Advertisement

ಸಾಗರದಡಿ ಸಕ್ಕರೆಯ ನಿಕ್ಷೇಪ ಪತ್ತೆ! ಸಮುದ್ರದ ತಳದಲ್ಲಿ “ಸುಕ್ರೋಸ್‌’ಮಾದರಿಯಲ್ಲಿ ಸಂಗ್ರಹ

11:09 AM May 25, 2022 | Team Udayavani |

ಬ್ರೆಮೆನ್‌: ಜರ್ಮನಿಯ ಬ್ರೆಮೆನ್‌ ನಗರದಲ್ಲಿರುವ “ಮ್ಯಾಕ್ಸ್‌ಪ್ಲಾಂಕ್‌ ಇನ್ಸ್ಟಿಟ್ಯೂಟ್‌ ಆಫ್ ಮರೈನ್‌ ಮೈಕ್ರೋಬಯಾಲಜಿ ಸಂಸ್ಥೆ’ಯ ವಿಜ್ಞಾನಿಗಳು, ಜಗತ್ತಿನ ಸಮುದ್ರಗಳ ತಳದಲ್ಲಿರುವ ಹಸಿರು ಹುಲ್ಲುಗಾವಲುಗಳ ಅಡಿಯಲ್ಲಿ ಅಪಾರವಾದ ಸಕ್ಕರೆಯ ನಿಕ್ಷೇಪವಿದೆ ಎಂಬ ಅಚ್ಚರಿಯ ವಿಚಾರವನ್ನು ಹೊರಹಾಕಿದ್ದಾರೆ.

Advertisement

ಅಸಲಿಗೆ, ವಿಜ್ಞಾನಿಗಳು ಪತ್ತೆ ಹಚ್ಚಲು ಹೋಗಿದ್ದೇ ಒಂದು ಅವರಿಗೆ ಅಲ್ಲಿ ಸಿಕ್ಕಿದ್ದೇ ಮತ್ತೊಂದು! ಸಮುದ್ರದಾಳದ ಹಲ್ಲುಗಾವಲುಗಳು ಅತಿ ಶ್ರೇಷ್ಠ ಇಂಗಾಲದ ಹೀರುವಿಕೆಯ ಘಟಕಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಒಂದು ಚದುರ ಕಿ.ಮೀ. ವಿಸ್ತೀರ್ಣದ ಹುಲ್ಲುಗಾವಲು, ನೆಲದ ಮೇಲಿನ ಒಂದು ಕಾಡು ಹೀರಿಕೊಳ್ಳುವ ಇಂಗಾಲಕ್ಕಿಂತ 35 ಪಟ್ಟು ಹೆಚ್ಚು ಹೀರಿಕೊಳ್ಳುತ್ತದೆ.

ಹಾಗಾಗಿ, ಈ ಸಾಗರದಡಿ ಹುಲ್ಲುಗಾವಲುಗಳ ಇಂಗಾಲದ ಹೀರುವಿಕೆಯ ಶಕ್ತಿಯನ್ನು ಮತ್ತಷ್ಟು ಅಧ್ಯಯನ ಮಾಡುವ ಸಲುವಾಗಿ ಈ ವಿಜ್ಞಾನಿಗಳು ಇಟಲಿ ಬಳಿಯ ಎಲಾº ದ್ವೀಪದ ಬಳಿಯ ಸಾಗರದಡಿ ಧುಮುಕಿದ್ದರು. ಅಲ್ಲಿ ಅವರು ಸಂಶೋಧನೆಯಲ್ಲಿ ನಿರತರಾಗಿದ್ದಾಗ, ಹುಲ್ಲುಗಾವಲಿನ ಅಡಿಯಲ್ಲಿ ಸಕ್ಕರೆಯ ದೈತ್ಯ ನಿಕ್ಷೇಪಗಳೇ ಅಡಗಿರುವುದನ್ನು ಪತ್ತೆ ಹಚ್ಚಿದ್ದರು.

ಇದನ್ನೂ ಓದಿ:ಸಿಂಧುದುರ್ಗ: ಪ್ರವಾಸಿಗರ ದೋಣಿ ಮುಳುಗಿ ಇಬ್ಬರ ಸಾವು; ಮತ್ತಿಬ್ಬರ ಸ್ಥಿತಿ ಗಂಭೀರ

ಅದಾದ ನಂತರ ವಿಶ್ವದ ನಾನಾ ಭಾಗಗಳಲ್ಲಿರುವ ಸಮುದ್ರದಡಿಯ ಹುಲ್ಲುಗಾವಲುಗಳ ಕೆಳಗೂ ಸಂಶೋಧನೆ ನಡೆಸಲಾಗಿದ್ದು ಇಡೀ ವಿಶ್ವದ ಸಮುದ್ರದಾಳದಲ್ಲಿ ಒಟ್ಟಾರೆ 0.6ರಿಂದ 1.3 ಮಿಲಿಯನ್‌ ಟನ್‌ನಷ್ಟು ಸಕ್ಕರೆಯ ನಿಕ್ಷೇಪವಿರುವುದು ಪತ್ತೆಯಾಗಿದೆ.

Advertisement

ಇದು, 3,200 ಕೋಟಿ ಕೋಕಾಕೋಲ ಬಾಟಲಿಗಳಲ್ಲಿರುವ ಸಕ್ಕರೆಗೆ ಸರಿಸಮವಾದದ್ದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next