Advertisement

IPL; ತಂಡಗಳಲ್ಲಿ ಉಳಿದುಕೊಳ್ಳಬಲ್ಲ ಸಂಭಾವ್ಯ ಆಟಗಾರರು ಯಾರ್ಯಾರು?

11:41 PM Sep 29, 2024 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅತ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ಆಟಗಾರರ ಉಳಿಕೆ ನಿಯಮದ ಬಗ್ಗೆ ಇದ್ದ ಪ್ರಶ್ನೆಗಳಿಗೆ ಉತ್ತರ ಲಭಿಸಿದೆ. ಫ್ರಾಂಚೈಸಿಗಳ ಆಗ್ರಹದಂತೆ ಬಿಸಿಸಿಐ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ. ಐವರನ್ನು ನೇರವಾಗಿ ಉಳಿಸಿಕೊಳ್ಳಬಹುದು.

Advertisement

ಇನ್ನೊಬ್ಬರನ್ನು ಹರಾಜಿನಲ್ಲಿ ಆರ್‌ಟಿಎಂ (ರೈಟ್‌ ಟು ಮ್ಯಾಚ್‌) ಕಾರ್ಡ್‌ ಮೂಲಕ ಉಳಿಸಿ ಕೊಳ್ಳಬಹುದಾಗಿದೆ. ಈ ಹಿಂದೆ ನಾಲ್ವರನ್ನು ಉಳಿಸಿಕೊಳ್ಳಲು ಅವಕಾಶವಿತ್ತು. ಅಂದಮಾತ್ರಕ್ಕೆ ಇದು ಹೇಳಿಕೊಳ್ಳುವಷ್ಟು ಸುಲಭವಿಲ್ಲ. ಫ್ರಾಂಚೈಸಿ ಗಳಿಗೆ ಒಟ್ಟು ವೇತನ ಮೊತ್ತ 120 ಕೋಟಿ ಇರಲಿದ್ದು, ಇದರಲ್ಲಿ ಉಳಿಸಿಕೊಳ್ಳುವ ಆಟಗಾರರಿಗಾಗಿಯೇ 75 ಕೋಟಿ ರೂ. ವೆಚ್ಚವಾಗಲಿದೆ. 1, 2 ಮತ್ತು 3ನೇ ಆದ್ಯತೆಯ ಆಟಗಾರರಿಗೆ ಕ್ರಮವಾಗಿ 18, 14, 11 ಕೋಟಿ ರೂ. ನೀಡಬೇಕಾಗುತ್ತದೆ. 4 ಮತ್ತು 5ನೇ ಆಟಗಾರರನ್ನು ಉಳಿಸಿಕೊಳ್ಳಬೇಕಾದರೆ ಮತ್ತೆ 18 ಮತ್ತು 14 ಕೋಟಿ ರೂ. ನೀಡಬೇಕಾಗುತ್ತದೆ! ಹೀಗಾಗಿ ಫ್ರಾಂಚೈಸಿಗಳಿಗೆ ಹರಾಜಿನ ವೇಳೆ ಕಡಿಮೆ ಮೊತ್ತ ಉಳಿಯಲಿದ್ದು, ಇತರ ಆಟಗಾರರ ಖರೀದಿಗೆ ಹೊರೆಯಾಗಲಿದೆ.

ಉಳಿದುಕೊಳ್ಳಬಲ್ಲ ಸಂಭಾವ್ಯ ಆಟಗಾರರು
 ಆರ್‌ಸಿಬಿ: ವಿರಾಟ್‌ ಕೊಹ್ಲಿ, ಮೊಹಮ್ಮದ್‌ ಸಿರಾಜ್‌, ವಿಲ್‌ ಜಾಕ್ಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ಯಾಮರಾನ್‌ ಗ್ರೀನ್‌, ಯಶ್‌ ದಯಾಳ್‌.

 ಚೆನ್ನೈ: ಋತುರಾಜ್‌ ಗಾಯಕ್ವಾಡ್‌, ರವೀಂದ್ರ ಜಡೇಜ, ಶಿವಂ ದುಬೆ, ರಚಿನ್‌ ರವೀಂದ್ರ, ಮತೀಶ ಪತಿರಣ, ಮಹೇಂದ್ರ ಸಿಂಗ್‌ ಧೋನಿ.

