Advertisement

ಯಶಸ್ವೀ ಲೆಪರೊಸ್ಕೋಪಿಕ್‌ ರೈಟ್‌ ಹೆಪಟೆಕ್ಟಮಿ

12:25 PM Dec 02, 2017 | Team Udayavani |

ಮಹಾನಗರ: ಲೆಪರೊಸ್ಕೋಪಿಕ್‌ ರೈಟ್‌ ಹೆಪಟೆಕ್ಟಮಿಯನ್ನು ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಯಾಗಿ ನಗರದ ಫಾ| ಮುಲ್ಲರ್ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್‌ ಸರ್ಜಿಕಲ್‌ ಗ್ಯಾಸ್ಟ್ರೋ ಎಂಟರಾಲಜಿಸ್ಟ್‌ ಡಾ| ಗಣೇಶ್‌ ಎಂ.ಕೆ. ಅವರ ನೇತೃತ್ವದಲ್ಲಿ ನಡೆಸಲಾಗಿದೆ.

Advertisement

ಇದು ಲಿವರ್‌ ಕ್ಯಾನ್ಸರ್‌ನ ಪ್ರಾಥಮಿಕ ಹಂತ. ಆರು ತಾಸುಗಳ ಕಾಲ ಈ ಶಸ್ತ್ರಚಿಕಿತ್ಸೆಯನ್ನು ರೋಗಿಗೆ ನಡೆಸಲಾಯಿತು. ವಾರದೊಳಗೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಲಿವರ್‌ನಲ್ಲಿ ಟ್ಯೂಮರ್‌ ಹೊಂದಿದ್ದ ಬಲ ಅರ್ಧಭಾಗವನ್ನು ಈ ಮೂಲಕ ನಿವಾರಿಸಲಾಗಿದೆ. ದೇಶದ ಕೆಲವೇ ಪ್ರಮುಖ ಆಸ್ಪತ್ರೆಗಳಲ್ಲಿ ಇಂತಹ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದು ಡಾ| ಗಣೇಶ್‌ ಎಂ. ಕೆ. ವಿವರಿಸಿದ್ದಾರೆ. ಸರ್ಜಿಕಲ್‌ ಟೀಮ್‌ನಲ್ಲಿ ಡಾ| ಗಣೇಶ್‌, ಡಾ| ಎರೆಲ್‌ ಡಯಾಜ್‌, ಡಾ| ಅಜಯ್‌, ಡಾ| ಮೊನಾಲಿಸಾ, ಡಾ| ರಾಧೇಶ್‌ ಹೆಗ್ಡೆ, ಡಾ| ಗುರುಮೂರ್ತಿ, ಡಾ| ಶೈಲಜಾ, ಡಾ| ಮಂಜುಳಾ ಇದ್ದರು. ಇದು ಅತ್ಯಂತ ಉನ್ನತ ತಾಂತ್ರಿಕತೆಯ ಶಸ್ತ್ರಚಿಕಿತ್ಸೆ ಎಂದು ಫಾ| ಮುಲ್ಲರ್‌ ಮೆಡಿಕಲ್‌ ಕಾಲೇಜ್‌ ಹಾಸ್ಪಿಟಲ್‌ನ ನಿರ್ದೇಶಕ ಫಾ| ರಿಚರ್ಡ್‌ ಕೊಯಿಲೋ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next