Advertisement

ಸ್ಟರಕ್‌ ರಸ್ತೆ ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ

11:57 AM Jan 07, 2018 | Team Udayavani |

ಫಳ್ನೀರ್‌ : ಇಲ್ಲಿನ ಸ್ಟರಕ್‌ ರಸ್ತೆ ಡಾಮರು ಕಾಮಗಾರಿ ಹಾಗೂ ಫುಟ್‌ ಪಾತ್‌ ನಿರ್ಮಾಣಕ್ಕೆ ಶುಕ್ರವಾರ ಶಾಸಕ ಜೆ. ಆರ್‌. ಲೋಬೋ ಹಾಗೂ ಮೇಯರ್‌ ಕವಿತಾ ಸನಿಲ್‌ ಶಿಲಾನ್ಯಾಸಗೈದರು. 

Advertisement

ಈ ಸಂದರ್ಭ ಮಾತನಾಡಿದ ಶಾಸಕ ಲೋಬೋ ಅವರು, ಬಹಳ ವರ್ಷಗಳಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ಹಂಬಲ ಪಾಲಿಕೆಗೆ ಇತ್ತು. ಆ ಕನಸು ನನಸಾಗುವ ಕಾಲ ಪಕ್ಷವಾಗಿದೆ. ಇದೀಗ ಪ್ರೀಮಿಯಮ್‌ ಅಫೈರ್‌ ನಿಧಿಯಿಂದ ಸುಮಾರು 1.90 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆಯು ಅಭಿವೃದ್ಧಿಯಾಗಲಿದೆ. ಈ ರಸ್ತೆಯು ಅತೀ ಮುಖ್ಯ ರಸ್ತೆಯಾಗಿದ್ದು, ಇದು ಮಂಗಳೂರು ಸೆಂಟ್ರಲ್‌ ರೈಲ್ವೇ ಸ್ಟೇಷನ್‌ಗೆ ಹೋಗುವ ಜನರಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಮನಪಾ ನಗರ ಯೋಜನೆ ಅಧ್ಯಕ್ಷ ಅಬ್ದುಲ್‌ ರವೂಫ್‌, ಆರೋಗ್ಯ ಸಮಿತಿ ಅಧ್ಯಕ್ಷೆ ನಾಗವೇಣಿ, ಕಾರ್ಪೊರೇಟರ್‌ ಎ.ಸಿ. ವಿನಯ್‌ರಾಜ್‌, ಮುಖ್ಯ ಸಚೇತಕ ಶಶಿಧರ ಹೆಗಡೆ, ಮಾಜಿ ಕಾರ್ಪೊರೇಟರ್‌ ಗಳಾದ ಸುರೇಶ್‌ ಬಾಬು, ರಾಮಚಂದ್ರ ಕರ್ಕೇರ, ಧರ್ಮಣ್ಣ ನಾೖಕ, ಕೆಎಸ್‌ಆರ್‌ ಟಿಸಿ ನಿರ್ದೇಶಕ ಟಿ. ಕೆ. ಸುಧೀರ್‌ ಯುವ ಕಾಂಗ್ರೆಸ್‌ ವಾರ್ಡ್‌ ಅಧ್ಯಕ್ಷ ತೌಫೀಕ್‌, ಉಪ ಆಯುಕ್ತ (ಅಭಿವೃದ್ಧಿ) ಲಿಂಗೇಗೌಡ, ಕಾರ್ಯಪಾಲಕ ಅಭಿಯಂತರ ಗುರುರಾಜ್‌, ಮರಳ ಹಳ್ಳಿ ಸಹಾಯಕ ಅಭಿಯಂತರ ವಿಶಾಲನಾಥ, ಕಿರಿಯ ಅಭಿಯಂತಕ ರಘುಪಾಲ, ಗುತ್ತಿಗೆದಾರ ಜಸೀರುದ್ದೀನ್‌ ಮೊದಲಾದವರು ಉಪಸ್ಥಿತರಿದ್ದರು.

ಸುಸಜ್ಜಿತ ರಸ್ತೆ 
ಸುಮಾರು 480 ಮೀಟರ್‌ ಉದ್ದ, 12 ಮೀಟರ್‌ ವಿಸ್ತರಿಸಲಿರುವ ಈ ರಸ್ತೆಯ ಅಭಿವೃದ್ಧಿಗೆ ಸ್ಥಳೀಯವಾಗಿ ವಾಸಿಸುತ್ತಿರುವ ಅನೇಕ ಜನರ ಸಹಕಾರವಿದೆ. ಅವರ ಸೇವೆಯನ್ನು
ನಾವು ಮರೆಯುವಂತಿಲ್ಲ. ರಸ್ತೆಯ ಬದಿಯಲ್ಲಿ ಫ‌ುಟ್‌ಪಾತ್‌ ಹಾಗೂ ಮಳೆನೀರು ಹರಿಯಲು ತೋಡು ಕೂಡ ನಿರ್ಮಾಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next