ಮುಂಬೈ: ಹಾರ್ದಿಕ್‌ ಪಾಂಡ್ಯ, ರೋಹಿತ್‌ ಶರ್ಮ, ಜಸ್‌ಪ್ರೀತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ಅಂಶುಲ್‌ ಕಾಂಬೋಜ್‌.

Advertisement

ರಾಜಸ್ಥಾನ್‌: ಸಂಜು ಸ್ಯಾಮ್ಸನ್‌, ಜಾಸ್‌ ಬಟ್ಲರ್‌, ಯಶಸ್ವಿ ಜೈಸ್ವಾಲ್‌, ಟ್ರೆಂಟ್‌ ಬೌಲ್ಟ್, ಯಜುವೇಂದ್ರ ಚಹಲ್‌, ಸಂದೀಪ್‌ ಶರ್ಮ.

 ಕೆಕೆಆರ್‌: ಶ್ರೇಯಸ್‌ ಅಯ್ಯರ್‌, ರಿಂಕು ಸಿಂಗ್‌, ಫಿಲ್‌ ಸಾಲ್ಟ್, ಸುನೀಲ್‌ ನಾರಾಯಣ್‌, ಮಿಚೆಲ್‌ ಸ್ಟಾರ್ಕ್‌, ಹರ್ಷಿತ್‌ ರಾಣಾ.

 ಗುಜರಾತ್‌: ಶುಭಮನ್‌ ಗಿಲ್‌, ರಶೀದ್‌ ಖಾನ್‌, ಡೇವಿಡ್‌ ಮಿಲ್ಲರ್‌, ಸಾಯಿ ಸುದರ್ಶನ್‌, ಮೊಹಮ್ಮದ್‌ ಶಮಿ, ರಾಹುಲ್‌ ತೆವಾಟಿಯ.

 ಲಕ್ನೋ: ಕೆ.ಎಲ್‌. ರಾಹುಲ್‌, ಕ್ವಿಂಟನ್‌ ಡಿ ಕಾಕ್‌, ನಿಕೋಲಸ್‌ ಪೂರಣ್‌, ರವಿ ಬಿಷ್ಣೋಯಿ, ಮಾರ್ಕಸ್‌ ಸ್ಟೋಯಿನಿಸ್‌, ಮಾಯಾಂಕ್‌ ಯಾದವ್‌.

 ಡೆಲ್ಲಿ: ರಿಷಭ್‌ ಪಂತ್‌, ಮಿಚೆಲ್‌ ಮಾರ್ಷ್‌, ಹ್ಯಾರಿ ಬ್ರೂಕ್‌, ಜೇಕ್‌ ಫ್ರೆàಸರ್‌ ಮೆಕ್‌ಗರ್ಕ್‌, ಅಕ್ಷರ್‌ ಪಟೇಲ್‌, ಅಭಿಷೇಕ್‌ ಪೊರೆಲ್‌.

 ಪಂಜಾಬ್‌: ಮ್ಯಾಥ್ಯೂ ಶಾರ್ಟ್‌, ಸ್ಯಾಮ್‌ ಕರನ್‌, ಅರ್ಷದೀಪ್‌ ಸಿಂಗ್‌, ಕಾಗಿಸೊ ರಬಾಡ, ಲಿಯಮ್‌ ಲಿವಿಂಗ್‌ಸ್ಟೋನ್‌, ಅಶುತೋಷ್‌ ಶರ್ಮ.

ಹೈದರಾಬಾದ್‌: ಪ್ಯಾಟ್‌ ಕಮಿನ್ಸ್‌, ಅಭಿಷೇಕ್‌ ಶರ್ಮ, ಟ್ರ್ಯಾವಿಸ್‌ ಹೆಡ್‌, ಹೆನ್ರಿಚ್‌ ಕ್ಲಾಸೆನ್‌, ಟಿ. ನಟರಾಜನ್‌, ನಿತೀಶ್‌ ಕುಮಾರ್‌ ರೆಡ್ಡಿ.

Advertisement

Udayavani is now on Telegram. Click here to join our channel and stay updated with the latest news.

Next