Advertisement

Ayodhya ರಾಮಂದಿರ ಆವರಣದ ಅತ್ಯಾಕರ್ಷಕ ಫೋಟೋಗಳು!

05:15 PM Jan 08, 2024 | Team Udayavani |

ಅಯೋಧ್ಯೆ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ರಾಮ ಮಂದಿರದ ಅತ್ಯಾಕರ್ಷಕ ಫೋಟೋಗಳನ್ನು ಹಂಚಿಕೊಂಡಿದೆ. ರಾತ್ರಿ ಹೊತ್ತಿನಲ್ಲಿ ಬೆಳಕಿನಲ್ಲಿ ಕಂಗೊಳಿಸುವ ದೇವಾಲಯದ ಸುಂದರ ಚಿತ್ರಣಗಳನ್ನು ಹಂಚಿಕೊಂಡಿದೆ.

Advertisement

ದೇವಾಲಯದ ಆವರಣದಲ್ಲಿರುವ ಕುಬೇರ್ ಕೋಟೆಯಲ್ಲಿ ಸ್ಥಾಪಿಸಲಾದ ರಾಮಾಯಣದ ಮಹತ್ವದ ಪಾತ್ರವಾದ ಜಟಾಯುವಿನ ಶಿಲ್ಪದ ಚಿತ್ರಗಳನ್ನು ಕಾಣಬಹುದಾಗಿದೆ.ರಾತ್ರಿಯ ಸಮಯದಲ್ಲಿ ದೇವಾಲಯದ ಕಂಬಗಳು ಮತ್ತು ಗೋಡೆಗಳಲ್ಲಿ ದೇವತೆಗಳ ಸೊಗಸಾದ ಕೆತ್ತನೆಯ ಚಿತ್ರಗಳನ್ನು ಕಾಣಬಹುದಾಗಿದೆ.

ಕಳೆದ ತಿಂಗಳು, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮತ್ತು ವಿಎಚ್‌ಪಿ ನಾಯಕ ಚಂಪತ್ ರಾಯ್ ಅವರು ದೇವಾಲಯದ ಗರ್ಭಗುಡಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ, ರಾಮಲಲ್ಲಾನ ವಿಗ್ರಹವನ್ನು ಹೊಸದಾಗಿ ನಿರ್ಮಿಸಲಾದ ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗುತ್ತದೆ ಆ ಬಳಿಕ ಸಾರ್ವಜನಿಕ ದರ್ಶನಕ್ಕೆ ಅವಕಾಶಕೊಡಲಾಗುವುದು ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮ ಅಥವಾ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ರಾಮಮಂದಿರ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ.

Advertisement

ದೇವಾಲಯದ ಟ್ರಸ್ಟ್‌ನ ಪವಿತ್ರ ಸಮಾರಂಭದ ಅತಿಥಿಗಳ ಪಟ್ಟಿಯಲ್ಲಿ 7,000 ಕ್ಕೂಹೆಚ್ಚು ಜನರು ಸೇರಿದ್ದಾರೆ, ಇದರಲ್ಲಿ ಕ್ರಿಕೆಟ್ ಐಕಾನ್‌ಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ, ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಬಿಲಿಯನೇರ್ ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next