Advertisement
ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧ್ಯಕ್ಷ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕಡ್ಡಾಯ ಅನುಷ್ಠಾನಕ್ಕೆ ಸೂಚನೆ
ಪ್ರಯಾಣಿಕರ ಸುರಕ್ಷತೆ ಸಲುವಾಗಿ ಬಸ್ಗಳು ಸಂಚರಿಸುವ ವೇಳೆ ಬಾಗಿಲು ಹಾಕಿಕೊಳ್ಳುವುದು ಕಡ್ಡಾಯ. ಈ ಬಗ್ಗೆ ಹಲವು ಬಾರಿ ಸೂಚನೆ ನೀಡಿದರೂ ಪಾಲನೆಯಾಗುತ್ತಿಲ್ಲ. ಹೀಗಾಗಿ ತತ್ಕ್ಷಣದಿಂದಲೇ ಬಾಗಿಲು ಅಳವಡಿಸಲು ಎಲ್ಲ ಖಾಸಗಿ ಬಸ್ಗಳು ಕ್ರಮ ಕೈಗೊಳ್ಳಬೇಕು.
Related Articles
Advertisement
ಮಂಗಳೂರಲ್ಲಿ ಸ್ಮಾರ್ಟ್ಸಿಟಿಯ ಕಮಾಂಡಿಂಗ್ ಕಂಟ್ರೋಲ್ ಕೇಂದ್ರ ಇದೆ. ಇದರ ಸುಪರ್ದಿಯಲ್ಲಿ ಖಾಸಗಿ ಬಸ್ಗಳು ಕೂಡ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿದೆ. ಜಿಪಿಎಸ್ ಅಳವಡಿಸಿ ಸ್ಮಾರ್ಟ್ಸಿಟಿ ಕಂಟ್ರೋಲ್ ರೂಂ ಜತೆ ಸಂಪರ್ಕ ಇರಿಸಬೇಕು. ಇದರಿಂದ ಬಸ್ಗಳು ಎಲ್ಲೆಲ್ಲಿ ಸಂಚರಿಸುತ್ತಿವೆ ಎಂಬ ಮಾಹಿತಿ ಸುಲಭದಲ್ಲಿ ಸಿಗುತ್ತದೆ. ಇದು ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯವಾಗಲಿದೆ. ಜತೆಗೆ ಪ್ಯಾನಿಕ್ ಬಟನ್ ಅಳವಡಿಕೆ ಆಗಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಪಾಲಿಕೆ ಆಯುಕ್ತ ಆನಂದ್, ಜಿಲ್ಲಾ ಎಸ್ಪಿ ಯತೀಶ್, ಸಂಚಾರಿ ಡಿಸಿಪಿ ದಿನೇಶ್ ಕುಮಾರ್, ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ಉಪಸ್ಥಿತರಿದ್ದರು.
ಗಮನ ಸೆಳೆದ “ಉದಯವಾಣಿ’ ಬಸ್ ಅಭಿಯಾನಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಅವರು ಮಾತನಾಡಿ, ಮಂಗಳೂರು-ಕಾರ್ಕಳ, ಮೂಡುಬಿದಿರೆ ಸಹಿತ ವಿವಿಧ ರೂಟ್ಗಳಿಗೆ ಬಸ್ ಸೌಲಭ್ಯ ಅಗತ್ಯವಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ. ಜತೆಗೆ ಉದಯವಾಣಿ ಪತ್ರಿಕೆಯು “ನಮಗೆ ಬಸ್ ಬೇಕೇ ಬೇಕು’ ಎಂಬ ಅಭಿಯಾನವನ್ನೂ ನಡೆಸಿತ್ತು ಎಂದು ಸಭೆಯಲ್ಲಿ ಉಲ್ಲೇಖೀಸಿದರು. ಚಾಲಕರು, ನಿರ್ವಾಹಕರ ಪೊಲೀಸ್ ಪರಿಶೀಲನೆ
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾತನಾಡಿ, “ಬಸ್ ಚಾಲಕರು ಹಾಗೂ ನಿರ್ವಾಹಕರ ವಿರುದ್ಧ ಯಾವುದಾದರೂ ಪ್ರಕರಣ ಇದೆಯೇ ಎಂಬ ಬಗ್ಗೆ ಪರಿಶೀಲಿಸುವ ನೆಲೆಯಲ್ಲಿ ಎಲ್ಲ ಚಾಲಕರು, ನಿರ್ವಾಹಕರ ಪೊಲೀಸ್ ಪರಿಶೀಲನೆ ನಡೆಸಲಾಗುವುದು. ಮಂಗಳೂರಿನಲ್ಲಿ ಸಿಟಿ, ಸರ್ವಿಸ್ ಬಸ್ಗಳ ವಿಭಾಗವಾರು ಮಾಡಲು ನಿಗದಿತ ಕಲರ್ ಸ್ಟಿಕ್ಕರ್ ಅಂಟಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಬಸ್ ನಿಲುಗಡೆ ಇಲ್ಲದ ಜಾಗದಲ್ಲಿ ಮಂಗಳೂರಿನಲ್ಲಿ ಬಸ್ ನಿಲುಗಡೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.