Advertisement

ಸುದೀಪ್‌ ರೋಡ್‌ ಶೋಗೆ ಅಡ್ಡಿ

11:44 PM May 04, 2023 | Team Udayavani |

ಸಿಂಧನೂರು: ತಾಲೂಕಿನ ತುರುವಿಹಾಳ ಪಟ್ಟಣದಲ್ಲಿ ಗುರುವಾರ ಸಂಜೆ 4.30ರ ಬಳಿಕ ನಡೆಸಲು ಮುಂದಾಗಿದ್ದ ಚಿತ್ರನಟ ಸುದೀಪ್‌ ರೋಡ್‌ ಶೋ ಅರ್ಧಕ್ಕೆ ಮೊಟಕುಗೊಳಿಸಲಾಯಿತು.

Advertisement

ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸ್‌ ವ್ಯವಸ್ಥೆ ಇಲ್ಲದಿದ್ದರಿಂದ ಸಮಸ್ಯೆ ಉಂಟಾಯಿತು. ನಗರದ ಸರ್ಕ್ನೂಟ್‌ ಹೌಸ್‌ನಲ್ಲಿ ಹೆಲಿಪ್ಯಾಡ್‌ನಿಂದ ಕಾರಿನ ಮೂಲಕ ಪ್ರಯಾಣ ಬೆಳೆಸಿದ ಸುದೀಪ್‌ ಸಕಾಲಕ್ಕೆ ತುರುವಿಹಾಳ ತಲುಪಿದರು. ಅವರಿಗಾಗಿ ಸಿದ್ಧವಾಗಿದ್ದ ವಾಹನ ಏರಿ ರೋಡ್‌ ಶೋಗೆ ಮುಂದಾದರು. ಈ ವೇಳೆ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ರೋಡ್‌ ಶೋಗೆ ಏರಿದ ವಾಹವನ್ನು ಮುತ್ತಿಗೆ ಹಾಕಿ, ಅದನ್ನು ಮುಂದಕ್ಕೆ ಬಿಡದ ರೀತಿಯಲ್ಲಿ ಗದ್ದಲ ಎಬ್ಬಿಸಿದ್ದರಿಂದ ಸುದೀಪ್‌ ಅಲ್ಲಿಂದ ಕೆಳಗಿಳಿದರು. ಈ ನಡುವೆ ಸರ್ಕ್ನೂಟ್‌ ಹೌಸ್‌ನ ಹೆಲಿಪ್ಯಾಡ್‌ಗೆ ಸುದೀಪ್‌ ಬರುತ್ತಾರೆಂಬ ಮಾಹಿತಿ ಆಧರಿಸಿ ಭಾರೀ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಜನರತ್ತ ಕೈ ಬೀಸಿ ಸುದೀಪ್‌ ಪ್ರಯಾಣ ಬೆಳೆಸಿದರು.

ಜೆಡಿಎಸ್‌ ಬ್ಯಾನರ್‌ ಹರಿದ ಬಿಜೆಪಿ ಕಾರ್ಯಕರ್ತರು
ದೇವದುರ್ಗ: ನಟ ಸುದೀಪ್‌ ರೋಡ್‌ ಶೋ ವೇಳೆ ಜೆಡಿಎಸ್‌ ಪ್ರಚಾರ ವಾಹನ ತೆರಳುತ್ತಿದ್ದ ಸಂದರ್ಭ ಬಿಜೆಪಿ ಕಾರ್ಯಕರ್ತರು ಬ್ಯಾನರ್‌ ಹರಿದು ಮೈಕಿಗೆ ಕಲ್ಲೆಸೆದು, ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.

ಈ ಕುರಿತು ಜೆಡಿಎಸ್‌ ಪಕ್ಷದ ಕಾರ್ಯದರ್ಶಿ ಶಾಲಂ ಉದ್ದಾರ ನೀಡಿದ ದೂರಿನ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಸುದೀಪ್‌ ರೋಡ್‌ ಶೋ ವೇಳೆ ಜಮಾಯಿಸಿದ ನೂರಾರು ಕಾರ್ಯಕರ್ತರು ಬ್ಯಾನರ್‌ ಹರಿದವರ ಮಾಹಿತಿ ಕಲೆ ಹಾಕಲು ಜೆಪಿ ವೃತ್ತದಲ್ಲಿರುವ ಸಿಸಿ ಕೆಮರಾ ಪರಿಶೀಲನೆ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಎಸೆದ ಕಲ್ಲಿನಿಂದ ಪ್ರಚಾರದ ವಾಹನದಲ್ಲಿದ್ದ ಮೈಕ್‌ ಜಖಂಗೊಂಡಿದೆ. ಸೋಲಿನ ಭೀತಿಯಿಂದ ಬಿಜೆಪಿ ಶಾಸಕರು ಕಾರ್ಯಕರ್ತರನ್ನು ಬಿಟ್ಟು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಎರಡೂ¾ರು ಬಾರಿ ಹಲ್ಲೆ ನಡೆಸಿದ್ದಾರೆ. ಜನರ ಆಶೀರ್ವಾದಿಂದ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಜೆಡಿಎಸ್‌ ಅಭ್ಯರ್ಥಿ ಕರೆಮ್ಮ ಗೋಪಾಲಕೃಷ್ಣ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next