಞ ಮೊದಲು ಮಾಡಿದ್ದು ಗಣಪತಿ. ಭಗವದ್ಗೀತೆಯನ್ನು ಮೊದಲು ಬರೆದಿದ್ದು ಗಣಪತಿ. ವೇದವ್ಯಾಸರು ಮಹಾಭಾರತ ವನ್ನು ಬರೆಯಲು ಹುಡು ಕಿದಾಗ ಗಣಪತಿಯನ್ನು ಆಯ್ಕೆ ಮಾಡಿ ದರು. ನಾನು ಬರೆಯುತ್ತೇನೆ. ಆದರೆ, ನೀವು ಕಾಯಿಸಬಾರದು ಎಂಬುದಾಗಿ ಗಣಪತಿ ಒಂದು ಷರತ್ತು ವಿಧಿಸಿದ್ದ. ನಾನು ಬರೆಯುವುದರೊಳಗೆ ಇನ್ನೊಂದು ಶ್ಲೋಕ ಹೇಳಬೇಕು ಎಂದು ಹೇಳಿದ್ದ. ವೇದ ವ್ಯಾಸರು ಇದಕ್ಕೆ ಒಪ್ಪಿದ್ದರು. ಮಹಾಭಾರತ ವನ್ನು ಮೊದಲು ಲಿಪಿಬದ್ಧಗೊಳಿಸಿದ್ದು ಮಹಾಗಣಪತಿ. ಆ ಮಹಾಭಾರತದ ಒಳಗೆ ಇರುವಂತದ್ದು ಭಗವದ್ಗೀತೆ. ಆದ್ದರಿಂದ ಗಣಪತಿ ನಿರ್ಮಿಸುವಾಗ ಭವದ್ಗೀತೆ ಬರೆಯುವುದು ಗಣಪತಿಗೆ ಅತ್ಯಂತ ಇಷ್ಟವಾದ ಕಾರ್ಯ ಎಂದು ವಿವರಿಸಿದರು.
ಕೃಷ್ಣನ ಸನ್ನಿದಾನ ಗೀತೆಯಲ್ಲಿದೆ: ಕೃಷ್ಣನ ಸನ್ನಿದಾನ ಗೀತೆಯಲ್ಲಿದೆ. ಹೀಗಾಗಿಯೇ ಕೋರ್ಟ್‌ನಲ್ಲೂ ಪ್ರಮಾಣ ಮಾಡುವ ವೇಳೆ ಭಗವದ್ಗೀತೆ ಪುಸ್ತಕ ಮುಟ್ಟಿ ಪ್ರಮಾಣ ಮಾಡಿಸುತ್ತಾರೆ. ಮಕ್ಕಳು ಇದನ್ನು ಬರೆದರೆ ಬುದ್ಧಿಶಕ್ತಿ ಜಾಸ್ತಿ ಆಗುತ್ತದೆ. ಗಣಪತಿ ಹಾಗೂ ಕೃಷ್ಣನಿಗೆ ಇಷ್ಟವಾದಂತಹ ಗೀತಾ ಲೇಖನ ಯಜ್ಞದಲ್ಲಿ ಪಾಲ್ಗೊಂಡರೆ ಗಣಪತಿ ಹಾಗೂ ಶ್ರೀಕೃಷ್ಣನ ಅನುಗ್ರಹ ಆಗುತ್ತದೆ. ಅರ್ಜುನ ಯುದ್ಧದ ಕೊನೆಯ ಹಂತದಲ್ಲಿ ಇನ್ನೇನು ಯುದ್ಧ ಪ್ರಾರಂಭವಾಗಬೇಕೆನ್ನು ವಷ್ಟರಲ್ಲಿ ಅರ್ಜುನನಿಗೆ ನಿರಾಸೆಯಾಗಿ ಅರಣ್ಯಕ್ಕೆ ಹೋಗಿ ಸ್ವಾಮಿಗಳಾಗುತ್ತೇನೆ. ಯುದ್ಧ ಮಾಡುವುದಿಲ್ಲ ಎಂದು ಹೇಳಿ ದಾಗ ಶ್ರೀಕೃಷ್ಣ ಭಗವದ್ಗೀತೆ ಉಪದೇಶಿಸಿ ಧೈರ್ಯ, ಸ್ಫೂರ್ತಿ ಕೊಟಿದ್ದಾನೆ ಎಂದರು.
4ನೇ ಬಾರಿ ಪರ್ಯಾಯ ಪೀಠ ಏರುವವರಿದ್ದೇವೆ: ನಾವು ಒಂದು ಕೋಟಿ ಜನರಿಂದ ಭಗವದ್ಗೀತೆ ಬರೆಸಿ ಉಡುಪಿ ಕೃಷ್ಣನಿಗೆ ಸಮರ್ಪಣೆ ಮಾಡಿಸಬೇಕೆಂದು ಸಂಕಲ್ಪ ಮಾಡಿದ್ದೇವೆ. ಬರುವ ಜನವರಿ 18 ರಿಂದ ಸರಿಯಾಗಿ 4 ತಿಂಗಳ ನಂತರ ಉಡುಪಿ ಯಲ್ಲಿ ಎರಡು ವರ್ಷ ನಮ್ಮ ಪರ್ಯಾಯ ನಡೆಯಲಿಕ್ಕಿದೆ. ನಾಲ್ಕನೇ ಬಾರಿಗೆ ನಾವು ಪರ್ಯಾಯ ಪೀಠವನ್ನು ಏರುವವರಿದ್ದೇವೆ. ಅದರ ಅಂಗವಾಗಿ ಶ್ರೀಕೃಷ್ಣನಿಗೆ ಒಂದು ಕೋಟಿ ಜನರಿಂದ ಭಗವದ್ಗೀತೆ ಬರೆಸಿ ಸಮರ್ಪಣೆ ಮಾಡಬೇಕೆಂದು ನಮ್ಮ ಸಂಕಲ್ಪವಾಗಿದೆ ಎಂದು ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.