Advertisement

ಮೆಟ್ರೋ ಸೆಟ್‌ನಲ್ಲಿ ಕೋಟಿಗೊಬ್ಬ-3

01:02 PM Mar 14, 2019 | Sharanya Alva |

ನಟ ಸುದೀಪ್‌ ಈಗಾಗಲೇ “ಪೈಲ್ವಾನ್‌’ ಚಿತ್ರ ಮುಗಿಸಿ ಈಗ “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿ ಬಿಝಿ. ಈ ಎರಡೂ ಚಿತ್ರಗಳು ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿವೆ. “ಪೈಲ್ವಾನ್‌’ ಚಿತ್ರದಲ್ಲಿ ಸುದೀಪ್‌ ಈ ಹಿಂದೆ ಕಾಣಿಸಿಕೊಳ್ಳದಂತಹ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಅದಕ್ಕೆ ಪೂರಕವಾಗಿ “ಪೈಲ್ವಾನ್‌’ ಚಿತ್ರದ ಟೀಸರ್‌ ಕೂಡಾ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಇನ್ನು, “ಕೋಟಿಗೊಬ್ಬ-3′ ಮೇಲೂ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ಕಾರಣ, “ಕೋಟಿಗೊಬ್ಬ-2′ ಚಿತ್ರದ ಯಶಸ್ಸು. “ಕೋಟಿಗೊಬ್ಬ-2′ ಚಿತ್ರ ಅಭಿಮಾನಿಗಳನ್ನು ರಂಜಿಸಿತ್ತು. ಈಗ “ಕೋಟಿಗೊಬ್ಬ-3′ ಚಿತ್ರೀಕರಣ ಕೂಡಾ ಜೋರಾಗಿ ನಡೆಯುತ್ತಿದೆ. ಈ ಚಿತ್ರ ಅಭಿಮಾನಿಗಳಿಗೆ ಮತ್ತಷ್ಟು ಮಜಾ ಕೊಡುತ್ತದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಆ್ಯಕ್ಷನ್‌ ದೃಶ್ಯಗಳಿಗಾಗಿ ಮೆಟ್ರೋ ರೈಲು ಹಳಿ ಸೆಟ್‌ ಹಾಕಲಾಗಿದೆ. ಮೆಟ್ರೋ ಸ್ಟೆಷನ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆಯಾ ಎನ್ನುವ ಮಟ್ಟಕ್ಕೆ ಮಿನರ್ವ ಮಿಲ್‌ ನಲ್ಲಿ ಸೆಟ್‌ ನಿರ್ಮಿಸಲಾಗಿದೆ. ಇಲ್ಲಿ ಚಿತ್ರದ ಪ್ರಮುಖ ಆ್ಯಕ್ಷನ್‌ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತದೆ.

ಲಾಲ್‌ಗ‌ುಡಿ ಇಳಯರಾಜಾ ಕಲಾ ನಿರ್ದೇಶನದಲ್ಲಿ ಈ ಸೆಟ್‌ ನಿರ್ಮಾಣವಾಗಿದೆ. ಸುದೀಪ್‌ ಕೂಡಾ “ಕೋಟಿಗೊಬ್ಬ-3′ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ. “ಕೋಟಿಗೊಬ್ಬ’ ಚಿತ್ರದ ಒಂದೊಂದು ಸೀನ್‌ ಕೂಡ ಖುಷಿಕೊಡುತ್ತದೆ.  ಇಡೀ ಚಿತ್ರದಲ್ಲಿ ಮಜಾನೇ ತುಂಬಿದೆ.

ಇದು ಟಿಪಿಕಲ್‌ “ಕೋಟಿಗೊಬ್ಬ’. ದೊಡ್ಡ ಸೆಟ್‌ಗಳು ಇಲ್ಲಿವೆ. ಯಾರೂ ಇದುವರೆಗೆ ಮೆಟ್ರೋ ಸೆಟ್‌ ಹಾಕಿಲ್ಲ. ಅದಕ್ಕಾಗಿ ತುಂಬಾ ದಿನ ಶ್ರಮಿಸಲಾಗಿದೆ. ಐರನ್‌ ಮೋಲ್ಡ್‌ನಲ್ಲೇ ನಿರ್ಮಿಸಲಾಗಿದ್ದು, ತುಂಬ ಖರ್ಚು ಮಾಡಲಾಗಿದೆ. ದೊಡ್ಡ ಫಾರ್ಮೆಟ್‌ನಲ್ಲಿ ಕೆಲಸವಾಗಿದೆ’ ಎಂದು ಖುಷಿಯಿಂದ ಹೇಳುತ್ತಾರೆ ಸುದೀಪ್‌. ಈ ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next