Advertisement
ಮುಂದಿನ 2 ವರ್ಷಗಳು ಅಂದರೆ 2025 ಮತ್ತು 2026ರಲ್ಲಿ ಉತ್ತರ ಪ್ರದೇಶ, ದಿಲ್ಲಿ, ಕೇರಳ, ತಮಿಳುನಾಡು ಸೇರಿ ಹಲವು ರಾಜ್ಯಗಳು ವಿಧಾನಸಭಾ ಚುನಾವಣೆ ಎದುರಿಸಲಿವೆ. ಇದೇ ಅವಧಿಯಲ್ಲಿ ಕರ್ನಾಟಕ ಸೇರಿ ಆಯಾ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಕೂಡ ನಡೆಯಲಿವೆ. ಇದೆಲ್ಲದಕ್ಕೂ ಭದ್ರಬುನಾದಿ ಹಾಕಲು ಮುಂದಿನ ಎರಡು ದಿನಗಳ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಮೂಲಕ ಮುನ್ನುಡಿ ಬರೆಯಲಾಗುತ್ತಿದೆ.
Related Articles
Advertisement
ರಾಜ್ಯ ಕಾಂಗ್ರೆಸ್ಗೂ ಸಿಗಲಿದೆ ಬಲಇಡೀ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸ್ವತಃ ಕರ್ನಾಟಕ ಆತಿಥ್ಯ ನೀಡುತ್ತಿದೆ. ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಅದರ ಅಧ್ಯಕ್ಷರೂ ಆಗಿದ್ದಾರೆ. ಸಹಜವಾಗಿ ಅದು ರಾಜ್ಯದಲ್ಲಿ ಪಕ್ಷ ಮತ್ತಷ್ಟು ಬಲಗೊಳ್ಳಲು ಪುಷ್ಟಿ ನೀಡಲಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದರ ಫಲ ಕೂಡ ಸಿಗುವ ಸಾಧ್ಯತೆ ಇದೆ. ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಕ್ಷೇತ್ರಗಳನ್ನು ಗೆದ್ದು ಬೀಗುತ್ತಿರುವ ಕಾಂಗ್ರೆಸ್ಗೆ ಮೂರು ಕ್ಷೇತ್ರ ಉಪಚುನಾವಣೆಯಲ್ಲೂ ಅಪೂರ್ವ ಗೆಲುವು ದಕ್ಕಿದೆ. ಅದು ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಈ ಮಧ್ಯೆ ನಿರೀಕ್ಷಿತ ಸ್ಥಾನಗಳು ಸಿಕ್ಕಿಲ್ಲ ಎಂಬ ಅಸಮಾಧಾನದ ನಡುವೆಯೇ ಲೋಕಸಭಾ ಚುನಾವಣೆಯಲ್ಲಿ ಒಂದರಿಂದ ಒಂಬತ್ತಕ್ಕೆ ಜಿಗಿದಿದೆ. ಈಗ ಶತಮಾನೋತ್ಸವ ನಂತರ ದೊರೆಯುವ ಬಲದೊಂದಿಗೆ ಆಡಳಿತಾರೂಢ ಕಾಂಗ್ರೆಸ್, ವಿಪಕ್ಷ ಲೆಕ್ಕಕ್ಕೇ ಇಲ್ಲ ಎನ್ನುವಂತೆ ಬಿಂಬಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ.
1924ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಪೂರೈಸಿದ್ದು, ಆ ಪ್ರಯುಕ್ತ ಶತಮಾನೋತ್ಸವದ ಆಚರಣೆಗೆ ಸಿದ್ಧತೆ ಮಾಡಿಕೊಂಡಿದೆ. ಡಿ.26 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ, ಸುವರ್ಣ ಸೌಧದ ಪಕ್ಕದಲ್ಲಿ ಗಾಂಧೀಜಿಯವರ ಪ್ರತಿಮೆ ಅನಾವರಣದ ಕಾರ್ಯಕ್ರಮವಿದ್ದು, 27ರಂದು ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ ಅಂದು ಏನಾಗಿತ್ತು?-
– 1924ರ ಡಿಸೆಂಬರ್ 26, 27ರಂದು ನಡೆದ ಅಧಿವೇಶನದಲ್ಲಿ ಗಾಂಧಿ ಅಧ್ಯಕ್ಷರಾಗಿದ್ದರು
– ರಾಜ್ಯದ ಗಂಗಾಧರ ದೇಶಪಾಂಡೆ ಹಾಗೂ ನೆಹರೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿದ್ದರು
– ದೇಶದ ವಿವಿಧೆಡೆಯಿಂದ 1844 ಪ್ರತಿನಿಧಿಗಳು ಭಾಗವಹಿಸಿದ್ದರು. 16 ನಿರ್ಣಯ ಕೈಗೊಳ್ಳಲಾಗಿತ್ತು
– ಕಾಂಗ್ರೆಸ್ ನಾಯಕರು ಸ್ವಾತಂತ್ರÂ ಹೋರಾಟದ ನಾಯಕತ್ವ ವಹಿಸಿಕೊಂಡು ಮಾರ್ಗದರ್ಶನ ನೀಡಿದ್ದರು ಇಂದು ಏನಾಗುತ್ತಿದೆ?
– ಇಂದು ರಾಜ್ಯ ಮಲ್ಲಿಕಾರ್ಜನ ಖರ್ಗೆ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷತೆ ವಹಿಸಿದ್ದಾರೆ
– ಬೆಳಗಾವಿಯ ಅದೇ ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದೆ
– ಇಂದಿನ ಪರಿಸ್ಥಿತಿಯಲ್ಲಿ ದೇಶ ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಬಗ್ಗೆ ಚರ್ಚೆ ನಡೆಯಲಿದೆ
– ಪಕ್ಷದ ಹಾಲಿ, ಮಾಜಿ ಸಿಎಂಗಳು, ಶಾಸಕಾಂಗ ಪಕ್ಷದ ನಾಯಕರು ಸೇರಿ ಪ್ರತಿನಿಧಿಗಳ ಭಾಗಿ ಅಧಿವೇಶನದ ಉದ್ದೇಶಗಳು….
– ಕೇಂದ್ರ ಸರಕಾರದ ಒಂದು ದೇಶ ಒಂದು ಚುನಾವಣೆ ಪ್ರಬಲವಾಗಿ ವಿರೋಧಿಸುವುದು
– ಕೊನೇ ಪಕ್ಷ ಒಂದು ಕಡೆಯಾದರೂ ಬ್ಯಾಲೆಟ್ ಪೇಪರ್ ಪ್ರಯೋಗಕ್ಕೆ ಆಯೋಗದ ಮೇಲೆ ಒತ್ತಡ
– ಒಂದು ರಾಷ್ಟ್ರ ಒಂದು ತೆರಿಗೆ ವೈಫಲ್ಯಗಳನ್ನು ಜನರಿಗೆ ತಲುಪಿಸುವುದು.
– ರಾಜ್ಯ ಸೇರಿ ಕಾಂಗ್ರೆಸ್ ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ಬಾರದಂತೆ ನೋಡಿಕೊಳ್ಳುವುದು – ವಿಜಯ ಕುಮಾರ ಚಂದರಗಿ