Advertisement
1. ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್‌ರವರು 1897ರ ಜನವರಿ 23ರಂದು ಹುಟ್ಟಿದರು.2. ಅವರನ್ನು ಎಲ್ಲರೂ ಪ್ರೀತಿಯಿಂದ “ನೇತಾಜಿ’ ಎಂದು ಕರೆಯುತ್ತಿದ್ದರು.
3. “ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂಬ ಕ್ರಾಂತಿಕಾರಿ ಘೋಷಣೆ ಸುಭಾಷರದಾಗಿತ್ತು.
4. ಬಾಲ್ಯದಿಂದಲೂ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಸುಭಾಷರು, ಇಂಡಿಯನ್ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ನಾಲ್ಕನೇ ರ್‍ಯಾಂಕ್ ಗಳಿಸಿದ್ದರು.
5. ಆದರೆ, ಬ್ರಿಟಿಷರ ಕೈ ಕೆಳಗೆ ಕೆಲಸ ಮಾಡಲು ಇಷ್ಟಪಡದೆ ಅವರು ತಮಗೆ ಸಿಕ್ಕ ಸರ್ಕಾರಿ ಹುದ್ದೆಯನ್ನು ತ್ಯಜಿಸಿದರು.
6. ಅಹಿಂಸೆಯಿಂದ ಈ ದೇಶಕ್ಕೆ ಸ್ವಾತಂತ್ರ್ಯ ತರಲು ಸಾಧ್ಯವಿಲ್ಲ ಎಂಬುದು ಸುಭಾಷ್ ಚಂದ್ರರ ನಿಲುವಾಗಿತ್ತು.
7. ಬ್ರಿಟಿಷರು ಜೈಲಿಗೆ ಹಾಕಿದಾಗ, ಅಲ್ಲಿಂದ ತಪ್ಪಿಸಿಕೊಂಡು ಸೋವಿಯತ್ ಯೂನಿಯನ್, ಜರ್ಮನಿ, ಜಪಾನ್ ದೇಶಗಳಿಗೆ ಹೋಗಿ, ಅಲ್ಲಿನವರ ಸಹಕಾರ ಕೋರಿದರು.
8. ವಿದೇಶದಲ್ಲಿ ಅವರು ಸಂಘಟಿಸಿದ ಸೇನೆಯೇ, “ಆಜಾದ್ ಹಿಂದ್ ಫೌಜ್’ (ಇಂಡಿಯನ್ ನ್ಯಾಷನಲ್ ಆರ್ಮಿ- ಐಎನ್‌ಎ).
9. ಸುಭಾಷರು, ಆಸ್ಟ್ರೇಲಿಯಾ ಮೂಲದ ಎಮಿಲಿ ಅವರನ್ನು ಮದುವೆಯಾದರು. ಈ ದಂಪತಿಯ ಪುತ್ರಿಯೇ, ಜರ್ಮನಿಯ ಅರ್ಥಶಾಸ್ತ್ರಜ್ಞೆ ಅನಿತಾ ಬೋಸ್.
10. ಅವರು, ಸ್ವಾಮಿ ವಿವೇಕಾನಂದ ಮತ್ತು ಭಗವದ್ಗೀತೆಯ ಬೋಧನೆಯ ಅನುಯಾಯಿಯಾಗಿದ್ದರು.