Advertisement
ಹೊಲದಲ್ಲಿ ಬಿತ್ತುವ ಬೀಜಗಳು ಚಿಗುರಿ ಸಸಿಯಾಗಿ ಮರವಾಗಲು ಸಕಾಲದಲ್ಲಿ ಗೊಬ್ಬರ, ನೀರು, ಬಿಸಿಲು, ರಕ್ಷಣೆ ಇವೆಲ್ಲಾ ಆವಶ್ಯಕ. ಅದರಲ್ಲೂ ಕೆಲವೊಂದು ಸಸಿಗಳ ಆರೈಕೆಗೆ ವಿಶೇಷ ಜಾಗೃತಿ ಬೇಕಾಗುತ್ತದೆ. ಅವುಗಳು ಬಲು ಸೂಕ್ಷ್ಮವಾಗಿರುತ್ತವೆ. ಅಂತೆಯೇ ಚೆನ್ನಾಗಿ ಬೆಳೆಯುತ್ತಿದ್ದ ಗಿಡವೊಂದು ಹೇಗೋ ಘಾತಗೊಂಡು ತುಸು ಮುರಿದೂ ಬೀಳಬಹುದು. ಅಂಥ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಅದನ್ನು ಕಾಳಜಿಯಿಂದ ನೋಡಿಕೊಂಡರೆ ಅದೂ ಮತ್ತೆ ಚಿಗುರಿಕೊಂಡು ಹೆಮ್ಮರವಾಗಿ ಬೆಳೆದು ಫಲಗಳಿಂದ ತುಂಬಿ ತುಳುಕಬಲ್ಲುದು. ಹೀಗೆಯೇ ಹುಟ್ಟುವಾಗಲೋ ಇಲ್ಲ, ನಡುವೆ ಎರಗುವ ಅಪಘಾತದಿಂದಲೋ ದೈಹಿಕ/ಮಾನಸಿಕ ನ್ಯೂನತೆಯಿಂದ ಬಳಲುವವರಿಗೆ ಬೆಂಬಲ, ಸಹಕಾರ ಎಳವೆಯಲ್ಲೇ ಸಿಗುತ್ತ ಹೋದರೆ ಬಹುಬೇಗ ಚೇತರಿಸಿಕೊಂಡು ಅವರು ಪುಟಿದೇಳಬಲ್ಲರು. ಪುಟ್ಟಮಕ್ಕಳಿಗೆ ಫ್ಯಾಕ್ಚರ್ ಆದರೆ ಅವರ ಎಲುಬು ಬಹುಬೇಗ ಕೂಡಿಕೊಳ್ಳುತ್ತದೆ ಎನ್ನುತ್ತಾರೆ ವೈದ್ಯರು. ಅದೇ ದೊಡ್ಡವರ/ವೃದ್ಧರ ಎಲುಬು ಕೂಡುವುದು ಬಹಳ ನಿಧಾನ. ಅಂತೆಯೇ ಎಳವೆಯಲ್ಲೇ ಮಕ್ಕಳಲ್ಲಿರುವ ನ್ಯೂನ ಕಂಡುಕೊಂಡು, ಅವರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನರಿತು, ಅವುಗಳ ಸಮೇತ ಮಗುವನ್ನು ಒಪ್ಪಿಕೊಂಡರೆ ಅರ್ಧ ಸಮಸ್ಯೆಗೆ ಪರಿಹಾರವನ್ನು ನಾವು ಕಂಡುಕೊಂಡಂತೆಯೇ. ಉಳಿದರ್ಧ ಪರಿಹಾರಕ್ಕೆ ನಮ್ಮ ಸಹನೆ, ಪರಿಶ್ರಮ, ಮನೋಬಲ ಅತ್ಯಗತ್ಯ. ಸಮಸ್ಯೆಗಳ ಗುರುತಿಸುವಿಕೆ, ಸೂಕ್ತ ರೀತಿಯ ಚಿಕಿತ್ಸೆ, ಬೆಂಬಲ ಎಷ್ಟು ಬೇಗ ಸಿಗುವುದೋ ಅಷ್ಟು ಬೇಗ ಚೇತರಿಕೆ ಸಾಧ್ಯ.
