Advertisement
ಈ ಅವಧಿಯಲ್ಲಿ ಕೇಂದ್ರ ಸರ್ಕಾರ ವಿವಾದಾತ್ಮಕ ವಕ್ಫ್ ತಿದ್ದುಪಡಿ ವಿಧೇಯಕ, ರಾಷ್ಟ್ರೀಯ ಸಹಕಾರ ವಿವಿ ಸ್ಥಾಪನೆ ಸೇರಿ 16 ವಿಧೇಯಕಗಳನ್ನು ಮಂಡಿಸಿ ಅಂಗೀಕಾರ ಪಡೆಯಲು ಮುಂದಾಗಿದೆ. ಈ ಪೈಕಿ 5 ಹೊಸ ವಿಧೇಯಕಗಳಾಗಿವೆ. ಪ್ರಸಕ್ತ ವಿತ್ತೀಯ ವರ್ಷಕ್ಕಾಗಿನ ಮೊದಲ ಹಂತದ ಪೂರಕ ಅಂದಾಜು ಅನುದಾನ ಮಂಡನೆ ಮತ್ತು ಚರ್ಚೆ ಇದೇ ಅಧಿವೇಶನದಲ್ಲಿ ನಡೆಯುವ ಸಾಧ್ಯತೆಗಳಿವೆ.
ಅಧಿವೇಶನದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಭಾನುವಾರ ಸರ್ವಪಕ್ಷ ಸಭೆ ನಡೆಯಲಿದೆ. ಅಲ್ಲಿ ಸುಗಮ ಕಲಾಪ ನಡೆಸುವುದು, ದೇಶಕ್ಕೆ ಸಂವಿಧಾನ ಸ್ವೀಕರಿಸಿ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಬೇಕಾದ ಕಾರ್ಯಕ್ರಮ ಬಗ್ಗೆ ಪ್ರಮುಖ ಪಕ್ಷಗಳ ಜತೆಗೆ ಸರ್ಕಾರ ಸಮಾಲೋಚನೆ ನಡೆಯಲಿದೆ.