Advertisement

ಉಪ ನೋಂದಣಾಧಿಕಾರಿ ಕಚೇರಿ: ಅಪಾಯಕಾರಿ ಮರಗಳ ತೆರವು

12:27 PM May 30, 2018 | |

ಪುತ್ತೂರು : ಪುತ್ತೂರು ಉಪ ನೋಂದಣಾಧಿಕಾರಿ ಕಚೇರಿ ಕಾಂಪೌಂಡ್‌ ಒಳಗೆ ಶುಕ್ರವಾರ ರಾತ್ರಿಯ ಗಾಳಿ ಮಳೆಗೆ ಬುಡದಿಂದ ಕಿತ್ತು ವಾಲಿಕೊಂಡಿದ್ದ ಬೃಹತ್‌ ಗಾತ್ರದ ಮರಗಳನ್ನು ಅರಣ್ಯ ಇಲಾಖೆಯ ಸೂಚನೆಯಂತೆ ಮಂಗಳವಾರ ಬೆಳಗ್ಗೆ ಕಾರ್ಮಿಕರು ತೆರವುಗೊಳಿಸಿದರು.

Advertisement

ಉಪನೋಂದಣಾಧಿಕಾರಿ ಕಚೇರಿ ಆವರಣದ ಒಳಗಡೆಯ ವಿಸ್ತಾರವಾದ ಜಾಗದಲ್ಲಿ ದೊಡ್ಡ ಗಾತ್ರದ ಹಲವು ಮೇ ಫ್ಲವರ್ ಜಾತಿಯ ಮರಗಳಿದ್ದು, ಅದರಲ್ಲಿ ಕಚೇರಿ ಗೇಟಿನ ಬಳಿಯಿಂದ ಮರವೊಂದು ಬುಡ ಸಮೇತ ಕಿತ್ತು ಮತ್ತೂಂದು ಬೃಹತ್‌ ಗಾತ್ರದ ಮರಕ್ಕೆ ವಾಲಿಕೊಂಡಿತ್ತು. ಈ ಕಾರಣದಿಂದ ಎರಡೂ ಮರಗಳು ಪತ್ರಿಕಾಭವನ ಕಟ್ಟಡದ ಮೇಲೆ ಬಾಗಿದ್ದವು. 

ದಿನಂಪ್ರತಿ ನೂರಾರು ಮಂದಿ ಓಡಾಡುವ ಸ್ಥಳವಾಗಿದ್ದರಿಂದ ಮರವನ್ನು ತತ್‌ಕ್ಷಣ ತೆರವು ಗೊಳಿಸಲು ಕ್ರಮ ಕೈಗೊಳ್ಳುವಂತೆ ಉಪನೋಂದ ಣಾಧಿಕಾರಿ ನಗರಸಭೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ಮುಖೇನ ಮನವಿ ಮಾಡಿದ್ದರು. ಸೂಕ್ಷ್ಮ ರೀತಿಯ ಕಾರ್ಯಾಚರಣೆ ಮೂಲಕ ಮರವನ್ನು ತೆಗೆಯಬೇಕಾದ ಕಾರಣ ನಾಲ್ಕು ದಿನಗಳ ಬಳಿಕ ನುರಿತ ಕಾರ್ಮಿಕರ ಮೂಲಕ ತೆರವುಗೊ ಳಿಸಲಾಗಿದೆ. ಆ ಮೂಲಕ ಅಪಾಯವನ್ನು ದೂರ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next