Advertisement
ಇದೇ ಸಂದರ್ಭದಲ್ಲಿ ಸದಾಚಾರ ಸ್ಮೃತಿ ಪಾರಾಯಣ ಸಮರ್ಪಣೆ , ಮಹಿಳೆಯರಿಂದ ಶ್ರೀ ಲಕ್ಷ್ಮಿ ಶೋಭಾನೆ ಮತ್ತು ಮಧ್ವನಾಮ ಸಹಿತ ಪಂಚರತ್ನ ಸುಳಾದಿಗಳ ಪಾರಾಯಣವು ನೆರವೇರಿದ್ದು ಬಹು ವಿಶೇಷ ವಾಗಿತ್ತು. ನಾಡಿನ ವಿವಿಧ ಭಾಗಗಳಿಂದ ಮತ್ತು ಹೊರರಾಜ್ಯಗಳಿಂದ ಬಂದಂತಹ ಭಕ್ತರು ಹಾಗೂ ವನಿತೆಯರು ಈ ಸೇವ ಕಾರ್ಯದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.
Related Articles
ಸಮಸ್ತ ಭಕ್ತರು ಒಂಬತ್ತು ದಿನಗಳ ಕಾಲ ನಡೆದ ಐತಿಹಾಸಿಕ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ನಾಡಿನ ಮತ್ತು ಹೊರನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಜನ ಹಲವು ಯತಿಗಳ ಸಮ್ಮುಖದಲ್ಲಿ ಧನ್ಯತೆಯನ್ನು ಮೆರೆದಿದ್ದಾರೆ . ಸೋಸಲೆ ಗುರುಗಳ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವಕ್ಕೆ ನಾಡಿನ ಹಲವು ಯತಿಗಳು ಸಾಕ್ಷಿಯಾಗಿದ್ದು ಒಂದು ವಿಶೇಷ. ಮಧ್ವ ಪೀಠದ ಮಠದ ಇತಿಹಾಸದಲ್ಲಿ ಇದು ಒಂದು ವಿಶೇಷ ಮೈಲಿಗಲ್ಲು.
Advertisement
*ಡಿ. ಪಿ . ಅನಂತಾಚಾರ್ಯ ಮಠದ ಮುಖ್ಯಸ್ಥರು
ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ನಾಲ್ವರು ಯುವಕರು ಸುಧಾ ಪಂಡಿತರಾಗಿ ಮನ್ನಣೆ ಗಳಿಸಿದ ವಿಶೇಷ ಸಂದರ್ಭದಲ್ಲಿ ಸಾವಿರಾರು ಭಕ್ತರು, 20 ಕ್ಕೂ ಹೆಚ್ಚು ಮಠಾಧಿಪತಿಗಳು ಹಾಜರಿದ್ದು ಶುಭ ಹಾರೈಸಿದ್ದಾರೆ. ಸುಧಾ ಮಂಗಳ ಎಂದರೆ ಅದು ಹತ್ತು ಘಟಿಕೋತ್ಸವಗಳಿಗೆ ಸಮನಾದ ವಿದ್ವತ್ ಸಭೆ ಮತ್ತು ಪದವಿ ಪ್ರದಾನ ಸಮಾರಂಭ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂತಹ ಒಂದು ಭವ್ಯ ಸಮಾರಂಭ ನಮ್ಮ ನಿರೀಕ್ಷೆಗೂ ಮೀರಿ ಸಂಪನ್ನಗೊಂಡಿದೆ. ನಮ್ಮ ಮಠದ ಕಾರ್ಯಕರ್ತರು, ಸ್ವಯಂ ಸೇವಕರು ಮತ್ತು ಸಮಸ್ತ ಭಕ್ತ ಗಣ ನೀಡಿದ ಸಹಕಾರ ಮಹೋನ್ನತವಾದದ್ದು .*ಡಾ. ಡಿ. ಪಿ. ಮಧು ಸೂದನಾಚಾರ್ಯ ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಸ್ವಾಮೀಜಿ ಆಶೀರ್ವಚನ.
ಸೊಸಲೆ ಶ್ರೀ ವ್ಯಾಸರಾಜರ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಮಾರೋಪ ಆಶೀರ್ವಚನವನ್ನು ನೀಡಿ, ವಿದ್ವತ್ ಪ್ರಪಂಚಕ್ಕೆ ನಾಲ್ವರು ಯುವ ಮತ್ತು ನವ ಪಂಡಿತರನ್ನು ಕೊಡುಗೆಯಾಗಿ ನೀಡಿದ ಈ ಸುಧಾಮಂಗಳ ಮಹೋತ್ಸವ ಸಂಪೂರ್ಣವಾಗಿ ಯಶಸ್ವಿಯಾಗಿದೆ . ಇಂದಿನ ಯುವಕರು ಧರ್ಮ ಮತ್ತು ಸಂಸ್ಕೃತಿಯನ್ನು ಪಾಲಿಸಿಕೊಂಡು ಅಖಂಡ ಭಾರತದ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಆಗಬೇಕು ಎಂದು ಆಶಿಸುತ್ತೇವೆ ಎಂದರು. ವ್ಯಾಸರಾಜರ ಮಠವು ಸದಾ ಕಾಲ ಸನಾತನ ಧರ್ಮದ ಪಾಲನೆಗೆ ಮತ್ತು ಪರಂಪರೆಯ ರಕ್ಷಣೆಗೆ ಬದ್ಧವಾಗಿದೆ. ಮುಂಬರುವ ವರ್ಷಗಳಲ್ಲಿ ಇಂತಹ ಸುಧಾಮಂಗಳ ಸಮ್ಮೇಳನಗಳನ್ನು ಪ್ರತಿವರ್ಷವೂ ಆ ಯೋಜನೆ ಮಾಡಲು ಸಂಕಲ್ಪ ಮಾಡಲಾಗಿದೆ . ಶ್ರೀ ಹರಿವಾಯು ಗುರುಗಳು ಮತ್ತು ಶ್ರೀ ವ್ಯಾಸರಾಜರು ಈ ಕಾರ್ಯವನ್ನು ಸುಗಮವಾಗಿ ನಡೆಸಲಿ ಎಂದು ಪ್ರಾ ರ್ಥಿಸುತ್ತಿದ್ದೇನೆ ಎಂದು ಹೇಳಿದರು. ನಾಡಿಗೆ ಸೂಕ್ತ ಕಾಲದಲ್ಲಿ ಮಳೆ ಮತ್ತು ಬೆಳೆಗಳು ಲಭಿಸಲಿ. ಸಮಸ್ತ ಮಾನವ ಕೋಟಿ ಸುಖ ಮತ್ತು ಶಾಂತಿಯಿಂದ ಜೀವಿಸಲಿ. ಎಲ್ಲರಲ್ಲಿಯೂ ಸದಾಚಾರ ಸದ್ವಿಚಾರ ಮತ್ತು ಸನ್ನಡತೆಗಳು ವಿಜೃಂಭಿಸಲಿ. ಆ ಮೂಲಕ ಭಾರತ ವಿಶ್ವಗುರುವಾಗಿ ಮೆರೆಯಲಿ. ಇದಕ್ಕೆ ನಮ್ಮ ನಾಡಿನ ಮಠ ಮತ್ತು ಪೀಠಗಳು ಸದಾ ಸ್ಪಂದಿಸುತ್ತವೆ ಎಂದು ಸೋಸಲೆ ಶ್ರೀಗಳು ನುಡಿದರು.