Advertisement

ಸ್ವಶಕ್ತಿಯಿಂದಲೇ ಉನ್ನತಿ ಸಾಧಿಸಿದರೆ ಸಾರ್ಥಕ

09:52 PM Aug 18, 2019 | Lakshmi GovindaRaj |

ಕೊಳ್ಳೇಗಾಲ: ಪ್ರತಿಯೊಬ್ಬರು ಸ್ವ-ಶಕ್ತಿಯಿಂದ ಮೇಲೆ ಬಂದು ಸಾಮಾಜಿಕ ಕೆಲಸದಲ್ಲಿ ತೊಡಗಿದಾಗ ಜೀವನ ಸಾರ್ಥಕವಾಗಲಿದೆ ಎಂದು ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮಿ ಭಾನುವಾರ ಹೇಳಿದರು. ಎನ್‌.ಮಹೇಶ್‌ ಅಭಿಮಾನಿ ಬಳಗ ಮತ್ತು ಟಿ.ನರಸೀಪುರದ ಮಗು ಪೌಂಡೇಷನ್‌ ಆಶ್ರಯದಲ್ಲಿ ತಾಲೂಕಿನ ಕುಣಗಳ್ಳಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಏರ್ಪಡಿಸಿದ್ದ ಬೃಹತ್‌ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

Advertisement

ಉಚಿತ ಆರೋಗ್ಯ ತಪಾಸಣಾ ಶಿಬಿರ ಪುಣ್ಯದ ಕೆಲಸ. ಪ್ರತಿಯೊಬ್ಬ ಮನುಷ್ಯರಿಗೂ ಆರೊಗ್ಯವೇ ಭಾಗ್ಯ. ಪಂಚೇಂದ್ರಿಯಗಳು ಸರಿಯಾಗಿ ಕೆಲಸ ಮಾಡದಿದ್ದಾಗ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆರೋಗ್ಯ ದೇಹದ ಇತರ ಭಾಗವನ್ನು ಉತ್ತಮವಾಗಿ ಇಟ್ಟುಕೊಂಡಾಗ ಮಾತ್ರ ಆರೋಗ್ಯವಂತರಾಗಿರಲು ಸಾದ್ಯ. ಅನಾರೋಗದ ನಿಮಿತ್ತ ಮೂಢನಂಬಿಕೆಗಳಿಗೆ ಒಳಗಾಗಬಾರದು ಎಂದರು.

ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಗ್ರಾಮಕ್ಕೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಆರೋಗ್ಯ ನೋಂದಣಿ ಕೇಂದ್ರಗಳನ್ನು ತೆರೆದು ನೋಂದಣಿಗೆ ಶಾಸಕರು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಶಾಸಕ ಎನ್‌.ಮಹೇಶ್‌ ಮಾತನಾಡಿ, ಶಿಬಿರದಲ್ಲಿ 483 ಶಿಬಿರಾರ್ಥಿಗಳು ನೋಂದಣೀ ಮಾಡಿದ್ದಾರೆ. ಕುಣಗಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಶಿಬಿರವು 9ನೇ ಶಿಬಿರವಾಗಿದೆ. ಎಲ್ಲಾ ಶಿಬಿರಗಳಿಂದ 3272 ಶಿಬಿರಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಶಿಬಿರದ 10ನೇ ಆರೋಗ್ಯ ಮೇಳವನ್ನು ಕುದುರು ಗ್ರಾಮದಲ್ಲಿ ಮುಂದಿನ ತಿಂಗಳು 2ನೇ ಭಾನುವಾರ ಆಯೋಜಿಸಲಾಗಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಕೊಳ್ಳೇಗಾಲ, ಯಳಂದೂರು, ಸಂತೇಮರಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಇಸಿಜಿ ಯಂತ್ರದ ಕೊರತೆ ಇದ್ದು, ಕೂಡಲೇ ನನ್ನ ಶಾಸಕರ ಮಾಸಿಕ ವೇತನದಿಂದ ಒಂದು ವಾರದ ಒಳಗಾಗಿ ಯಂತ್ರವನ್ನು ಖರೀದಿಸಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಗುವುದು ಎಂದು ಘೋಷಣೆ ಮಾಡಿದರು.

Advertisement

ಗ್ರಾಮಸ್ಥರು ಆರೋಗ್ಯವಾಗಿದ್ದರೆ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಅನಾರೋಗ್ಯದ ಸಂದರ್ಭದಲ್ಲಿ ರೋಗಿಗಳು ದೇವರ ಮೊರೆ ಮತ್ತು ಪ್ರವಾಸ ಹೋಗುವುದನ್ನು ಬಿಟ್ಟು ಆರೋಗ್ಯ ಕಾಪಾಡಿಕೊಂಡು ಬಳಿಕ ದೇವರ ಮತ್ತು ಇತರ ಪ್ರವಾಸ ಕೈಗೊಳ್ಳುವ ಮೂಲಕ ಮೂಢನಂಬಿಕೆ ಬಿಡಬೇಕು ಎಂದರು.

ಬೆಂಗಳೂರಿನ ಆದಿಚುಂಚನಗಿರಿ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಎಂ.ಶಿವಕುಮಾರ್‌ ಮಾತನಾಡಿ, ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸವನ್ನು ಜೀವನದಲ್ಲಿ ರೂಢಿಸಿಕೊಂಡರೆ ಮೇಲೆ ಬರಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ, ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಕ್ಷೇತ್ರ ಉಸ್ತುವಾರಿ ಸಿದ್ದರಾಜು, ಕಾರ್ಯದರ್ಶಿ ಜಗದೀಶ್‌, ಬ್ಲಾಕ್‌ ಮಟ್ಟದ ಉಸ್ತುವಾರಿ ವಿಜಯರಾಜ್‌, ವೈದ್ಯರಾದ ಡಾ. ತ್ರೀವೇಣಿ, ಡಾ. ಶಾಂ ಪ್ರಸಾದ್‌, ಡಾ. ದಿವಾಕರ್‌, ಡಾ. ಆನಂದ್‌, ಡಾ. ಎಂ ಟೀನಾ, ಡಾ. ಲಿಂಗರಾಜು, ಡಾ. ಲಾವಣ್ಯ, ಸರ್ಕಲ್‌ ಇನ್ಸ್‌ಪೆಕ್ಟರ್‌ ಶ್ರೀಕಾಂತ್‌, ಎಸೈ ಅಶೋಕ್‌, ಶಾಲೆಯ ಮುಖ್ಯ ಶಿಕ್ಷಕಿ ಸಿದ್ದಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next