Advertisement

Sullia: 10 ವರ್ಷದ ಬಳಿಕ ಚಿಂಗಾಣಿ ಗುಡ್ಡೆ ಟ್ಯಾಂಕ್‌ಗೆ ಕೊನೆಗೂ ನೀರು ಬಂತು!

01:12 PM Nov 14, 2024 | Team Udayavani |

ಸುಳ್ಯ: ಸುಳ್ಯ ತಾಲೂಕಿನ ಪಂಜ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೃಷ್ಣನಗರದ ಚಿಂಗಾಣಿ ಗುಡ್ಡೆಯ ಎತ್ತರದ ಜಾಗದಲ್ಲಿರುವ ಟ್ಯಾಂಕ್‌ಗೆ 10 ವರ್ಷಗಳ ಬಳಿಕ ನೀರು ಬಂದಿದೆ! 10-11 ವರ್ಷಗಳ ಹಿಂದೆ ಅಂದಿನ ಜಿಲ್ಲಾ ಪಂಚಾಯತ್‌ನ ರೂಪಾಯಿ 20 ಲಕ್ಷ ಅನುದಾನದಲ್ಲಿ ಕುಡಿ ಯುವ ನೀರಿನ ಟ್ಯಾಂಕ್‌ ನಿರ್ಮಿಸಲಾ ಗಿದ್ದರೂ ಅಷ್ಟು ಎತ್ತರಕ್ಕೆ ನೀರು ಹರಿಸಲು ಸಾಧ್ಯವಾಗದೆ ಟ್ಯಾಂಕ್‌ ವ್ಯರ್ಥವಾಗುವ ಆತಂಕ ಎದುರಾಗಿತ್ತು. ಆ ಭಾಗದ ಜನರ ನೀರಿನ ಆಸೆಗೂ ಕಲ್ಲು ಬಿದ್ದಿತ್ತು!

Advertisement

ಚಿಂಗಾಣಿ ಗುಡ್ಡೆಯಲ್ಲಿ ಒಂದು ಶುದ್ಧೀ ಕರಣ ಟ್ಯಾಂಕ್‌ ಹಾಗೂ ಇನ್ನೊಂದು ನೀರು ತುಂಬುವ ಟ್ಯಾಂಕ್‌ ನಿರ್ಮಾಣಗೊಂಡಿದೆ. ಪಂಜ ಸಮೀಪದ ಕುಮಾರಧಾರ ನದಿಯಿಂದ ಜಾಕ್‌ವೆಲ್‌ ಮೂಲಕ ನೀರನ್ನು ಚಿಂಗಾಣಿಗುಡ್ಡೆಗೆ ಪೂರೈಸುವ ಯೋಜನೆ ರೂಪಿಸಲಾಗಿತ್ತು. ಆದರೆ ಎತ್ತರಕ್ಕೆ ನೀರು ಹತ್ತಲು ಸಾಧ್ಯವಾಗದೇ ನೀರು ಇಷ್ಟು ವರ್ಷ ಟ್ಯಾಂಕ್‌ಗೆ ಸರಬರಾಜು ಆಗಿರಲಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿತ್ತು.

ಈ ನಡುವೆ, ಟ್ಯಾಂಕ್‌ಗೆ ಪೈಪ್‌ಲೈನ್‌ ಕಾಮಗಾರಿ ನಡೆಸಿದ್ದು, ಅದು ರಸ್ತೆ ಕಾಮಗಾರಿ ವೇಳೆ ಹಾನಿಗೊಂಡಿತ್ತು. ದುರ ಸ್ತಿಗೆ ಅನುದಾನ ಬಾರದೇ ಪೈಪ್‌ಲೈನ್‌ ಸಾಧ್ಯವಾಗದೇ ಈ ರೀತಿ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಒಟ್ಟಿನಲ್ಲಿ ವಿವಿಧ ಕಾರಣಗಳಿಗಾಗಿ ಚಿಂಗಾಣಿಗುಡ್ಡೆ ಟ್ಯಾಂಕ್‌ಗೆ , ಅಲ್ಲಿಂದ ಜನರಿಗೆ ನೀರು ಸರಬರಾಜೂ ಆಗಿರಲಿಲ್ಲ.