Related Articles
Advertisement
ಹೊರಗಣ್ಣಿಗೆ ಕಾಣಿಸಿದ ಭಗವಂತ ಹೆತ್ತವರ, ಸಂಗಾತಿಯ, ಸ್ನೇಹಿತರ, ಆಪೆ¤àಷ್ಟರ, ಆತ್ಮೀಯರ, ನೆರಳಂತೇ ಹಿಂಬಾಲಿಸಿ ನಮ್ಮ ರಕ್ಷಿಸುವ ಸಾಕು ಪ್ರಾಣಿಗಳ… ಹೀಗೆ ಹತ್ತು ಹಲವು ರೂಪದಲ್ಲಿ ನಮಗಾಸರೆ ನೀಡಿ, ಬದುಕಿನ ಪಾಠಗಳನ್ನು ಆಗಾಗ ಕಲಿಸುತ್ತಿರುತ್ತಾನೆ. ಅಂಥ ಶಕ್ತಿ ಸ್ವರೂಪಿಯಾದ ಚೈತ್ಯನದ ಇರುವಿಕೆಯನ್ನು ನಂಬಿ, ಅಪ್ಪಿಕೊಂಡು ಆಗಾಗ ಕುಸಿಯುವ ಮನೋಬಲವನ್ನು ಒಗ್ಗೂಡಿಸಿಕೊಂಡು ಒಂದು ಹೆಜ್ಜೆಯನ್ನಿಟ್ಟರೂ ಸಾಕು, ಸಾವಿರ ಹೆಜ್ಜೆಯ ರೂಪದಲ್ಲಿ ನಮ್ಮೊಳಗಿನ ಆತ್ಮವಿಶ್ವಾಸ ವೃದ್ಧಿಸುತ್ತ ಹೋಗುತ್ತದೆ. ಈ ಹೋರಾಟ ನಿರಂತರ ಪ್ರಕ್ರಿಯೆ. ಇದೇ ಬದುಕು. ಸೋತ, ದುಃಖೀತ, ಹೆಜ್ಜೆ ಕುಸಿಯುತ್ತಿರುವ
ಕನಸೊಡೆದ ಪಯಣಿಗನಿಗೆ-
ಅವನು ನಿರಂತರ ಜೊತೆಗಾರ
ಅದು ಅವನ ಭಾಗ್ಯ.
(ಲಕ್ಷ್ಮೀಶ ತೋಳ್ಪಾಡಿಯವರ ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ ಪುಸ್ತಕದಿಂದ) ಕೊನೆಯಿರದ ಕೊನೆಯಲ್ಲಿ…
ತನ್ನ ತಾನ ಎಂದರೆ ನನ್ನೊಳಗಿನ ಸಣ್ಣ ಗುನುಗು/ಹಾಡು. ನನ್ನ ದೈಹಿಕ ನ್ಯೂನತೆಗಳನ್ನು ಮೀರಿ ನಾನು ಬದುಕನ್ನು ಕಟ್ಟಿಕೊಳ್ಳುವಾಗ ಎದುರಿಸಿದ ಸಮಸ್ಯೆಗಳನ್ನು, ಸವಾಲುಗಳನ್ನು, ಕಂಡುಕೊಂಡು ಅಲ್ಪ-ಸ್ವಲ್ಪ ಪರಿಹಾರಗಳನ್ನು, ಸಮಾಜ/ನೆರೆ-ಕೆರೆ/ಮನೆಯವರು ಇವರೆಲ್ಲ ನ್ಯೂನತೆಯುಳ್ಳವರ ಜೊತೆ ಹೇಗೆ ಸಹಕರಿಸಿದರೆ ಚೆನ್ನ, ನಾವು ಹೇಗೆ ಅವರಿಗೆ ಬೆಂಬಲವಾಗಿ ನಿಂತು ಧೈರ್ಯ ತುಂಬಬಹುದು ಎಂಬುದನ್ನು ವಿವರಿಸಿದ್ದೇನೆ. ಅಲ್ಲದೆ, ಅಂಗವಿಕಲರು ಹೇಗೆÇÉಾ ತಿರಸ್ಕಾರಕ್ಕೆ, ಅವಹೇಳನಕ್ಕೆ, ಅವಗಣನೆಗೆ, ಹಕ್ಕು ಚ್ಯುತಿಗೆ ಒಳಗಾಗುತ್ತಿ¨ªಾರೆ; ಯಾವ ರೀತಿಯಲ್ಲಿ, ಯಾವೆಲ್ಲ ಕ್ಷೇತ್ರಗಳಲ್ಲಿ ಸಮಗ್ರ ಬದಲಾವಣೆ/ಸುಧಾರಣೆ ಅತ್ಯಗತ್ಯ – ಎಂಬುದನ್ನು ಈ ಅಂಕಣದ ಮೂಲಕ ಆದಷ್ಟು ವಿವರಿಸಿದ್ದೇನೆ. ಬದಲಾವಣೆ ದಿಢೀರ್ ಅಸಾಧ್ಯ. ಆದರೆ, ಈ ಬರಹಗಳಿಂದ ಸಾವಿರದಲ್ಲಿ ಓರ್ವರಾದರೂ ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡು ಬದಲಾವಣೆಯತ್ತ ಒಂದು ಹೆಜ್ಜೆಯಿಟ್ಟರೆ ಎಷ್ಟೋ ನೊಂದ ಜೀವಿಗಳ ಬದುಕು ತುಸು ತಂಪು ಕಾಣಬಹುದೆಂಬ ಆಶಾವಾದ ನನ್ನದು.
(ಮುಕ್ತಾಯ) – ತೇಜಸ್ವಿನಿ ಹೆಗಡೆ