Advertisement
ಇನ್ನು, ಸುದೀಪ್ ಅವರ “ವಿಕ್ರಾಂತ್ ರೋಣ’ ಆ್ಯಕ್ಷನ್ ಅಡ್ವೆಂಚರ್ ಶೈಲಿಯ ಚಿತ್ರವಾಗಿದ್ದು, 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3ಡಿ ಬಿಡುಗಡೆಯನ್ನು ಕಾಣಲಿದೆ. ಅನೂಪ್ ಭಂಡಾರಿಯವರ ನಿರ್ದೇಶನ, ಜಾಕ್ ಮಂಜುನಾಥ್ ಹಾಗೂ ಶಾಲಿನಿ ಮಂಜುನಾಥ್‌ರವರ ನಿರ್ಮಾಣ, ಅಲಂಕಾರ್ ಪಾಂಡಿಯನ್ ಅವರ ಸಹ-ನಿರ್ಮಾಣ ಈ ಚಿತ್ರಕ್ಕಿದೆ. ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಚಿತ್ರಕ್ಕಿದೆ.
Related Articles
Advertisement
ಜಾಕ್ವೆಲಿನ್ ಕಾಣಿಸಿಕೊಂಡಿರುವ ಹಾಡಿಗಾಗಿ ಸಖತ್ ಕಲರ್‌ಫುಲ್ ಸೆಟ್ ಹಾಕಿದ್ದು, ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಒಂದು ಹಾಡಿಗಾಗಿಯೇ 4 ಕೋಟಿಗೂ ಅಧಿಕ ವೆಚ್ಚ ಮಾಡಿದೆ ಚಿತ್ರತಂಡ. “ವಿಕ್ರಾಂತ್ ರೋಣ’ ಕನ್ನಡ ಚಿತ್ರರಂಗವನ್ನು ಮತ್ತೂಂದು ಲೆವೆಲ್‌ಗೆ ಕೊಂಡೊಯ್ಯುವ ಸಿನಿಮಾ ಎಂಬ ಮಾತು ಕೇಳಿ ಬರುತ್ತಿದೆ. ನಿರ್ದೇಶಕ ಅನೂಪ್ ಭಂಡಾರಿ ಪ್ರಕಾರ, “ವಿಕ್ರಾಂತ್ ರೋಣ’ದಲ್ಲಿ ನಟ ಸುದೀಪ್ ಅವರ ಸ್ಟಾರ್‌ಡಮ್ ಮತ್ತು ಅವರ ಪರ್ಫರ್ಮೆನ್ಸ್ ಎರಡರ ಸಮಾಗಮವಾಗಿದೆಯಂತೆ.
“ಸುದೀಪ್ ಅವರಿಗೆ ದೇಶದಾದ್ಯಂತ ಅವರದ್ದೇ ಆದ ಫ್ಯಾನ್ಸ್ ಬಳಗವಿದೆ. ಇಲ್ಲಿಯವರೆಗೆ ಅವರು ಮಾಡಿರುವ ಸಿನಿಮಾಗಳಲ್ಲಿ ತಮ್ಮ ಪರ್ಫಾರ್ಮೆನ್ಸ್ ಏನು ಅನ್ನೋದನ್ನ ತೋರಿಸಿದ್ದಾರೆ. ಅವರಿಗೆ ಅವರದ್ದೇ ಆದ ಸ್ಟಾರ್‌ಡಮ್ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು “ವಿಕ್ರಾಂತ್ ರೋಣ’ ಸಿನಿಮಾ ಮಾಡಿದ್ದೇವೆ.
ಇದರಲ್ಲಿ ಅವರ ಸ್ಟಾರ್‌ಡಮ್ ಮತ್ತು ಪರ್ಫಾರ್ಮೆನ್ಸ್ ಎರಡಕ್ಕೂ ಸಾಕಷ್ಟು ಸ್ಪೇಸ್ ಇದೆ’ ಎನ್ನುವುದು ಅನೂಪ್ ಮಾತು. “ಈ ಸಿನಿಮಾದ ಸಬೆjಕ್ಟ್ ಮತ್ತು ಸ್ಕ್ರಿಪ್ಟ್ ಎರಡೂ ಕೂಡ ಸುದೀಪ್ ಅವರಿಗಾಗಿಯೇ ಹೇಳಿ ಮಾಡಿಸಿದಂತೆ, ಸಹಜವಾಗಿ ಮೂಡಿಬಂದಿದೆ. ಸುದೀಪ್ ಅವರನ್ನು ಹೊರತುಪಡಿಸಿ ಬೇರೆ ಯಾರಿಗೂ ಮಾಡಲಾಗದು ಎನ್ನುವಷ್ಟರ ಮಟ್ಟಿಗೆ ಈ ಸಬ್ಜೆಕ್ಟ್ ಅವರಿಗೆ ಮ್ಯಾಚ್ ಆಗುತ್ತದೆ. ಸಿನಿಮಾದಲ್ಲಿ ಯಾವುದನ್ನೂ ಅತಿಯಾಗಿ ಸೇರಿಸಲು ಹೋಗಿಲ್ಲ. ಎಲ್ಲವೂ ಆರ್ಗಾನಿಕ್ ಆಗಿದೆ’ ಎನ್ನುತ್ತಾರೆ ಅನೂಪ್.