ಇದೀಗ ಜಲಜೀವನ್‌ ಯೋಜನೆಯಡಿ ಜಾಕ್‌ ವೆಲ್‌ನಿಂದ ಶುದ್ಧೀಕರಣ ಟ್ಯಾಂಕ್‌ಗೆ ಅಲ್ಲಿಂದ ದೊಡ್ಡ ಟ್ಯಾಂಕ್‌ಗೆ ಪೈಪ್‌ಲೈನ್‌ ಹಾಕ ಲಾಗಿದ್ದು, ಅದರ ಮೂಲಕ ನೀರು ಕೊನೆಗೂ ಟ್ಯಾಂಕ್‌ ತಲುಪಿದೆ!

ಚಿಂಗಾಣಿಗುಡ್ಡೆಯಲ್ಲಿ ನೀರಿನ ಟ್ಯಾಂಕ್‌ ನಿರ್ಮಾಣಗೊಂಡಿದ್ದರೂ ಪ್ರಯೋಜಕ್ಕೆ ಸಿಗದ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಈಗ ಟ್ಯಾಂಕ್‌ಗೆ ಬಂದ ನೀರನ್ನು ಮನೆಗಳಿಗೆ ನೀರು ಸರಬರಾಜು ಮಾಡಲು ಅ ಧಿಕಾರಿಗಳು ಕ್ರಮಕೈಗೊಳ್ಳಬೇಕು. ಟ್ಯಾಂಕ್‌ನ ಗುಣಮಟ್ಟದ ಬಗ್ಗೆಯೂ ಪರೀಕ್ಷೆ ನಡೆಸಬೇಕು.
– ಜಿನ್ನಪ್ಪ ಗೌಡ, ಸ್ಥಳೀಯರು

Advertisement

ಲೋಕಾಯುಕ್ತಕ್ಕೂ ದೂರು
ಚಿಂಗಾಣಿಗುಡ್ಡೆ ಟ್ಯಾಂಕ್‌ ಉಪಯೋಗಕ್ಕೆ ದೊರಕದೆ ಇರುವ ಬಗ್ಗೆ ಉದಯವಾಣಿ ಸಹಿತ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೆ ಇಲ್ಲಿ ಸಾಮಾಜಿಕ ಕಾರ್ಯಕರ್ತ ಜಿನ್ನಪ್ಪ ಗೌಡ ಆಳ್ಪೆ ಅವರು ಸಂಬಂಧಿಸಿದವರು ಹಾಗೂ ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು. ಇದೀಗ ಟ್ಯಾಂಕ್‌ ನಿರ್ಮಾಣಗೊಂಡು ಹಲವು ವರ್ಷ ಆಗಿರುವುದರಿಂದ ಟ್ಯಾಂಕ್‌ನ ಸದ್ಯದ ಗುಣಮಟ್ಟ, ಸಾಮರ್ಥ್ಯ ಪರೀಕ್ಷೆ ಆಗಲಿ ಎಂದೂ ಜನರು ಒತ್ತಾಯಿಸಿದ್ದಾರೆ.

ಮನೆ ಮನೆಗೆ ನೀರು ನಿರೀಕ್ಷೆ
ಈಗ ಟ್ಯಾಂಕ್‌ವರೆಗಿನ ಪೈಪ್‌ಲೈನ್‌, ಅಲ್ಲಿಂದ ಮನೆಗೆ ಮನೆಗೆ ಪೈಪ್‌ಲೈನ್‌ ಕಾಮಗಾರಿ ನಡೆದಿದೆ. ಇದರ ನಡುವೆ ಟ್ಯಾಂಕ್‌ ಬಳಿ ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ದು, ಅದು ಮುಗಿದ ಮೇಲೆ ಮನೆ ಮನೆಗೆ ನೀರು ಸರಬರಾಜು ಆಗುವ
ನಿರೀಕ್ಷೆ ಇದೆ.

-ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next