ಹುಬ್ಬಳ್ಳಿ: ರಸ್ತೆ ಅಪಘಾತವೊಂದರಲ್ಲಿ ಯುವಕನ ಎದೆಗೂಡಿಗೆ ಹೊಕ್ಕಿದ್ದ ದೊಡ್ಡ ಕಬ್ಬಿಣದ ಪೈಪ್ ಅನ್ನು ಕೆಎಂಸಿಆರ್‌ಐ
ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದು ಯುವಕನ ಪ್ರಾಣ ರಕ್ಷಣೆ ಮಾಡಿದೆ. ಅತ್ಯಂತ ಸಂಕೀರ್ಣ ಹಾಗೂ ಸವಾಲು ರೂಪದ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿದೆ.
Advertisement
ಹಾವೇರಿ ಜಿಲ್ಲೆ ರಾಣಿಬೆನ್ನೂರು ಬಳಿ ಬುಧವಾರ ಬೆಳಗಿನ ಜಾವ ಲಾರಿ ಮಗುಚಿ ರಾಷ್ಟ್ರೀಯ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬಿದ್ದಿತ್ತು. ಲಾರಿಯ ಕ್ಲೀನರ್ ಸ್ಥಾನದಲ್ಲಿ ಕುಳಿತಿದ್ದ ಉತ್ತರ ಕನ್ನಡ ಜಿಲ್ಲೆ ಶಿರಸಿಯ ದಯಾನಂದ ಜವಳಮಕ್ಕಿ (27)ಎಂಬ ಯುವಕ ತೀವ್ರವಾಗಿ ಗಾಯಗೊಂಡಿದ್ದ. ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳದವರು ದಯಾನಂದ ಎದೆಗೂಡು ಸೇರಿದ್ದ ಉದ್ದನೆಯ ಕಬ್ಬಿಣದ ಪೈಪ್ ಅನ್ನು ಒಂದು ಭಾಗದಲ್ಲಿ ಗ್ಯಾಸ್ ಕಟರ್ ಬಳಸಿ ಕತ್ತರಿಸಿದ್ದರಾದರೂ ಸುಮಾರು 98 ಸೆಂಟಿಮೀಟರ್ನಷ್ಟುಪೈಪ್ ದೇಹದಲ್ಲಿಯೇ ಉಳಿದಿತ್ತು.
ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ದಯಾನಂದಗೆ ಶಸ್ತ್ರಚಿಕಿತ್ಸೆ ಹಾಗೂ ಪ್ರಾಣ ರಕ್ಷಣೆ ಅತ್ಯಂತ ಸವಾಲಿನದ್ದಾಗಿತ್ತು. ನಮ್ಮ ವೈದ್ಯರು, ತಾಂತ್ರಿಕ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿ ಪ್ರತಿಯೊಬ್ಬ ಸಿಬ್ಬಂದಿ ಸೈನಿಕರ ರೀತಿಯಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿದ್ದು, ಕೇವಲ ಎರಡ್ಮೂರು ತಾಸಿನಲ್ಲಿಯೇ ಎಲ್ಲ ಪರೀಕ್ಷೆ ಕೈಗೊಂಡು ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಂಡಿದ್ದಾರೆ. ತುಕ್ಕು ಹಿಡಿದ ಕಬ್ಬಿಣ ಒಳಗೆ ಸೇರಿದ್ದರಿಂದ ಧನುರ್ವಾಯು ಹಾಗೂ ನಂಜು ಕಾರಣದ ಅಪಾಯ ಬಾರದ ರೀತಿಯಲ್ಲಿ ನಂಜುನಿವಾರಕ, ಇನ್ನಿತರ ಔಷಧ ನೀಡಲಾಗಿದೆ.
*ಡಾ| ಎಸ್.ಎಫ್. ಕಮ್ಮಾರ, ಕೆಎಂಸಿಆರ್‌ಐ ನಿರ್ದೇಶಕ